Usefull Tips: Pan ಕಾರ್ಡ್ ಹಾಗು TAN ನಡುವಿನ ವ್ಯತ್ಯಾಸವೇನು? ಸಾಮಾನ್ಯ ಜನರಿಗೆ ಯಾವುದು ಮುಖ್ಯ? ಇಲ್ಲಿದೆ ಮಾಹಿತಿ.
ಇಂದಿನ ದಿನಗಳಲ್ಲಿ 18 ವರ್ಷದ ಮೇಲಿನ ಎಲ್ಲ ನಾಗರಿಕರಲ್ಲಿ ಪಾನ್ ಕಾರ್ಡ್ (Pan Card) ಇದ್ದೆ ಇರುತ್ತದೆ. ಒಂದು ವ್ಯಕ್ತಿಗೆ ಬೇಕಾಗುವ ಮುಖ್ಯ ದಾಖಲಾತಿಗಳಲ್ಲಿ ಪಾನ್ ಕಾರ್ಡ್ ಕೂಡ ಒಂದು. ಹಾಗೇನೇ ಇಲ್ಲಿ ಪಾನ್ ಕಾರ್ಡ್ ಅಲ್ಲದೆ ಇನ್ನೊಂದು ನಂಬರ್ ಬಗ್ಗೆ ಹೇಳಲಿದ್ದೇವೆ ಅದು ಸಾಮಾನ್ಯ ಜನರ ಜೀವನದಲ್ಲಿ ಪ್ರಭಾವ ಬಿರುತ್ತದೆಯೋ ಇಲ್ಲವೇ ಎನ್ನುವ ಮಾಹಿತಿ ನಾವು ಇಂದು ನಿಮಗೆ ಹೇಳುತ್ತೇವೆ.
ನಿಮಗೆಲ್ಲರಿಗೆ ತಿಳಿದಿರುವ ಹಾಗೆ ಪಾನ್ ಕಾರ್ಡ್ ಅಲ್ಲಿ ಮಹತ್ವದ ಮಾಹಿತಿಗಳು ಒಳಗೊಂಡಿರುತ್ತವೆ. ಅದರಲ್ಲೂ ಈ ವಿತ್ತೀಯ ಕೆಲಸಗಳಿಗೆ ಇಂದಿನ ದಿನಗಳಲ್ಲಿ ಪಾನ್ ಕಾರ್ಡ್ ಬಹಳ ಮಹತ್ವ ಪಡೆದಿದೆ. ಅಲ್ಲದೆ ಇದನ್ನು ಅನೇಕ ಕಡೆಗಳಲ್ಲಿ ವ್ಯಕ್ತಿಯ ಸಹಿಯಾಗಿಯೂ ಬಳಸಲಾಗುತ್ತದೆ. ಉದಾಹರಣೆಗೆ ಡಿಮ್ಯಾಟ್ (Demat) ಅಕೌಂಟ್ ಗಳಲ್ಲಿ. ಇನ್ನು ತೆರಿಗೆ ಇಲಾಖೆ ನಿಯಮದ ಪ್ರಕಾರ ಭಾರತೀಯ ನಾಗರಿಕರು ಕೇವಲ ಒಂದೇ ಪಾನ್ ಕಾರ್ಡ್ (Pan Card) ಹೊಂದಿರಬೇಕು.
ಆದರೆ ನಿಮಗೆ ಪಾನ್ ಕಾರ್ಡ್ ಜೊತೆಗೆ TAN ನಂಬರ್ ಬಗ್ಗೆ ಮಾಹಿತಿ ತಿಳಿದಿದೆಯಾ? TAN ಎಂದರೆ Tax Deduction and Collection Account Number ಎಂದರ್ಥ. ಒಬ್ಬ ವ್ಯಕ್ತಿ/ಕಂಪನಿ/ಸಂಸ್ಥೆ ಇದನ್ನು ಹೊಂದಿರಬೇಕಾಗುತ್ತದೆ. ಇದು TDS ಅಥವಾ TCS ಕಲೆಕ್ಟ್ ಮಾಡುವ ಸಮಯದಲ್ಲಿ ಈ ನಂಬರ್ ಬೇಕಾಗುತ್ತದೆ. ಇದನ್ನು ತೆರಿಗೆ ಇಲಾಖೆ ಅರ್ಜಿ ಹಾಕಿದ ಬಳಿಕ ನೀಡುತ್ತದೆ. ಜನ ಸಾಮಾನ್ಯರಿಗೆ ಇದರ ಅವಶ್ಯಕತೆ ಇರುವುದಿಲ್ಲ ಪಾನ್ ಕಾರ್ಡ್ ಒಂದು ಸಾಕಾಗುತ್ತದೆ. ಆದರೆ ನೀವು ಕಂಟ್ರಾಕ್ಟರ್ (Contractor) ಅಥವಾ ಬೇರೆ ಯಾವುದೇ ಬ್ಯುಸಿನೆಸ್ (Business) ಮಾಡುವುದಾದರೆ ಅಂತಹ ಸಂಧರ್ಭದಲ್ಲಿ ಪೇಮೆಂಟ್ ಕೊಡುವಾಗ TDS ಕಡಿತ ಮಾಡುವ ಸಂಧರ್ಭದಲ್ಲಿ TAN ಬೇಕಾಗುತ್ತದೆ.