ದೇಶದ ಮೊದಲ IAS ಅಧಿಕಾರಿ ಯಾರು ಎಂಬುದು ಗೊತ್ತೇ? ಇವರು ಬರಿ 21 ನೇ ವಯಸ್ಸಿನಲ್ಲಿ ಈ ಮೈಲಿಗಲ್ಲು ತಲುಪಿದ್ದರು.
ಹೌದು ಐಎಎಸ್ ಐಪಿಎಸ್ ಪರೀಕ್ಷೆಗಳು ಎಂದರೆ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಇಡೀ ನಮ್ಮ ದೇಶದಲ್ಲಿ ಉನ್ನತ ಹುದ್ದೆಗಳ ಪರೀಕ್ಷೆಗಳಲ್ಲಿ ಇದು ಮೊದಲನೇ ಸ್ಥಾನ. ಇದರಷ್ಟು ಕಠಿಣ ಪರೀಕ್ಷೆ ಮತ್ತೊಂದಿಲ್ಲ. ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಕಠಿಣ ತಪಸ್ಸು ಆಚರಿಸಿ ದೇವರನ್ನು ಒಲಿಸಿಕೊಳ್ಳುತ್ತಿದ್ದರು. ಅಂತಹುದೇ ಕಠಿಣ ತಪಸ್ಸು ಈ ಪರೀಕ್ಷೆ ತೇರ್ಗಡೆ ಹೊಂದಲು ಬೇಕು. ಅದೆಷ್ಟೋ ಜನರು ಈಗಲೂ ನಿದ್ದೆ ಊಟ ಮನೆ ಮಠ ಬಿಟ್ಟು ಇದಕ್ಕಾಗಿಯೇ ತಯಾರಿ ನಡೆಸುತ್ತಾ ಇದ್ದಾರೆ.
ಅಂತಹುದೇ ಪ್ರಯತ್ನಕ್ಕೆ ಕೈ ಹಾಕಿದ ಮೊದಲ ವ್ಯಕ್ತಿಯ ಬಗ್ಗೆ ನಾವಿಲ್ಲಿ ತಿಳಿಯೋಣ.ಲಾರ್ಡ್ ಮೌಂಟ್ ಮೆಕಾಲೆ ಅವರ ಶಿಫಾರಸ್ಸಿನ ಮೇರೆಗೆ 1854 ರಲ್ಲಿ ಐಎಎಸ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಭಾರತದ ವ್ಯಕ್ತಿ ಒಬ್ಬರು ಮೊದಲ ಬಾರಿಗೆ ಈ ಪರೀಕ್ಷೆಯ ಯಶಸ್ಸು ಸಾಧಿಸಿದ್ದು 1863 ರಲ್ಲೀ. ಇದರಿಂದಲೇ ಈ ಪರೀಕ್ಷೆಯ ಕಠಿಣತೆ ಎಷ್ಟಿತ್ತೆಂದು ಊಹಿಸಬಹುದು. ಈ ಪರೀಕ್ಷೆ ತೇರ್ಗಡೆ ಆ ವ್ಯಕ್ತಿ ಮತ್ಯಾರು ಅಲ್ಲ ಸತ್ಯೇಂದ್ರ ನಾಥ ಟಾಗೋರ್. ಇವರು ರವೀಂದ್ರ ನಾಥ ಟಾಗೋರ್ ಅವರ ಸಹೋದರ.
1862 ರಲ್ಲ ಇವರು ಇಂಗ್ಲೆಂಡ್ ಗೆ ಪರೀಕ್ಷೆ ಬರೆಯಲು ಹೋಗಿದ್ದರು. ಅಲ್ಲಿ 1863 ರಲ್ಲು ತೇರ್ಗಡೆ ಹೊಂದಿ ನಂತರ ಮುಂಬೈ ಅಲ್ಲಿ 1864 ಕ್ಕೇ ಅಧಿಕಾರ ಕೈಗೆತ್ತಿಕೊಂಡರು. ಹೀಗೆ ಆರಂಭವಾದ ಈ ಜರ್ನಿ ಇದೀಗ ಅದೆಷ್ಟೋ ಯುವ ಹುಡುಗರಲ್ಲಿ ಐಎಎಸ್ ಐಪಿಎಸ್ ಆಗಬೇಕು ಎಂಬ ಕನಸನ್ನು ಹುಟ್ಟು ಹಾಕಿದೆ. ಸಾಧನೆ ಮಾಡಲು ಅನುಭವದ ಅಗತ್ಯ ಇಲ್ಲ ಮಾಡಬೇಕು ಎಂಬ ಛಲ ಒಂದಿದ್ದರೆ ಸಾಕು ಏನನ್ನು ಬೇಕಾದರೂ ಸಾಧಿಸಬಹುದು.