ನೀವು ದಿನನಿತ್ಯ ವಹಿವಾಟಿಗೆ ಬಳಸುವ ನಾಣ್ಯಗಳ ಮೇಲೆ ಇರುವ ⭐ ♦️ ⚫ ಈ ಚಿಹ್ನೆಗಳನ್ನು ಗಮನಿಸಿದ್ದೀರಾ? ಏನಿದು? ಏನಿದರ ಅರ್ಥ? Coin mint in india.

ಹಣ ಎಲ್ಲರಿಗೂ ಬೇಕೆ ಬೇಕು . ದಿನ ನಿತ್ಯದ ಎಲ್ಲಾ ವಹಿವಾಟಿಗೂ ಹಣದ ಅವಶ್ಯಕತೆ ಇದ್ದೇ ಇದೆ. ಹಣ ಇಲ್ಲದೆ ಏನು ಆಗುವುದಿಲ್ಲ. ಪ್ರತಿಯೊಂದು ವ್ಯಾಪಾರ ವಹಿವಾಟು ನಡೆಯುವುದೇ ಹಣದ ಮೇಲೆ. ಮನುಷ್ಯ ಬದುಕಿರುವುದೇ ಹಣಕ್ಕಾಗಿ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ನೀವು ದಿನ ನಿತ್ಯ ವ್ಯಾಪಾರ ವಹಿವಾಟಿನಲ್ಲಿ ಬಳಸುವ ನಾಣ್ಯಗಳ ಮೇಲೆ ⭐ ♦️ ⚫ (ಸ್ಟಾರ್, ಡೈಮಂಡ್, ಡಾಟ್) (Star,Diamond,Dot) ಚಿಹ್ನೆಗಳು ಇರುತ್ತವೆ. ಹೆಚ್ಚಿನವರು ಇದನ್ನು ಗಮನಿಸಿರಲಿಕ್ಕೆ ಇಲ್ಲ. ಗಮನಿಸಿದವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದಿರಬಹುದು. ಆದರೆ ಇದು ಬಹಳ ಮುಖ್ಯ ವಿಷಯ ಇದರ ಬಗ್ಗೆ ಅರಿತಿದ್ದರೆ ಒಳ್ಳೆಯದು. ನಿಮಗೆ ಇದು ಹೊಸ ವಿಷಯ ಅನಿಸಿದರೆ ಇದನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ.

ಭಾರತದಲ್ಲಿ ನಾಣ್ಯಗಳ ಉತ್ಪಾದನೆ ನಾಲ್ಕು ಜಾಗಗಳಲ್ಲಿ ನಡೆಯುತ್ತದೆ. ಹೈದರಾಬಾದ್ , ಮುಂಬೈ, ನೋಯ್ಡಾ ಮತ್ತು ಕೋಲ್ಕತಾ. ಹಾಗದರೆ ಈ ನಾಲ್ಕು ಜಾಗಗಳಲ್ಲಿ ಉತ್ಪಾದನೆ ನಾಣ್ಯಗಳನ್ನು ವಿಂಗಡನೆ ಮಾಡುವುದು ಹೇಗೆ? ಅದನ್ನು ಹೇಗೆ ಗುರುತು ಹಿಡಿಯುವುದು ಅದಕ್ಕಾಗಿಯೇ ಈ ನಾಣ್ಯಗಳ ಮುದ್ರಣದ ಸಮಯದಲ್ಲಿ ಇದರ ಮೇಲೆ ಮಾರ್ಕ್ ಮಾಡಲಾಗುವುದು. ⭐ ಮಾರ್ಕ್ ಇರುವ ನಾಣ್ಯಗಳೆಲ್ಲವು ಹೈದರಾಬಾದ್ ನಲ್ಲಿ ಉತ್ಪಾದನೆ ಆಗಿರುತ್ತದೆ. ♦️ ಡೈಮಂಡ್ ಗುರುತು ಇರುವ ನಾಣ್ಯಗಳು ಮುಂಬೈ ನಲ್ಲಿ ಉತ್ಪಾದನೆ ಆಗಿರುತ್ತದೆ, ⚫ ಮಾರ್ಕ್ ಇರುವ ನಾಣ್ಯಗಳು ನೋಯ್ಡಾ ನಲ್ಲಿ ಉತ್ಪಾದನೆ ಆಗಿರುತ್ತದೆ. ಮತ್ತೆ ಯಾವುದೇ ಮಾರ್ಕ್ ಇಲ್ಲದ ನಾಣ್ಯಗಳು ಕೋಲ್ಕತಾದಲ್ಲಿ ಉತ್ಪಾದನೆ ಆಗುತ್ತದೆ . Coin mints in Hyderabad,mumbai,noida and Kolkata.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank of India)ಇದರ ಮುತುವರ್ಜಿಯಲ್ಲಿ ಇದು ನಡೆಯುತ್ತದೆ. ಬೇಕಾದ ರೀತಿಯಲ್ಲಿ ನಾಣ್ಯಗಳನ್ನು ಉತ್ಪಾದನೆ ಮಾಡುವಂತೆ ಇಲ್ಲ . ಇದರ ಬೇಡಿಕೆಗಳು ಉತ್ಪಾದನಾ ಮಟ್ಟ ಎಲ್ಲವನ್ನೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI ) ನಿರ್ಧಾರ ಮಾಡುತ್ತದೆ. ಅದರ ಪ್ರಕಾರವಾಗಿಯೇ ನಾಣ್ಯಗಳ ಮುದ್ರಣ ಕೆಲಸ ನಡೆಯುತ್ತದೆ. ಹೌದು ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

Coin mintCoin mint in kannadaHyderabadKolkataMumbaiNoidaSymbols in coins
Comments (0)
Add Comment