ನನ್ನ ಕುಟುಂಬಕ್ಕೆ (ಅಂದರೆ ರೈತರಿಗೆ) ಬೆಂಬಲ ನೀಡಲು ಬಂದಿದ್ದೇನೆ.ದೇಶದ ರೈತರು ಸಂಕಷ್ಟದಲ್ಲಿದ್ದಾರೆ, ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹೇಳುತ್ತಾ ವಿನೇಶ್ ಪೋಗಾಟ್ ಒಲಿಂಪಿಕ್ಸ್ ನಿಂದ ಡಿಸ್ಕ್ವಾಲಿಫೈ ಆಗಿ ರೈತರ ಹೋರಾಟದಲ್ಲಿ ಧುಮುಕಿದ್ದಾರೆ. ಇದು ಕೆಲ ನೆಟ್ಟಿಗರ ಕೆಂಗಣ್ಣಿಗೆ ಕೂಡ ಗುರಿಯಾಗಿದೆ. ದೇಶದ ಮಾನ ಹರಾಜು ಮಾಡಿ ಈಗ ಟ್ರೈನಿಂಗ್ ಹೋಗುವುದು ಬಿಟ್ಟು ಹೋರಾಟದ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾಳೆ ಅಂತ ಬಿಂಬಿಸುತ್ತಾ ಇದ್ದಾರೆ.
ಶನಿವಾರ ಆಗಸ್ಟ್ 31, 2024 ಪಂಜಾಬ್‌ನ ಶಂಭು ಗ್ರಾಮದಲ್ಲಿ ತಮ್ಮ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ಖರೀದಿಸಲು ಲೀಗಲ್ ಗ್ಯಾರಂಟಿ ಸೇರಿದಂತೆ ಅವರ ದೀರ್ಘಕಾಲದ ಬಾಕಿ ಇರುವ ಬೇಡಿಕೆಗಳಿಗೆ ಬೆಂಬಲವಾಗಿ ನಡೆಯುತ್ತಿರುವ 200 ದಿನಗಳ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರೈತರು ತಮ್ಮ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುವುದನ್ನು ನೋಡಲು ಬಹಳ ನೋವಾಗುತ್ತದೆ ಎಂದು ಹೇಳಿದ ಅವರು, “ಕೆಲವೊಮ್ಮೆ ನಾವು ಅವರಿಗಾಗಿ ಏನನ್ನೂ ಮಾಡಲು ಸಾಧ್ಯವಾಗದೆ ಅಸಹಾಯಕರಾಗುತ್ತೇವೆ. ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತೇವೆ ಆದರೆ ನಮ್ಮ ಸ್ವಂತ ಕುಟುಂಬಕ್ಕೆ [ರೈತರಿಗೆ] ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ ಎಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ. ಸರ್ಕಾರ ಅವರ ಮಾತನ್ನು ಕೇಳಬೇಕೆಂದು ನಾನು ವಿನಂತಿಸುತ್ತೇನೆ.
ಈ ಹಿಂದೆ ರೈತರ ಅನುಕೂಲಕ್ಕಾಗಿಯೇ ರೈತ ಪರ ಕಾಯಿದೆ ತಂದಾಗ ಇದೆ ರೈತರ ಹೆಸರಲ್ಲಿ ಕೆಲವು ದಲ್ಲಾಳಿಗಳು ಹೋರಾಟ ಮಾಡಿ ರೈತ ಪರ ಕಾಯ್ದೆಯನ್ನು ಜಾರಿಗೆ ಬರದಂತೆ ಮಾಡಿದ್ದರು . ಆಗ ಯಾರು ನೆರವಿಗೆ ಬರಲಿಲ್ಲ ರೈತರ ಪರ ಮಾತಾಡಲಿಲ್ಲ ಈಗ ಮಾತ್ರ ಈ ಹೋರಾಟ ರಾಜಕೀಯ ಬಣ್ಣ ಪಡೆಯುತ್ತಿದೆ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಅದೇನೇ ಆಗಲಿ ರೈತರಿಗೆ ಅನುಕೂಲ ಆಗುವ ಏನೇ ಕಾಣು ಇದ್ದರೂ ಅದನ್ನುಂಜಾರಿಗೆ ತರುವ ಎಲ್ಲಾ ಪ್ರಯತ್ನ ಸರ್ಕಾರ ಮಾಡಬೇಕು. ವಿರೋಧ ಪಕ್ಷಗಳು ರೈತ ಸಂಘಟನೆಗಳು ಎಲ್ಲರೂ ಒಟ್ಟಾಗಿ ಇದಕ್ಕೆ ಸಹಕರಿಸಬೇಕು.