ಟಾಟಾ ನಡೆಗೆ ಬೆಚ್ಚಿದ ಇವಿ ಕಂಪನಿ, 270 ಕಿ.ಮೀ ಮೈಲೇಜ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್‌ಗೆ ತಯಾರಿ! ಯಾವಾಗ ಲಾಂಚ್ ಆಗಲಿದೆ?ಬೆಲೆ ಎಷ್ಟು? ಇಲ್ಲಿದೆ ಮಾಹಿತಿ.
ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರುಕಟ್ಟೆ ದಿನೇ ದಿನೇ ಹೆಚ್ಚುತ್ತಲೇ ಇದ್ದು. ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಸಣ್ಣ ಸಣ್ಣ ಕಂಪನಿಗಳು ಕೂಡ ಇವಿ ಸ್ಕೂಟರ್ ಗಳನ್ನ ತಯಾರಿಸುತ್ತಾ ಇದೆ. ಇದೀಗ ಇವೀ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವಂತ ಸುದ್ದಿ ಬಂದಿದೆ . ಹೌದು ದೇಶದ ಪ್ರತಿಷ್ಠಿತ ಕಂಪನಿಯಾದ ಟಾಟಾ ಮೋಟಾರ್ಸ್ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ತರುವ ಬಗೆಗೆ ಹೊಸ ಸುದ್ದಿಯನ್ನು ಮಾಡಿದೆ .
ಶೀಘ್ರದಲ್ಲೇ ಈ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಎಂದು ಟಾಟಾ ಹೇಳಿದೆ. ಆದರೆ ಅದಕ್ಕೂ ಮೊದಲು ಅದರ ವಿವರಗಳು ಸೋರಿಕೆಯಾಗಿವೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಎಲ್ಲಾ ವೈಶಿಷ್ಟ್ಯಗಳು ಮತ್ತು ಅದರ ಬೆಲೆ ಇತರ ಪ್ರಮುಖ ಮಾಹಿತಿಗಳು ಕಾಣಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ಶಕ್ತಿಶಾಲಿ ಮೋಟಾರ್‌ನೊಂದಿಗೆ ಬರಲಿದೆ. ಇದು 270 ಕಿಲೋಮೀಟರ್ ದೂರದವರೆಗೆ ಪ್ರಯಾಣಿಸಬಲ್ಲದು. ಟಾಟಾ ಎಲೆಕ್ಟ್ರಿಕ್ ಸ್ಕೂಟರ್‌ನ ಶಕ್ತಿಶಾಲಿ ಮೋಟಾರ್ 3kW ಪಿಕ್ ಆಪ್ ಅನ್ನು ಹೊಂದಿದೆ.
ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟಿಎಫ್‌ಟಿ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಎಲ್‌ಇಡಿ ಹೆಡ್‌ಲೈಟ್, ಬೂಟ್ ಅಂಡರ್ ಸ್ಪೇಸ್, ಆರಾಮದಾಯಕ ಸೀಟು, ಫ್ರಂಟ್ ಡಿಸ್ಕ್ ಬ್ರೇಕ್, ಟ್ಯೂಬ್‌ಲೆಸ್ ಟೈರ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ . ಇದರಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಪ್ಯಾಕ್ ಪೂರ್ಣ ಚಾರ್ಜ್ ಆಗಲು 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ .ಈ ಸ್ಕೂಟರ್ ಅನ್ನು ರೂ. 67 ಸಾವಿರಕ್ಕೆ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಬೆಲೆಯ ಬಗ್ಗೆ ಕಂಪನಿಯಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.