ವಿರಾಟ್ ಕೊಹ್ಲಿಯನ್ನು ಜಸ್ಪ್ರೀತ್ ಬುಮ್ರಾ 15 ಎಸೆತಗಳಲ್ಲಿ 4 ಬಾರಿ ಔಟ್ ಮಾಡಿದರು. ಕೊಹ್ಲಿಗೆ ಗಂಭೀರ್ ಹೇಳಿದ ಕಿವಿ ಮಾತೇನು?
ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಿರಾಶದಾಯಕ ಪ್ರದರ್ಶನ ನೀಡಿದ್ದರು.ಮೊದಲ ಇನ್ನಿಂಗ್ಸ್‌ನಲ್ಲಿ ಹಸನ್ ಮಹಮೂದ್ ಅವರು ಔಟ್ ಮಾಡಿದರು ವಿರಾಟ್ 6 ರನ್ 17 ಎಸೆತದಲ್ಲಿ ಸ್ಕೋರ್ ಮಾಡಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ ವಿಕೆಟ್ ಪಡೆದರು ಇಲ್ಲಿಯೂ 17 ರನ್ ಮಾತ್ರ ಬಾರಿಸಿದ್ದರು.
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿರುದ್ಧ ನೆಟ್ಸ್‌ನಲ್ಲಿ 15 ಎಸೆತಗಳನ್ನು ಎದುರಿಸಿದ ಕೊಹ್ಲಿ ನಾಲ್ಕು ಬಾರಿ ‘ಔಟ್’ ಆದರು. ಕೊಹ್ಲಿ ಜಡೇಜಾ ಅವರ ಬೌಲಿಂಗ್ ನಲ್ಲಿ ಆಡಿದಾಗ ಕೂಡ ಅದೇ ಸಮಸ್ಯೆ ಎದುರಿಸಿದರು, ಹೆಚ್ಚಿನ ಬಾಲ್ ಬೀಟ್ ಆಗಿದ್ದರು ಎದುರಿಸಲು ಕೂಡ ಸಾಧ್ಯ ಆಗಿಲ್ಲ ಎಂದು ವರದಿ ಹೇಳಿದೆ. ಇನ್ನೊಂದೆಡೆ ಅಕ್ಷರ ಪಟೇಲ್ ಅವರ ಎಸೆತದಲ್ಲಿ ಕೂಡ ಬೌಲ್ಡ್ ಆಗಿದ್ದರು ಎಂದು ವರದಿ ಹೇಳಿದೆ. ಇದರಿಂದಾಗಿ ಕೊಹ್ಲಿ ಬಹಳಷ್ಟು ಸಿಟ್ಟು ಕೂಡಾ ಆಗಿದ್ದರು ಎಂದು ಹೇಳಲಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾಗವಹಿಸದಿರುವುದು ಭಾರತೀಯ ಕ್ರಿಕೆಟ್‌ಗೆ ಮತ್ತು ತಮಗೇ ಒಳ್ಳೆಯದಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಗಂಭೀರ್ ಕೂಡ ಈ ಒಂದು ವಿಷಯವನ್ನು ಗಂಭೀರವಾಗಿ ತೆಗೆದು ಕೊಂಡಿದ್ದು, ಕೊಹ್ಲಿ ಬ್ಯಾಟಿಂಗ್ ಗೆ ಸಲಹೆ ಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ಆಗಿರುವ ತಪ್ಪುಗಳನ್ನು ಸರಿಡಿಸಲು ಕೂಡ ಎಲ್ಲಾ ರೀತಿಯ ಮಾರ್ಗದರ್ಶನ ನೀಡಿದ್ದಾರೆ. ಸ್ವಲ್ಪ ಅಗ್ರೇಶನ್ ಕಡಿಮೆ ತೋರಿ ಆಟದ ಕಡೆ ಗಮನ ಹರಿಸುವಂತೆ ಹೇಳಿದ್ದಾರೆ ಎಂದು ವರದಿ ಹೇಳಿದೆ . ಅದೇನೇ ಇರಲಿ ಕೊಹ್ಲಿ ನಾಳೆಯಿಂದ ಶುರುವಾಗುವ ಪಂದ್ಯದಲ್ಲಿ ಕಂ ಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಾ ಇದ್ದಾರೆ.