Interesting

Indian Railway : ರೈಲ್ವೆ ಹಳಿಗಳಲ್ಲಿರುವ ಕಲ್ಲುಗಳು ಮೆಟ್ರೋ ಹಳಿಗಳ ಮೇಲೆ ಯಾಕಿಲ್ಲ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಭಾರತೀಯ ರೈಲ್ವೆ (Indian Railway) ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ದೇಶದ ಎಲ್ಲ ಭಾಗಗಳನ್ನ ಸಂಪರ್ಕಿಸುವ ಕೊಂಡಿ. ಇದನ್ನು ಭಾರತದ ಜೀವನಾಡಿ ಎಂದು ಕೂಡ ಕರೆಯುತ್ತಾರೆ. ನೀವೆಲ್ಲರೂ ಕಡಿಮೆ ಅಂದರು ಕೂಡ ಒಂದು ಬಾರಿ ರೈಲಿನಲಿ ಪ್ರಯಾಣ ಮಾಡಿರುತ್ತೀರಾ. ಅಥವಾ ರೈಲ್ವೆ ಹಳಿಗಳನ್ನು ನೋಡೇ ಇರುತ್ತೀರಾ. ಆ ರೈಲು ಹಳಿಗಳ ಮೇಲೆ ಸಣ್ಣ ಸಣ್ಣ ಜಲ್ಲಿ ಕಲ್ಲುಗಳನ್ನು ಹಾಕಿರುತ್ತಾರೆ. ಅದೇ ಮೆಟ್ರೋ ಹಳಿಗಳಲ್ಲಿ ಈ ಕಲ್ಲುಗಳು ಇರುವುದಿಲ್ಲ. ಹೀಗೆ ಯಾಕೆ ಎಂದು ಯಾರಾದರೂ ಯೋಚನೆ ಮಾಡಿದ್ದೀರಾ?

ನಿಮಗೆ ಗೊತ್ತಿರುವ ಹಾಗೇನೇ ರೈಲುಗಳ ಗಾತ್ರ ಹಾಗು ತೂಕ ಬಹಳ ಹೆಚ್ಚಿರುತ್ತದೆ. ಈ ತೂಕ ನೇರವಾಗಿ ಭೂಮಿ ಮೇಲೆ ಬಿದ್ದರೆ, ಭೂಮಿ ಕುಸಿಯುವ ಸಾಧ್ಯತೆ ಹೆಚ್ಚಿದೆ. ಈ ಕಲ್ಲು ಗಳು ರೈಲು (Indian Railway) ಹಳಿಗಳ ಮಧ್ಯೆ ಒಂದು ಮೇಲ್ಮೆ ನಿರ್ಮಿಸುತ್ತದೆ. ಇದರಿಂದ ರೈಲಿನ ಭಾರಗಳು ಎರಡು ಹಳಿಗಳ ಮೇಲೆ ಸಮಾನವಾಗಿ ಬೀಳುವಂತೆ ಮಾಡುತ್ತದೆ. ಇನ್ನು ಮೆಟ್ರೋ (Metro) ರೈಲುಗಳಿಗೆ ಹೋಲಿಸಿದರೆ ತೂಕದಲ್ಲಿ ಸ್ವಲ್ಪ ಹಗುರವಾಗಿರುತ್ತದೆ. ಇದರಿಂದ ಹಳ್ಳಿಗಳಲ್ಲಿ ಹೆಚ್ಚಿನ ಭಾರ ಬೀಳುವುದಿಲ್ಲ. ಇದರಿಂದ ರೈಲು ಹಳ್ಳಿಗಳಲ್ಲಿ ಜೆಲ್ಲಿ ಕಲ್ಲುಗಳನ್ನು ಹಾಕಲಾಗುತ್ತದೆ.

Indian railway manufacturing cost

ಇನ್ನೊಂದು ಕಾರಣವೇನೆಂದರೆ ಈ ಜಲ್ಲಿ ಕಲ್ಲುಗಳು ಹಳಿಗಳನ್ನು ಅವುಗಳ ಸ್ಥಾನದಲ್ಲಿ ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಹಳಿಗಳ ಮೇಲೆ ರೈಲು ಚಲಿಸುವಾಗ ಕಂಪನವುಂಟಾಗುತ್ತದೆ. ಈ ಕಂಪನದಿಂದ ರೈಲು ಹಳ್ಳಿಗಳಲ್ಲಿ ಕೂಡ ಚಾಲನೆ ಉಂಟಾಗುತ್ತದೆ. ಈ ಸಣ್ಣ ಸಣ್ಣ ಕಲ್ಲುಗಳು ಹಳಿಗಳನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇನ್ನು ಮೆಟ್ರೋ (Metro) ನಗರ ಪ್ರದೇಶದಲ್ಲಿ ಮಾಡಲಾಗುತ್ತದೆ ಅಲ್ಲಿ ಸ್ಥಳ ಹಳ್ಳಿಗಳಲ್ಲಿ ಹಾಕ್ವಷ್ಟು ಸ್ಥಳ ಕೂಡ ಕಡಿಮೆ ಇರುತ್ತದೆ. ಆದ್ದರಿಂದ ಅಲ್ಲಿ ಇವುಗಳನ್ನ ಹಾಕಲಾಗುವುದಿಲ್ಲ.

Related Article

Leave a Reply

Your email address will not be published. Required fields are marked *