ವಿಮಾನದ ಕಿಟಕಿಗಳು ವೃತ್ತಾಕಾರದಲ್ಲಿ ಇರುತ್ತದೆ ಯಾಕೆ? ಹೀಗೆಂದಾದ್ರೂ ಯೋಚನೆ ಮಾಡಿದ್ದೀರಾ?
ನಾವು ಹೆಚ್ಚಿನ ಕಟ್ಟಡ ರಚನೆಗಳನ್ನು ಗಮನಿಸಿದರೆ ಅಥವಾ ಯವುದೇ ವಾಹನಗಳ ಕಿಟಕಿಗಳನ್ನು ಗಮನಿಸಿದರೆ ಅದು ಚೌಕ ಮತ್ತು ಆಯತಾಕಾರದ ಶೈಲಿಯಲ್ಲಿ ಇರುತ್ತದೆ. ಆದರೆ ವಿಮಾನದ ಕಿಟಕಿಗಳು ಮಾತ್ರ ವೃತ್ತಾಕಾರದಲ್ಲಿ ಇದೆ ಯಾಕೆ ಎಂದು ಯಾವತ್ತಾದರೂ ಯೋಚನೆ ಮಾಡಿದ್ದೀರಾ? ಇದೊಂದು ಬಹಳ ಕುತೂಹಲಕಾರಿ ಸಂಗತಿ ಅಷ್ಟೇ ಅಲ್ಲದೆ ಇಂತಹ ಒಂದು ಯೋಚನೆ ನಮ್ಮ ತಲೆಗೆ ಹೊಳೆದು ಕೂಡ ಇಲ್ಲ. ಹಾಗದರೆ ಯಾಕೆ ಇದನ್ನು ಈ ರೀತಿ ವಿನ್ಯಾಸ ಮಾಡಿದ್ದಾರೆ ಎಂದು ತಿಳಿದುಕೊಳ್ಳೋಣ.
ಮೊದಲು ವಿಮಾನದ ಅನೇಷಣೆ ಆದಾಗ ಇರಲಿ ಅಥವಾ ಅದರ ನಂತರದ ಸಮಯ ಅಂದರೆ 1950-1955 ರ ಸುಮಾರಿಗೆ ಇದೆ ಮಾದರಿಯಲ್ಲಿ ಕಿಟಕಿಯ ವಿನ್ಯಾಸ ಮಾಡಲಾಗಿತ್ತು ಆದರೆ ಎತ್ತರದಲ್ಲಿ ಹಾರುವ ಗಾಳಿಯ ರಭಸಕ್ಕೆ ಕಿಟಕಿ ಒಡೆದು ಅಪಘಾತ ಸಂಭವಿಸಿದ ಘಟನೆಗಳು ಇವೆ.ವಿಮಾನಗಳ ಈ ಆಯತಾಕಾರದ ಅಥವಾ ಆಚೌಕಾಕರದ ಕಿಟಕಿಗಳ ಚೂಪಾದ ಅಂಚುಗಳು (sharp edge) ನೈಸರ್ಗಿಕವಾಗಿ ಗಾಳಿಯ ರಭಸಕ್ಕೆ ದುರ್ಬಲ ತಾಣಗಳನ್ನು ಸೃಷ್ಟಿಸುತ್ತವೆ ಎಂದು ಇಂಜಿನಿಯರ್‌ಗಳು ಕಂಡು ಹಿಡಿದರು.ಆ ಚೌಕಾಕಾರದ ಕಿಟಕಿಗಳು ಮೂಲಭೂತವಾಗಿ ಗಾಳಿಯ ಒತ್ತಡದಿಂದ ಒಡೆಯಲು ಶುರುವಾಯಿತು.
ಇದೆ ಕಾರಣಕ್ಕೆ ವಿಮಾನಗಳಲ್ಲಿ ವೃತ್ತಾಕಾರದ ಕಿಟಕಿಗಳನ್ನು ಇಡಲು ಆರಂಭಿಸಿದರು, ವೃತ್ತಾಕಾರದ ಕಿಟಕಿಗಳು ಒತ್ತಡವನ್ನು ಸಮವಾಗಿ ವಿತರಿಸಲು ಸಮರ್ಥವಾಗಿವೆ ಏಕೆಂದರೆ ಅವುಗಳು ಒತ್ತಡವನ್ನು ಕೇಂದ್ರೀಕರಿಸಲು ಯಾವುದೇ ಮೂಲೆಗಳು ಇರುವುದಿಲ್ಲ. ನೀವು ಮತ್ತು ವಿಮಾನದ ಹೊರಭಾಗದ ನಡುವೆ ಅಕ್ರಿಲಿಕ್ ನ ಅನೇಕ ಪದರಗಳಿವೆ ಎಂದು ನೀವು ಗಮನಿಸಬಹುದು. ಆ ಪದರಗಳು ಮಳೆ, ಗಾಳಿ ಮತ್ತು ಮಂಜಿನಂತಹ ಹವಾಮಾನ ಘಟನೆಗಳಿಂದ ಹೆಚ್ಚುವರಿ ರಕ್ಷಣೆ ನೀಡುತ್ತವೆ.