T-20 ವಿಶ್ವಕಪ್ ಗೆ ರಿಷಬ್ ಪಂತ್ ಹಾಗು ದಿನೇಶ್ ಕಾರ್ತಿಕ್ ನಡುವೆ ಯಾರನ್ನು ಆಡಿಸಬೇಕು ಎನ್ನುವ ಪ್ರಶ್ನೆಗೆ ಇಂಟೆರೆಸ್ಟಿಂಗ್ ಉತ್ತರ ಕೊಟ್ಟ ಸುರೇಶ ರೈನಾ.

138

ಮುಂಬರುವ ಟಿ-೨೦ ವಿಶ್ವಕಪ್ ಗೆ ಭಾರತ ತಂಡ ತಯಾರಾಗಿದ್ದು. ದಿನೇಶ್ ಕಾರ್ತಿಕ್ ಅವರದ್ದು ಕೊನೆಯ ಸರಣಿ ಎಂದು ಕೂಡ ಹೇಳಲಾಗುತ್ತಿದೆ. ಹಾಗೇನೇ ದಿನೇಶ್ ಕಾರ್ತಿಕ್ ಅವರು ವಿಕೆಟ್ ಕೀಪರ್ ಆಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದ್ದರಿಂದ ರಿಷಬ್ ಪಂತ್ ಗೆ ತಂಡದಲ್ಲಿ ಸ್ಥಾನ ಸಿಗುವ ಚಾನ್ಸ್ ಬಹಳ ಕಡಿಮೆ ಇದೆ ಎಂದರೆ ತಪ್ಪಾಗಲಾರದು. ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿಯೇ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೇನೇ ರಿಷಬ್ ಪಂತ್ ಕೂಡ ಅವರ ಪ್ರದರ್ಶನಕ್ಕಾಗಿಯೇ ಇಂದು ಚರ್ಚೆಯಲ್ಲಿರುವುದು.

ರಿಷಬ್ ಪಂತ್ ಅವರ ಇತ್ತೀಚಿನ ಟಿ-೨೦ ಪ್ರದರ್ಶನ ನೋಡಿದರೆ ಅವರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಬಹಳ ಕಡಿಮೆ ಇದೆ ಎಂದರೆ ತಪ್ಪಾಗಲಾರದು. ಅಲ್ಲದೆ ಮಾಧ್ಯಮ ಕ್ರಮಾಂಕದಲ್ಲಿ ಎಲ್ಲ ಸ್ಥಾನ ಕೂಡ ತುಂಬಿದೆ. ರಿಷಬ್ ಪಂತ್ ಒಬ್ಬರು ಎಡಗೈ ಬ್ಯಾಟ್ಸಮನ್ ಎನ್ನುವ ಒಂದೇ ಕಾರಣಕ್ಕೆ ತಂಡದಲ್ಲಿ ಸ್ಥಾನ ಪಡೆಯಬಹುದು ಅಷ್ಟೇ ವಿನಃ ಬೇರೆ ಯಾವ ಕಾರಣಕ್ಕೂ ತಂಡದಲ್ಲಿ ಕಾಣಿಸಲು ಸಾಧ್ಯವಿಲ್ಲ. ಇದೀಗ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಬೇಕೆಂದು ಪಂತ್ ಪರವಾಗಿ ಬ್ಯಾಟ್ ಬಿಸಿದ್ದಾರೆ ಭಾರತ ಮಾಜಿ ಎಡಗೈ ಬ್ಯಾಟ್ಸಮನ್ ಸುರೇಶ ರೈನಾ.

ಇದಕ್ಕೆ ಪೂರಕವಾಗಿ ೨೦೦೭ ರ ವಿಶ್ವಕಪ್ ಬಗ್ಗೆ ಮಾತಾಡುತ್ತ ಗಂಭೀರ್ ಹಾಗು ಯುವರಾಜ್ ಸಿಂಗ್ ಇಬ್ಬರು ಎಡಗೈ ಬ್ಯಾಟ್ಸಮನ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಇಬ್ಬರು ಉತ್ತಮ ರನ್ ಪೇರಿಸುವಲ್ಲಿ ಯಶಸ್ವಿ ಆಗಿದ್ದರು. ಗಂಭೀರ್ ಸೆಹವಾಗ್ ಜೊತೆ ಆರಂಭಿಕರಾಗಿ ಮಿಂಚಿದರೆ, ಯುವರಾಜ್ ಸಿಂಗ್ ಮಾಧ್ಯಮ ಕ್ರಮಾಂಕದಲ್ಲಿ ಮ್ಯಾಚ್ ವಿನ್ನರ್ ಆಗಿ ತಂಡವನ್ನು ಗೆಲ್ಲಿಸಿದ್ದಾರೆ ಎಂದು ಸುರೇಶ ರೈನಾ ಹೇಳಿದ್ದಾರೆ. ರಿಷಬ್ ಪಂತ್ ಹಾಗು ದಿನೇಶ್ ಕಾರ್ತಿಕ್ ನಡುವೆ ಯಾರನ್ನು ಆಯ್ಕೆ ಮಾಡಬೇಕು ಎಂದು ಕೇಳಿದಾಗ ಸುರೇಶ ರೈನಾ, ಕಾರ್ತಿಕ್ ಅವರ ಉತ್ತಮ ಫಾರಂ ಅಲ್ಲಿದ್ದಾರೆ. ಆದರೆ ರಿಷಬ್ ಪಂತ್ ಎಡಗೈ ಬ್ಯಾಟ್ಸಮನ್ ಅವರನ್ನು ತಂಡದಲ್ಲಿ ಸೇರಿಸುವುದರಿಂದ ಅದು ಎಕ್ಷ ಫ್ಯಾಕ್ಟರ್ ಆಗುತ್ತದೆ ಎಂದು ಹೇಳಿದ್ದಾರೆ.

ಸ್ವತಃ ಭಾರತ ತಂಡದ ಮ್ಯಾಚ್ ವಿನ್ನರ್ ಆಗಿದ್ದ ಸುರೇಶ ರೈನಾ ಪ್ರಕಾರ ರಿಷಬ್ ಪಂತ್ ಮಾಧ್ಯಮ ಕ್ರಮಾಂಕದಲ್ಲಿ ಉಳಿಯುವುದು ಭಾರತಕ್ಕೆ ಲಾಭವಾಗಲಿದೆ ಎಂದು ನಂಬಿದ್ದಾರೆ. ೧ ಬಾಲ್ ಅಲ್ಲಿ ೬ ರನ್ ಬೇಕಿದ್ದರೆ ರಿಷಬ್ ಪಂತ್ ಸಿಕ್ಸರ್ ಮೂಲಕ ಭಾರತ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸುರೇಶ ರೈನಾ ಹೇಳಿದ್ದಾರೆ. ರಿಷಬ್ ಗೆ ಮೊದಲ ಬಾಲ್ ಗೆ ಸಿಕ್ಸರ್ ಹೊಡೆಯುವುದು ಹೇಗೆ ಎಂದು ತಿಳಿದಿದೆ ಎಂದು ರೈನಾ ಪಂತ್ ಬೆಂಬಲವಾಗಿ ನಿಂತಿದ್ದಾರೆ. ನಿಮ್ಮ ಪ್ರಕಾರ ಯಾರು ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ತಿಳಿಸಿ.

Leave A Reply

Your email address will not be published.