ಬಾಹ್ಯಾಕಾಶದಲ್ಲಿ ಮನುಷ್ಯರು ಏಕೆ ಎತ್ತರವಾಗಿ ಬೆಳೆಯುತ್ತಾರೆ? ಸುನೀತಾ ವಿಲಿಯಮ್ಸ್ ಇದಕ್ಕೆ ಏನೆಂದು ಉತ್ತರಿಸಿದ್ದಾರೆ? ಇಲ್ಲಿದೆ ವರದಿ
NASA ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಎಂಟು ತಿಂಗಳ ಕಾರ್ಯಾಚರಣೆಗೆ ಎಂದು ತೆರಳಿದ್ದು.ಅಲ್ಲಿನ ತಂತ್ರಾಂಶದ ಸಮಸ್ಯೆಯಿಂದ ಅಲ್ಲೇ ಉಳಿದುಕೊಂಡಿದ್ದಾರೆ. ಮೈಕ್ರೋಗ್ರಾವಿಟಿ ವಾತಾವರಣದಲ್ಲಿ ಅವರ ಸಮಯವು ಬಹಳಷ್ಟು ಸವಾಲುಗಳು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ , ಗುರುತ್ವಾಕರ್ಷಣೆ ಇಲ್ಲದೆ ಇರುವುದರಿಂದ ಜೀವಕೋಶಗಳು ದೇಹದಲ್ಲಿ ವೇಗವಾಗಿ ನಾಶವಾಗುವ ಕಾರಣ ಗಗನಯಾತ್ರಿಗಳು ಕೆಂಪು ರಕ್ತ ಕಣಗಳು ಬೇಗನೆ ಕಡಿಮೆ ಆಗುತ್ತದೆ.
ಬಾಹ್ಯಾಕಾಶದಲ್ಲಿ ಭೌತಿಕ ಬದಲಾವಣೆಗಳ ಬಗೆಗೆ ಈ ಹಿಂದೆ ಸುನೀತಾ ವಿಲಿಯಮ್ಸ್ ಅವರು ಸಂದರ್ಶನ ಒಂದರಲ್ಲಿ ಹೇಳಿದ್ದರು, ವಿಲಿಯಮ್ಸ್ ಹೇಳುವ ಪ್ರಕಾರ ಮಾನವ ದೇಹವು ಬಾಹ್ಯಾಕಾಶ ಪರಿಸರಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದರು. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹಲವಾರು ದೈಹಿಕ ಬದಲಾವಣೆಗಳನ್ನು ಅನುಭವಿಸುತ್ತಾರೆ ಎಂದು ಅವರು ಹೇಳಿದ್ದರು. “ನೀವು ನಡೆಯದ ಕಾರಣ ನಿಮ್ಮ ಕಾಲುಗಳ ಮೇಲಿನ ಕ್ಯಾಲಸ್ಗಳು ಕಣ್ಮರೆಯಾಗುತ್ತವೆ ಮತ್ತು ನಿಮ್ಮ ಉಗುರುಗಳು ಮತ್ತು ಕೂದಲು ವೇಗವಾಗಿ ಬೆಳೆಯುತ್ತವೆ” ಎಂದು ವಿಲಿಯಮ್ಸ್ ವಿವರಿಸಿದರು.
ಗುರುತ್ವಾಕರ್ಷಣೆಯಿಲ್ಲದೆ, ದೇಹದಲ್ಲಿನ ದ್ರವ ಪದಾರ್ಥಗಳು ಮೇಲಕ್ಕೆ ಚಲಿಸುವುದರಿಂದ ನಿಮ್ಮ ಮುಖದ ಮೇಲೆ ಕೆಲವು ಸುಕ್ಕುಗಳು (wrinkles) ತಾತ್ಕಾಲಿಕವಾಗಿ ಉಂಟಾಗುತ್ತವೆ. ದೇಹದ ಮೇಲೆ ಯಾವುದೇ ಒತ್ತಡ ಇರುವುದಿಲ್ಲ ಆದ್ದರಿಂದಾಗಿ ನಿಮ್ಮ ಬೆನ್ನುಮೂಳೆಯು ಸಹ ವಿಸ್ತರಿಸುತ್ತದೆ , ಇದರಿಂದಾಗಿ ನೀವು ಬಾಹ್ಯಾಕಾಶದಲ್ಲಿ ಸ್ವಲ್ಪ ಎತ್ತರವಾಗುತ್ತೀರಿ. ಆದಾಗ್ಯೂ, ಭೂಮಿಗೆ ಹಿಂದಿರುಗಿದ ನಂತರ ಈ ಬದಲಾವಣೆಗಳು ಮತ್ತೆ ಸಾಮಾನ್ಯ ರೂಪಕ್ಕೆ ಬರುತ್ತದೆ ಎಂದು ಅವರು ಹೇಳಿದರು. “ನೀವು ಎತ್ತರಕ್ಕೆ ಬೆಳೆದರು ನೀವು ಗುರುತ್ವಾಕಾರ್ಷಣೆಗೆ ಬಂದ ನಂತರ ನಿಮ್ಮ ಸಾಮಾನ್ಯ ಎತ್ತರಕ್ಕೆ ನೀವು ಹಿಂತಿರುಗುತ್ತೀರಿ, ಮತ್ತು ಗುರುತ್ವಾಕರ್ಷಣೆಯು ಪುನಃಸ್ಥಾಪನೆಯಾಗುತ್ತಿದ್ದಂತೆ ನಿಮ್ಮ ಬೆನ್ನು ಸ್ವಲ್ಪ ನೋವುಂಟುಮಾಡಬಹುದು” ಎಂದು ಅವರು ಹೇಳಿದರು.