ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಕೇಸ್ ಒಂದರ ವಾದ ವಿವಾದ ಸಂದರ್ಭ “ಇದೆ ಕಲಿಯುಗದ ಆರಂಭ” ಎಂದು ಹೇಳಿದರು! ಅಷ್ಟಕ್ಕೂ ಆ ಕೇಸ್ ಏನು?
ಇತ್ತೀಚಿನ ದಿನಗಳಲ್ಲಿ ಕೋರ್ಟ್ ವಿಷಯಗಳು ಬಹಳಷ್ಟು ಸದ್ದು ಮಾಡುತ್ತಿದೆ. ಎಲ್ಲಾ ಕಡೆ ಕೋರ್ಟ್ ನ ವಿಷಯಗಳದ್ದೇ ಚರ್ಚೆ. ಈಗ ಮತ್ತೊಂದು ಅಂತದೆ ಸುದ್ದಿ ಇದೀಗ ವೈರಲ್ ಆಗಿದೆ. ಅಲಹಾಬಾದ್ ಹೈಕೋರ್ಟ್ ನಲ್ಲಿ ಕಲಾಪದ ವೇಳೆ ನ್ಯಾಯಮೂರ್ತಿ ಗಳು ಕೇಸ್ ಒಂದರ ವಿಚಾರಣೆ ವೇಳೆ ಆರೋಪ ಪ್ರತ್ಯಾರೋಪ ಕೇಳಿ ಬೇಸ್ತು ಬಿದ್ದು ಇದೆ ಕಲಿಯುಗದ ಆರಂಭ ಇರಬೇಕು ಎಂದು ಹೇಳಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದು ಯಾಕೆ ಅಂತಹ ಕೇಸ್ ಆದರೂ ಯಾವುದು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗದರೆ ಏನು ಆ ಕೇಸ್ ನೋಡೋಣ.
ಸತಿ ಪತಿಯ ವಿಚ್ಛೇದನ ಕೇಸ್ ಅದು. ಸತಿ ಪತಿ ವಿಚ್ಛೇದನ ಸಾಮಾನ್ಯ ಅದರಲ್ಲಿ ಏನಿದೆ ವಿಶೇಷ ಎಂದು ಯೋಚಿಸಬಹುದು. ಆದರೆ ಇಲ್ಲಿ ಪತಿಗೆ 85 ವರ್ಷ ಸತಿಗೆ 75 ವರ್ಷ ಹೌದು ಅಚ್ಚರಿ ಎನಿಸಿದರೂ ಸತ್ಯ ಇದು. ಇವರ ವಿಚ್ಛೇದನ ಕೇಸ್ ನಲ್ಲಿ. ಪತಿಗೆ ಮಾಸಿಕ 35000 ಪೆನ್ಷನ್ ಬರುತ್ತದೆ. ಈ ಹಿಂದೆ ಕೆಳ ನ್ಯಾಯಾಲಯ ಪತ್ನಿಗೆ ಮಾಸಿಕ 5000/- ನೀಡುವಂತೆ ಹೇಳಿ ತೀರ್ಪು ಕೊಟ್ಟಿತ್ತು. ಆದರೆ ಪತ್ನಿ 5000/- ತನಗೆ ಸಾಲುವುದಿಲ್ಲ ಬದಲಾಗಿ ನನ್ನ ತಿಂಗಳ ಖರ್ಚಿಗೆ 15000/- ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
85 ವರ್ಷದ ಪ್ರಾಯದಲ್ಲಿ ವೈರಾಗ್ಯ ಜೀವನ ಅನುಭವಿಸುವ ಸಂದರ್ಭದಲ್ಲಿ ಈ ರೀತಿ ಹಣಕ್ಕಾಗಿ ತಕರಾರು ನಡೆಯುತ್ತಿದೆ. ಅದರಲ್ಲೂ ತನಗೆ ಇಷ್ಟೇ ಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದಾರೆ ಇದೆ ಅಲ್ಲವೇ ಕಲಿಯುಗದ ಆರಂಭ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದೀಗ ಈ ಹೇಳಿಕೆ ಸೋಷಿಯಲ್ ಮೀಡಿಯಾ ನಲ್ಲಿ ಬಹಳಷ್ಟು ವೈರಲ್ ಆಗಿದೆ.