ವಿಶ್ವದ ಕೇವಲ 50 ಜನ ಪೈಲಟ್ ಗಳಿಗೆ ಮಾತ್ರ ಭೂತಾನ್ ನ ಪ್ಯಾರೋ ಏರ್ಪೋರ್ಟ್ ನಲ್ಲಿ ಫ್ಲೈಟ್ ಲ್ಯಾಂಡ್ ಮಾಡೋ ಲೈಸೆನ್ಸ್ ಇದೆ! ಯಾಕಾಗಿ ? ಏನಿದೆ ಅಂತಹ ವಿಷಯ? ಇಲ್ಲಿದೆ ವರದಿ.

ಬದಲಾಗುತ್ತಿರುವ ಜಗತ್ತು, ಆಧುನಿಕರಣದತ್ತ ಮುಖ ಮಾಡಿ ನಿಂತಿದೆ, ಈ ಕಾಲಘಟ್ಟದಲ್ಲಿ ಎಲ್ಲಾ ರೀತಿಯ ಸಚಾರಿ ವ್ಯವಸ್ಥೆಗಳು ಕೂಡ ತೀವ್ರ ಗತಿಯಲ್ಲಿ ಬೆಳವಣಿಗೆ ಸಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ವೇಗವಾಗಿ ಬೆಳೆಯುತ್ತಿರುವ ಆಚಾರಿ ವ್ಯವಸ್ಥೆ ಅಂದರೆ ವಿಮಾನ ಸಂಚಾರ ವಿಶ್ವವ್ಯಾಪಿ ಹಲವಾರು ಏರ್ಪೋರ್ಟ್ ಗಳು ಬರುತ್ತಲೇ ಇದೆ. ಅಂದಾಜು ಲೆಕ್ಕ ಪ್ರಕಾರ ಸರಿ ಸುಮಾರು 40 ಮಿಲಿಯನ್ ವಿಮಾನಗಳು ವಿಶ್ವದಾದ್ಯಂತ ಕಾರ್ಯ ನಿರ್ವಹಿಸುತ್ತದೆ. ಇದನ್ನು ನಿರ್ವಹಿಸಲು ಸರಿ ಸುಮಾರು 5 ಕೋಟಿ  ಅಧಿಕ ಪೈಲಟ್ ಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. 

ಇಷ್ಟೆಲ್ಲಾ ಕೋಟ್ಯಾಂತರ ಪೈಲಟ್ ಇರುವಾಗ ಭೂತಾನ್ ನ ಪ್ಯಾರೊ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಲ್ಯಾಂಡ್ ಮಾಡುವ ಲೈಸೆನ್ಸ್ ಎಲ್ಲಾ ಪೈಲಟ್ ಗಳಿಗೆ ಸಿಗುವುದಿಲ್ಲ . ಹೌದು ಅಚ್ಚರಿ ಅನಿಸಿದರೂ ಸತ್ಯ ಒಟ್ಟಾರೆಯಾಗಿ ಅದೆಷ್ಟೋ ಕೋಟಿ ಪೈಲಟ್ ಗಳ ಮಧ್ಯೆ ಕೇವಲ 50 ಜನ ಪೈಲಟ್ ಗಳಿಗೆ ಮಾತ್ರ ಈ ಒಂದು ಲೈಸೆನ್ಸ್ ಇದೆ. ಈ 50 ಜನರನ್ನು ಬಿಟ್ಟು ಬೇರೆ ಯಾರು ಕೂಡ ಈ ಪ್ರದೇಶದಲ್ಲಿ ವಿಮಾನ ನಿಲ್ಲಿಸುವ ಹಾಗೆ ಇಲ್ಲ. ಇಷ್ಟೆಲ್ಲಾ ಆಧುನೀಕರಣ ಆಗಿತ್ತಿದ್ದರು ಕೇವಲ 50 ಜನ ಯಾಕೆ ? ಏನಿದರ ಹಿಂದಿನ ಮರ್ಮ ?

ಈ ವಿಮಾನ ನಿಲ್ದಾಣ ಸಮುದ್ರ ಮಟ್ಟದಿಂದ 7382 ಫೀಟ್ ಎತ್ತರದಲ್ಲಿದೆ. ಹಾಗೆ ಹಿಮಾಲಯ ಪರ್ವತದ ರೀತಿ ಎತ್ತರದಲ್ಲಿ ಅಂದರೆ 18000 ಫೀಟ್ ಎತ್ತರಕ್ಕೆ ಇದೆ. ಇಲ್ಲಿ ಕೇವಲ ಒಂದೇ ರನ್ ವೇ ಇದ್ದು. ಯಾವುದೇ ರೀತಿಯ ರಾಡಾರ್ ತಂತ್ರಜ್ಞಾನ ಇಲ್ಲ. ಹಾಗೆ ಇಲ್ಲಿ ವಾತಾವರಣ ಕೂಡ ಪ್ರೆಡಿಕ್ಟ್ ಮಾಡಲು ಸಾಧ್ಯವಿಲ್ಲ.ರಾಡಾರ್ ಇಲ್ಲದೆ ಅನಾನುಕೂಲ ವಾತಾವರಣದಲ್ಲಿ ವಿಮಾನ ಇಳಿಸಬಲ್ಲ ನೈಪುಣ್ಯತೆ ಹೊಂದಬಲ್ಲ ಪೈಲಟ್ ಗಳಿಗೆ ಮಾತ್ರ ಈ ಒಂದು ಲೈಸೆನ್ಸ್ ನೀಡಲಾಗುತ್ತದೆ. ಎಷ್ಟೇ ಕಲಿತರೆ ಏನು ಕೆಲವೊಂದು ವಿಧ್ಯೆಗಳು ಎಲ್ಲರಿಗೂ ಸಿದ್ಧಿ ಆಗುವುದಿಲ್ಲ ಎಂಬುದಕ್ಕೆ ನೈಜ ಉದಾಹರಣೆ ಇದು.

ButhanHeightLicenceParo airportPilotsSea level
Comments (0)
Add Comment