Business

ಈ 5 ಅಧಿಕ ಮೌಲ್ಯದ ನಗದು ವಹಿವಾಟುಗಳ ಮೇಲೆ ಆದಾಯ ತೆರಿಗೆ ನೋಟಿಸ್ ಕಳುಹಿಸಬಹುದು. ಈ ಮಾಹಿತಿ ಇಂದೇ ತಿಳಿಯಿರಿ.

ಡಿಜಿಟಲ್ ಇಂಡಿಯಾ ಸಮಯದಲ್ಲೂ ಕೂಡ ಅನೇಕರು ನಗದು ವ್ಯವಹಾರ ನಡೆಸಲು ಇಷ್ಟ ಪಡುತ್ತಾರೆ. ಸಣ್ಣ ಸಣ್ಣ ನಗದು ವ್ಯವಹಾರ ಗಳಿಂದ ಯಾವುದೇ ಸಮಸ್ಯೆ ಇರಲ್ಲ ಆದರೆ ದೊಡ್ಡ ನಗದು ವ್ಯವಹಾರ ನಡೆದರೆ ನಿಮಗೆ ಸಮಸ್ಯೆ ಬರಬಹುದು. ಸಣ್ಣ ಸುಳಿವು ಕೂಡ ತೆರಿಗೆ ಇಲಾಖೆ ಯ ಕದ ತಟ್ಟುತ್ತದೆ. ಇಂತವರು ಆದಾಯ ತೆರಿಗೆ ರೇಡಾರ್ ಗೆ ಬರುತ್ತಾರೆ. ಹಾಗಾಗಿ ನೀವು ಈ 5 ಅಧಿಕ ನಗದು ವ್ಯವಹಾರಗಳನ್ನು ನಿಲ್ಲಿಸಿದರೆ ನಿಮಗೆ ಉತ್ತಮ.

1. ಹೆಚ್ಚಿನ ನಗದು ಠೇವಣಿ ಮಾಡುವುದು.

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ನಿಯಮಗಳ ಪ್ರಕಾರ, ಯಾರಾದರೂ ಒಂದು ವರ್ಷದಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಠೇವಣಿ ಮಾಡಿದರೆ ಅದರ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ. ಈ ಹಣವನ್ನು ಒಂದು ಖಾತೆ ಅಥವಾ ಹೆಚ್ಚಿನ ಖಾತೆಗಳಲ್ಲಿ ಜಮಾ ಮಾಡಿರಬಹುದು. ನೀವು ನಿಗದಿತ ಮಿತಿಗಿಂತ ಹೆಚ್ಚಿನ ಹಣ ಠೇವಣಿ ಮಾಡಿದರೆ ಆದಾಯ ಇಲಾಖೆ ನಿಮಗೆ ಈ ನಗದಿನ ಬಗ್ಗೆ ಹಾಗು ಅದರ ಮೂಲದ ಬಗ್ಗೆ ಮಾಹಿತಿ ಕೇಳಬಹುದು.

2. ನಗದನ್ನು ಫಿಕ್ಸೆಡ್ ಡೆಪಾಸಿಟ್ ಮಾಡುವುದು.

ನೀವು ಒಂದು ಆರ್ಥಿಕ ವರ್ಷದಲ್ಲಿ ಹೇಗೆ 10 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಉಳಿತಾಯ ಖಾತೆಯಲ್ಲಿ ಜಮಾ ಮಾಡಿದಾಗ ನೋಟೀಸ್ ಬರುವ ಸಾಧ್ಯತೆ ಇದೆಯೋ, ಹಾಗೇನೇ ಒಂದು ಹಣಕಾಸಿನ ವರ್ಷದಲ್ಲಿ ಫಿಕ್ಸೆಡ್ ಡೆಪಾಸಿಟ್ ಖಾತೆಯಲ್ಲಿ ಕೂಡ 10 ಲಕ್ಷಕ್ಕಿಂತ ಹೆಚ್ಚಿನ ನಗದು ಠೇವಣಿ ಮಾಡಿದರೆ ಆದಾಯ ಇಲಾಖೆ ಇಂದ ನೋಟೀಸ್ ಬರುವ ಸಾಧ್ಯತೆ ಇದೆ.

3. ಪ್ರಾಪರ್ಟಿ ಖರೀದಿಯಲ್ಲಿ ನಗದು ವ್ಯವಹಾರ. ಪ್ರಾಪರ್ಟಿ ಖರೀದಿ ಮಾಡುವಾಗ 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ವಹಿವಾಟು ನಡೆಸಿದರೆ ಪ್ರಾಪರ್ಟಿ ರಿಜಿಸ್ಟ್ರಾರ್ ಈ ಮಾಹಿತಿ ಆದಾಯ ಇಲಾಖೆ ಗೆ ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮಗೆ ಆದಾಯ ಇಲಾಖೆಯಿಂದ ನೋಟೀಸ್ ಬರುವ ಸಾಧ್ಯತೆ ಬಹಳ ಹೆಚ್ಚಿದೆ.

4. ಕ್ರೆಡಿಟ್ ಕಾರ್ಡ್ ಮೊತ್ತ ಕ್ಯಾಶ್ ಅಲ್ಲಿ ಪಾವತಿ.

ನಿಮ್ಮ ಕ್ರೆಡಿಟ್ ಕಾರ್ಡ್ ಮೊತ್ತ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದ್ದರೆ ಮತ್ತು ಅದನ್ನು ನೀವು ನಗದಿನ ರೂಪದಲ್ಲಿ ಪಾವತಿ ಮಾಡಿದರೆ, ನಿಮ್ಮಲ್ಲಿ ಈ ಹಣ ದ ಮೂಲ ಯಾವುದು ಎಂದು ಆದಾಯ ಇಲಾಖೆ ಕೇಳಬಹುದು. ನೀವು ಹಣಕಾಸು ವರ್ಷದಲ್ಲಿ ಯಾವುದೇ ಪಾವತಿ 10 ಲಕ್ಷಕಿಂತ ಹೆಚಿನದ ನಗದಿನ ರೂಪದಲ್ಲಿ ಮಾಡಿದರೆ ಆದಾಯ ತೆರಿಗೆ ಇಲಾಖೆ ನಿಮಗೆ ಮೂಲ ಕೇಳುವ ಸಾಧ್ಯತೆ ಇದೆ.

cash deposit limit

5. ಮ್ಯೂಚುಯಲ್ ಫಂಡ್, ಶೇರ್ ಮಾರುಕಟ್ಟೆಯಲ್ಲಿ ನಗದು. ಶೇರ್ ಗಳು, ಮ್ಯೂಚುಯಲ್ ಫಂಡ್, ಡಿಬೆಂಚರ್ ಅಥವಾ ಬಾಂಡ್ ಗಳನ್ನೂ ಖರೀದಿಸಲು ಹೆಚ್ಚಿನ ಪ್ರಮಾಣದ ಹಣವನ್ನ ಬಳಸಿದರೆ ಇದು ಆದಾಯ ತೆರಿಗೆ ಇಲಾಖೆಯನ್ನು ಎಚ್ಚರಿಸುತ್ತದೆ. ಈ ಸಮಯದಲ್ಲಿ ಆದಾಯ ಇಲಾಖೆ ನಿಮ್ಮ ಬಳಿ ಹಣದ ಮೂಲ ಕೇಳಬಹುದು.

Leave a Reply

Your email address will not be published. Required fields are marked *