ಎಂಎಸ್ ಧೋನಿ ಪುತ್ರಿ ಝಿವಾ ಈ ಶಾಲೆಯಲ್ಲಿ ಓದುತ್ತಿದ್ದು, ಆಕೆಯ ಶುಲ್ಕ ಎಷ್ಟು ಗೊತ್ತಾ? ಅಬ್ಬಾ ಇಷ್ಟು ಫೀಸ್?
ಸಾಕ್ಷಿ ಧೋನಿ ಮತ್ತು ಝಿವಾ ಧೋನಿ ಅವರು ಒಂದಲ್ಲ ಒಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಫೆಬ್ರವರಿ 6, 2015 ರಂದು ಝಿವಾ ಧೋನಿ ಅವರು ಜನಿಸಿದರು. ಧೋನಿ ಅವರು ವರ್ಲ್ಡ್ ಕಪ್ ಸಮಯದಲ್ಲಿ ಮಗಳು ಹುಟ್ಟಿದ್ದರೂ ಅವರು ಕ್ರಿಕೆಟ್ ಅರ್ಧಕ್ಕೆ ಬಿಟ್ಟು ಬರಲಿಲ್ಲ. ಪ್ರಸ್ತುತ ತನ್ನ ತವರು ರಾಂಚಿಯಲ್ಲಿರುವ ಪ್ರತಿಷ್ಠಿತ ಸಂಸ್ಥೆಯಾದ ಟೌರಿಯನ್ ವರ್ಲ್ಡ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2008 ರಲ್ಲಿ ಅಮಿತ್ ಬಜ್ಲಾ ಸ್ಥಾಪಿಸಿದ ಟೌರಿಯನ್ ವರ್ಲ್ಡ್ ಸ್ಕೂಲ್, ಈ ಪ್ರದೇಶದ ಅತ್ಯಂತ ಪ್ರತಿಷ್ಠಿತ ಬೋರ್ಡಿಂಗ್ ಮತ್ತು ಇದು ಆ ಪ್ರದೇಶದಲ್ಲಿ ಇರುವ ಅತ್ಯಂತ ಉತ್ತಮ ಶಾಲೆಗಳಲ್ಲಿ ಒಂದಾಗಿದೆ.
ಟೌರಿಯನ್ ವರ್ಲ್ಡ್ ಸ್ಕೂಲ್, ವಿಸ್ತಾರವಾದ 65-ಎಕರೆ ಕ್ಯಾಂಪಸ್‌ನಲ್ಲಿದೆ, ಶಿಕ್ಷಣಕ್ಕೆ ಸಮಗ್ರ ರೀತಿಯ ಸಹಕಾರ ನೀಡುತ್ತದೆ, ವಿದ್ಯಾರ್ಥಿಗಳು ಕೇಂದ್ರಿತವಾಗಿರಿಸಿ ವಿದ್ಯೆ ನೀಡುವ ಗುರಿಯೊಂದಿಗೆ ಸ್ಥಾಪಿಸಲಾಗಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಹಳೆಯ ವಿದ್ಯಾರ್ಥಿಯಾಗಿರುವ ಅಮಿತ್ ಬಜ್ಲಾ ಅವರು ಶಾಲೆಯ ಪ್ರಾರಂಭದಿಂದಲೂ ಅದರ ಹಿಂದಿನ ಪ್ರೇರಕ ಶಕ್ತಿಯಾಗಿದ್ದಾರೆ ಮತ್ತು ಈಗ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಮುಂಬೈನಲ್ಲಿ ವಾಸಿಸುತ್ತಿರುವ ಬಜ್ಲಾ ಶಾಲೆಯನ್ನು ಪ್ರಮುಖ ಸಂಸ್ಥೆಯಾಗಿ ನಿರ್ಮಿಸಿದ್ದಾರೆ, ಇದು ಶೈಕ್ಷಣಿಕ ಮತ್ತು ವೈಯಕ್ತಿಕ ಅಭಿವೃದ್ಧಿ ಎರಡಕ್ಕೂ ಒತ್ತು ನೀಡುತ್ತದೆ.
ಶಾಲೆಯ ಶುಲ್ಕದ ಬಗ್ಗೆ ಹೇಳುವುದಾದರೆ, LKG ಯಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕವು ಅಂದಾಜು 4.40 ಲಕ್ಷ ರೂ.ಗಳಾಗಿದ್ದರೆ, 9 ರಿಂದ ಪಿಯುಸಿ ತರಗತಿಗಳ ಶುಲ್ಕವು ಸುಮಾರು 4.80 ಲಕ್ಷಕ್ಕೆ ಇರುತ್ತದೆ. ವರದಿಯ ಪ್ರಕಾರ ಈ ಶುಲ್ಕಗಳು ಸಮವಸ್ತ್ರಗಳು, ಪಠ್ಯಪುಸ್ತಕಗಳು ಮತ್ತು ಇತರ ಅಗತ್ಯ ಸಾಮಗ್ರಿಗಳಂತಹ ಅಗತ್ಯಗಳನ್ನು ಒಳಗೊಂಡಿರುತ್ತವೆ. ಶೈಕ್ಷಣಿಕ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಹೊಂದಿರುತ್ತದೆ, ಟೌರಿಯನ್ ವರ್ಲ್ಡ್ ಸ್ಕೂಲ್ ತನ್ನ ವಿದ್ಯಾರ್ಥಿಗಳಿಗೆ ಸಮೃದ್ಧ ವಾತಾವರಣವನ್ನು ನೀಡುತ್ತದೆ ಎಂದು ವರದಿ ಹೇಳುತ್ತದೆ.