ವಾಹನಗಳ ಟೈಯರ್ ಗಳಲ್ಲಿ ಈ ಮುಳ್ಳುಗಳನ್ನು ಏಕೆ ಮಾಡಲಾಗುತ್ತದೆ? ಇದರ ನಿಜವಾದ ಉದ್ದೇಶ ಏನು? ಇಲ್ಲಿದೆ ಮಾಹಿತಿ.
ನೀವು ಯಾವಾಗಲು ವಾಹನಗಳ ಟೈಯರ್ ಗಮನಿಸಿದ್ದಾರೆ ಮುಳ್ಳುಗಳ ರೀತಿ ರಬ್ಬರ್ ಗಳನ್ನೂ ನೋಡಬಹುದು. ಇದನ್ನು ನೋಡಿ ನಿಮಗೆ ಯಾಕೆ ಹಾಗೆ ಇದೆ ಎನ್ನುವ ಕುತೂಹಲ ಕೂಡ ಬಂದಿರಬಹುದು. ಆದರೂ ಕೂಡ ಅದರ ಬಗ್ಗೆ ತಿಳಿದುಕೊಳ್ಳದೆ ಸುಮ್ಮನಿರಬಹುದು. ಅಥವಾ ತಯಾರು ಮಾಡುವಾಗ ಏನೋ ಸಮಸ್ಯೆ ಆಗಿ ಹೀಗೆ ಆಗಿರಬೇಕು ಎಂದು ಕೂಡ ಎನಿಸಿಕೊಂಡಿರಬಹುದು. ಆದರೆ ಇಂತಹ ಮುಳ್ಳುಗಳು ಟೈಯರ್ ಗಳಲ್ಲಿ ಇದ್ದಾರೆ ಅದು ಉತ್ತಮ ಗುಣಮಟ್ಟದಾಗಿದೆ ಎಂದರೆ ನೀವು ನಂಬಲೇಬೇಕು.
ಹಾಗೇನೇ ನೀವು ಮುಂದಿನ ಬಾರಿ ಟೈಯರ್ ಖರೀದಿ ಮಾಡುವಾಗ ಇಂತಹ ಮುಳ್ಳುಗಳು ಟೈಯರ್ ಅಲ್ಲಿ ಇದ್ದರೆ ಅದು ತುಂಬಾ ಪ್ರಯೋಜನಕಾರಿ ಎಂದು ಅರ್ಥಮಾಡಿಕೊಳ್ಳಿ. ಈ ಮುಳ್ಳುಗಳನ್ನು ತಯಾರಿಸಲು ಮುಖ್ಯ ಉದ್ದೇಶ ಇದೆ. ಈ ರಬ್ಬರ್ ಮುಳ್ಳುಗಳನ್ನು ವೆಂಟ್ ಸ್ಪ್ಯೂಸ್ ಎಂದು ಕರೆಯಲಾಗುತ್ತದೆ. ಇದು ವಾಹನದ ಕಾರ್ಯಕ್ಷಮತೆ ಸುಧಾರಿಸಲು ತಯಾರು ಮಾಡಲಾಗುತ್ತದೆ. ಸುಲಭವಾಗಿ ಹೇಳಬೇಕೆಂದರೆ. ವಾಹನದ ಚಲನೆಯಿಂದ ಟೈಯರ್ ಗಳಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಈ ಒತ್ತಡ ಕಡಿಮೆ ಮಾಡಲು ಈ ರೀತಿಯ ಮುಳ್ಳುಗಳನ್ನು ಟೈಯರ್ ಮೇಲೆ ರಚಿಸಲಾಗುತ್ತದೆ.
ಕಂಪನಿ ಗಳು ಟೈಯರ್ ತಯಾರು ಮಾಡುವ ಸಮಯದಲ್ಲಿ ಈ ರಬ್ಬರ್ ಮುಳ್ಳುಗಳನ್ನು ಅಳವಡಿಸಲಾಗುತ್ತದೆ. ಟೈಯರ್ ತಯಾರು ಮಾಡುವ ಸಮಯದಲ್ಲಿ ಟೈಯರ್ ಗಳ ಒಳಗೆ ಗುಳ್ಳೆಗಳು ಉಂಟಾಗವ ಸಾಧ್ಯತೆ ಇರುತ್ತದೆ. ಇದರಿಂದ ಟೈಯರ್ ಗಳು ಬಹಳ ದುರ್ಬಲವಾಗಿರುತ್ತದೆ. ಅದೇ ಕಾರಣಕ್ಕೆ ಈ ರಬ್ಬರ್ ಮುಳ್ಳುಗಳನ್ನು ಅಳವಡಿಸಿ ಈ ಟೈಯರ್ ಗಳು ದುರ್ಬಲವಾಗದಂತೆ ತಡೆಯುತ್ತದೆ. ಹಾಗೇನೇ ಇನ್ನು ಮುಂದೆ ನೀವು ಟೈಯರ್ ಖರೀದಿ ಮಾಡಲು ಹೋಗುವಾಗ ಟೈಯರ್ ಗಳಲ್ಲಿ ಈ ಮುಳ್ಳುಗಳು ಇದೆಯೋ ಇಲ್ಲವೋ ಎನ್ನುವುದು ಖಚಿತ ಪಡಿಸಿಕೊಂಡು ಖರೀದಿ ಮಾಡಿಕೊಳ್ಳಿ.