ಮದುವೆ ಆಗಿ ಕೇವಲ 40 ದಿನಕ್ಕೆ ಡೈವೋರ್ಸ್ ಬೇಕು ಎಂದ ಪತ್ನಿ! ಕಾರಣ ಕೇಳಿದರೆ ವಿಚಿತ್ರ ಅನಿಸುತ್ತದೆ?

147

ಜೀವನದಲ್ಲಿ ಹಿರಿಯರು ಯಾವಾಗಲೂ ಹೇಳುತ್ತಾರೆ ಮದುವೆ ಎಂಬುವುದು ಒಂದೇ ಸಲ ಆಗುವುದು ಆದರೆ ದನ್ನು ಸರಿಯಾಗಿ ನೋಡಿ ಆಗಬೇಕು. ಕಟ್ಟಿಕೊಂಡವಳು ಕೊನೆ ವರೆಗೆ ಅಂತ ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಸಂಖ್ಯೆ ತೀರಾ ಹೆಚ್ಚಾಗಿದೆ. ಸಣ್ಣ ಪುಟ್ಟ ಕಾರಣಗಳಿಗೆಲ್ಲ ಡೈವೋರ್ಸ್ ಕೊಡುವ ಕಾಲ ಬಂದಿದೆ. ಈ ಒಂದು ಘಟನೆ ಕೂಡ ಹಾಗೆ ಎಂದೆನಿಸುತ್ತದೆ. ಯಾವುದೇ ಸಮಸ್ಯೆ ಇರಲಿ ಜೀವನದಲ್ಲಿ ಕೂತು ಮಾತಾಡಿಕೊಂಡರೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಕೂತು ಮಾತಾಡುವಷ್ಟು ತಾಳ್ಮೆ ಕಳೆದು ಕೊಂಡಿದ್ದಾರೆ ಈಗಿನ ಜನರು. ಹಾಗದರೆ ಏನಿದು ಘಟನೆ ಬನ್ನಿ ತಿಳಿಯೋಣ.

ಉತ್ತರ ಪ್ರದೇಶದ ಆಗ್ರಾದಲ್ಲಿ ನೆಲೆಸಿರುವ ದಂಪತಿಗಳು 40 ದಿನಗಳ ಹಿಂದಷ್ಟೇ ಮದುವೆ ಆಗಿದ್ದರು. ಆದರೆ ಇದೀಗ ಹೆಂಡತಿ ತನಗೆ ಪತಿಯ ಜೊತೆ ವಾಸಿಸಲು ಸಾಧ್ಯ ಇಲ್ಲ ಅದಕ್ಕಾಗಿ ತನಗೆ ಡೈವೋರ್ಸ್ ಬೇಕು ಎಂದು ಕೇಳಿಕೊಂಡಿದ್ದಾರೆ. ಹೌದು ಕಾರಣ ತನ್ನ ಪತಿ ಸರಿಯಾಗಿ ಸ್ನಾನ ಮಾಡುವುದಿಲ್ಲ ಎಂದು. ವಿಚಿತ್ರ ಎನಿಸಿದರೂ ಸತ್ಯ ಸಂಗತಿ . ತಿಂಗಳಿಗೆ ಒಂದೋ ಎರಡೋ ಬಾರಿ ಮಾತ್ರ ಸ್ನಾನ ಮಾಡುತ್ತಾನೆ . ಅದರಿಂದಾಗಿ ಆತನ ಮೈಯಿಂದ ವಿಚಿತ್ರ ವಾಸನೆ ಬರುತ್ತದೆ ಅದಕ್ಕಾಗಿ ತನಗೆ ಆತನ ಜೊತೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.

ಈ ಸಣ್ಣ ವಿಷಯ ಇಬ್ಬರೇ ಕೂತು ಸರಿಪಡಿಸ್ಕೊಳ್ಳಬಹುದಿತ್ತು ಆದರೂ ಇದನ್ನು ದೊಡ್ಡ ವಿಷಯದಂತೆ ಬಿಂಬಿಸಿ ಕೋರ್ಟ್ ಡೈವೋರ್ಸ್ ವರೆಗೂ ಬಂದಿದೆ. ವರದಿ ಪ್ರಕಾರ ಪತ್ನಿ ಗಂಡನ ಜೊತೆ ಗಲಾಟೆ ಮಾಡಿ ಇದೀಗ ತನ್ನ ಮನೆಗೆ ಹಿಂತಿರುಗಿದ್ದು ಡೈವೋರ್ಸ್ ಗೆ ಅಪ್ಲೈ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಎತ್ತ ಕಡೆ ಸಾಗುತ್ತಿದೆ ಸಮಾಜ ಎಂಬುದಕ್ಕೆ ಇಂತಹ ಕೆಲವು ಘಟನೆಗಳೇ ಸಾಕ್ಷಿ.

Leave A Reply

Your email address will not be published.