ಎಲ್ಲರಿಗೂ ಜೀವನದಲ್ಲಿ ಎಲ್ಲವೂ ಬೇಕು ಎಂದು ಆಸೆ ಇದ್ದೇ ಇರುತ್ತದೆ. ಆದರೆ ಎಲ್ಲವೂ ನಾವು ದುಡಿದ ಹಣದಿಂದ ಗಳಿಸಿದಾಗ ಮಾತ್ರ ಅದರ ಸಂಪೂರ್ಣ ಸಂತೃಪ್ತಿ ನಮಗೆ ಇರುತ್ತದೆ. ಅದೇ ಬೇರೆಯವರ ಹಣಕ್ಕೆ ಆಸೆ ಪಟ್ಟಾಗ ಅದು ಸ್ವಾರ್ಥ ಆಗುತ್ತದೆ. ಈ ವಿಷಯದಲ್ಲಿ ಆಗಿದ್ದು ಅದೆ. ಇಲ್ಲೊಂದು ಮಾಟ್ರಿಮೊನಿ ಸೈಟ್ ಒಂದರಲ್ಲಿ ಈ ಮಹಿಳೆ ಹಾಕಿದ ಪೋಸ್ಟ್ ಒಂದು ಈಗ ಬಹಳ ವೈರಲ್ ಆಗಿದ್ದು, ಇಂಟರ್ನೆಟ್ ನಲ್ಲಿ ಹವಾ ಎಬ್ಬಿಸಿದೆ. ನೆಟ್ಟಿಗರೆಲ್ಲ ಸರಿಯಾಗಿ ಕ್ಲಾಸ್ ತೆಗೆಯುತ್ತಾ ಇದಾರೆ. ಇಲ್ಲಿ ಅವರ ಹೆಸರನ್ನು ಮರೆ ಮಾಚಲಾಗಿದೆ. ಯಾವುದೇ ರೀತಿಯ ವೈಯಕ್ತಿಕ ವಿಚಾರಗಳನ್ನು ಇಲ್ಲಿ ಹೇಳಲಾಗಿಲ್ಲ . ಬದಲಾಗಿ ಸಮಾಜ ಹೇಗೆ ಸಾಗುತ್ತಿದೆ ಎಂಬ ಒಂದು ಸಣ್ಣ ತುಣುಕು ಅಷ್ಟೆ.
ಈಕೆ ವೃತ್ತಿಯಲ್ಲಿ ಶಿಕ್ಷಕಿ, ಇದು ಇವರಿಗೆ ಎರಡನೇ ಮದುವೆ. ಖಾಸಗಿ ಶಾಲೆ ಒಂದರಲ್ಲಿ ಶಿಕ್ಷಕಿ ಆಗಿ ಕೆಲಸ ಮಾಡುವ ಇವರಿಗೆ ಸಿಗುವುದು ಬರಿ 11000 ಸಂಬಳ. ಆದರೆ ಇವರು ಮ್ಯಾಟ್ರಿ ಮೋನಿ ಸೈಟ್ ನಲ್ಲಿ ಹಾಕಿದ ತಮ್ಮ ಡಿಮಾಂಡ್ ನೋಡಿ ನೆಟ್ಟಿಗರು ಇದನ್ನು ವೈರಲ್ ಮಾಡಿದ್ದಾರೆ. ಇವರ ಡಿಮಾಂಡ್ ಗಳು ಇರಿತಿಯಾಗಿ ಇದೆ.
ತಾನು ತನ್ನ ಅಪ್ಪ ಅಮ್ಮನ ಜೊತೆ ವಾಸವಾಗಿದ್ದು, ಅವರು ನನ್ನನ್ನು ಅವಲಂಬಿತರಾಗಿದ್ದಾರೆ. ಅವರು ಮದುವೆ ಆದಮೇಲೆ ನಮ್ಮ ಜೊತೆಗೆ ಇರುತ್ತಾರೆ. ನನಗೆ ಬೇಕಾದ ಹುಡುಗ ಸಾಫ್ಟವೇರ್ ಇಂಜಿನಿಯರ್ ಇಲ್ಲಾಂದ್ರೆ ಡಾಕ್ಟ್ರ ಆಗಿರಬೇಕು. ಪ್ರತಿ ತಿಂಗಳು ಕನಿಷ್ಠ 250000 ಲಕ್ಷ ಸಂಬಳ ಇರಬೇಕು. ಯುಎಸ್ಎ ಯಲ್ಲಿ ನೆಲೆಸಿರುವ ಅವರಾದರೂ ಓಕೆ. ಹಾಗೆ ಇನ್ನೂ ತಮಗೆ ಸರ್ಪ್ರೈಸ್ ಗಾಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದು ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು ಎಲ್ಲರೂ ಆಕೆಯ ವಿರುದ್ಧವಾಗಿ ಕಾಮೆಂಟ್ ಹಾಕಲು ಶುರು ಮಾಡಿದ್ದು.ಇದೀಗ ಇಂಟರ್ನೆಟ್ ಸೆನ್ಸೇಷನ್ ಆಗಿದೆ. ಅದೇನೇ ಇರಲಿ ಇಬ್ಬರು ಸಮಾನವಾಗಿ ಇರಬೇಕು ಎಂಬ ಭಾವನೆ ಬೆಳೆಸಿಕೊಂಡರೆ ಮಾತ್ರ ಜೀವನ ಸಲೀಸಾಗಿ ಸಾಗಿಸಲು ಸಾಧ್ಯ.