ಬುಲೆಟ್ ಪ್ರೂಫ್ ಕಾಫಿ ! ಏನಿದು ಇದರ ಬಗ್ಗೆ ಎಷ್ಟು ಗೊತ್ತಿದೆ ನಿಮಗೆ ? ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಬಹುದು!

ಭಾರತೀಯರು ಎಂದ ಮೇಲೆ ಚಹಾ ಮತ್ತು ಕಾಫಿಗೆ ಬಹಳ ಅಡಿಕ್ಟ್ ಆಗಿರುತ್ತಾರೆ. ಏನೇ ಕೆಲಸ ಮಾಡಬೇಕಾದರೂ ಮೊದಲು ಚಹಾ ಇಲ್ಲಾಂದ್ರೆ ಕಾಫಿ ಕುಡಿಯಲೇ ಬೇಕು. ಕೆಲವರಿಗೆ ಇದು ಇಲ್ಲದೆ ಇದ್ದರೆ ಕೆಲಸವೇ ಆರಂಭ ಆಗುವುದಿಲ್ಲ . ಕೆಲವರಿಗಂತೂ ಚಹಾ ಕಾಫಿ ಇಲ್ಲದೆ ಹೋದರೆ ತಲೆ ನೋವೆ ಶುರುವಾಗಿ ಬಿಡುತ್ತದೆ. ಆದರೆ ಇವತ್ತು ನಾವು ತಿಳಿಯಲು ಹೊರಟದ್ದು ಸ್ವಲ್ಪ ವಿಭಿನ್ನ ಅದು ಬುಲೆಟ್ ಪ್ರೂಫ್ ಕಾಫಿ. ಹೌದು ವಿಚಿತ್ರ ಎನಿಸಿದರೂ ಸತ್ಯ . ಹಾಗದರೆ ಏನಿದು ಬುಲೆಟ್ ಪ್ರೂಫ್ ಕಾಫಿ. ಇದನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಏನು ಲಾಭ ? ಎಲ್ಲದರ ಬಗ್ಗೆ ನೋಡುತ್ತಾ ಹೋಗೋಣ.

ಹೆಚ್ಚಿನ ಹಿಂದಿ ಸಿನೆಮಾ ನಟರು ಈ ಬುಲೆಟ್ ಪ್ರೂಫ್ ಕಾಫಿ ಎನ್ನು ತಮ್ಮ ದೈನಂದಿನ ಡಯಟ್ ನಲ್ಲಿ ಸೇವಿಸುತ್ತಾರೆ. ಬುಲೆಟ್ ಪ್ರೂಫ್ ಕಾಫಿ ಹೇಗೆ ಮಾಡುವುದು ಎಂಬ ಕುತೂಹಲ ಎಲ್ಲರಿಗೂ ಇರಬಹುದು . ಸಾಮಾನ್ಯ ಕಾಫಿ ಮಾಡುವ ವಿಧಾನದಲ್ಲಿ ಇದನ್ನು ತಯಾರಿಸಿ ಅದಕ್ಕೆ ಒಂದು ಚಮಚ ದೇಸಿ ಹಸುವಿನ ತುಪ್ಪವನ್ನು ಹಾಕಿ ಮಿಶ್ರಣ ಮಾಡಿದರೆ ಬುಲೆಟ್ ಪ್ರೂಫ್ ಕಾಫಿ ರೆಡಿ. ಹಾಗದರೆ ಏನು ಇದರ ಉಪಯೋಗ ಎಂದು ತಿಳಿಯುವುದಾದರೆ ಇದು ನಿನ್ನ ಚರ್ಮದ ಆರೋಗ್ಯಕ್ಕೆ ಸಹಾಯಕಾರಿ ಆಗಿದೆ. ಅಷ್ಟೇ ಅಲ್ಲದೆ ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ನಿನ್ನ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಏಕಾಗ್ರತೆ ಶಕ್ತಿ ಹೆಚ್ಚುತ್ತದೆ ಹಾಗೆ ಹೃದಯ ಕೂಡ ಚೆನ್ನಾಗಿ ಕೆಲಸ ಮಾಡುತ್ತದೆ. ಹಾಗೆ ದೇಹದಲ್ಲಿ ಪಚನ ಕ್ರಿಯೆಗೆ ಸಹಕಾರಿ ಆಗುತ್ತದೆ.

ಇಷ್ಟೆಲ್ಲಾ ಉಪಯೋಗ ಇದರಿಂದ ಇದೆ ಎಂದು ಹೇಳಲಾಗುತ್ತದೆ ಆದರೆ ಯಾವುದೇ ಡಯಟ್ ಅಥವಾ ಯಾವುದೇ ಆಹಾರ ಕ್ರಮವನ್ನು ದೈನಂದಿನ ಜೀವನದಲ್ಲಿ ಅಳವಡಿಸುವ ಮುನ್ನ ನೀವು ಅದರ ಬಗ್ಗೆ ಸರಿಯಾದ ಮಾಹಿತಿ ಪಡೆದು ಕೊಳ್ಳಬೇಕು. ಎಲ್ಲವೂ ಎಲ್ಲರಿಗೆ ಆಗುತ್ತದೆ ಎಂದು ಇಲ್ಲ ನಿಮ್ಮ ಪರಿಚಯದ ನ್ಯೂಟ್ರಿಷನ್ ಬಳಿ ಕೇಳಿ ಸಲಹೆ ಪಡೆದು ಉಪಯೋಗಿಸಿ. ಎಲ್ಲವೂ ಮಿತಿಯಲ್ಲಿ ಇದ್ದರೆ ಆರೋಗ್ಯಕ್ಕೂ ಒಳ್ಳೆಯದು.

Benefits of coffeeBenefutsBullet proof coffeeCoffeeHealtg
Comments (0)
Add Comment