ಇದಪ್ಪ ಆಫರ್ ಅಂದ್ರೆ: ಜಿಯೋ 5 ಜಿ ಸೇವೆ ಪಡೆಯಲು ರಿಚಾರ್ಜ್ ಪ್ಲಾನ್ ಎಷ್ಟು ಬೇಕಂತೆ ಗೊತ್ತೇ?? ನೆಟ್ವರ್ಕ್ ಪ್ರಾಬ್ಲಮ್ ಎಲ್ಲ ಡಮಾರ್ ಆಗುತ್ತೆ.

ಜಿಯೋ ಸಂಸ್ಥೆಯು 5ಜಿ ಸೇವೆಯನ್ನು ವಿಜಯಶಮಿ ಹಬ್ಬದ ಲಾಂಚ್ ಮಾಡಿದೆ, ಮುಂಬೈ ದೆಹಲಿ, ವಾರಾಣಸಿ ಮತ್ತು ಕೋಲ್ಕತ್ತಾದಲ್ಲಿ ಜಿಯೋ 5ಜಿ ಸೇವೆ ಲಾಂಚ್ ಆಗಿದೆ. ಶೀಘ್ರದಲ್ಲೇ ಬೇರೆ ಪ್ರದೇಶಗಳಲ್ಲಿ ಸಹ ಜಿಯೋ 5ಜಿ ಸೇವೆಗಳು ಶುರುವಾಗಲಿದೆ. ಜಿಯೋ ಸಂಸ್ಥೆಯು ತಮ್ಮ ಗ್ರಾಹಕರಿಗೆ ವೆಲ್ಕಮ್ 5ಜಿ ಹೊಸ ಆಫರ್ ನೀಡಿದೆ. ಈ ಆಫರ್ ಪಡೆಯುವುದು ಹೇಗೆ? ಜಿಯೋ 5ಜಿ ಸೇವೆ ಪಡೆಯಲು ನೀವು ಯಾವ ಪ್ಲಾನ್ ರೀಚಾರ್ಜ್ ಮಾಡಿಸಿರಬೇಕು? ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಜಿಯೋ 5ಜಿ ಸೇವೆಯನ್ನು ನಿಮ್ಮ ಮೊಬೈಲ್ ನಲ್ಲಿ ಪಡೆಯಲು 239 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಪ್ಲಾನ್ ಅನ್ನು ನೀವು ನಿಮ್ಮ ಜಿಯೋ ನಂಬರ್ ಗೆ ರೀಚಾರ್ಜ್ ಮಾಡಿಸಿರಬೇಕು. ಈ ರೀಚಾರ್ಜ್ ನಲ್ಲಿ ನಿಮಗೆ 4ಜಿ ಸೇವೆ ಇರುತ್ತದೆ, ಇದನ್ನು ನೀವು 5ಜಿ ಸೇವೆಗೆ ಬದಲಾವಣೆ ಮಾಡಿಕೊಳ್ಳಬಹುದು, ಜಿಯೋ 5ಜಿ ನಲ್ಲಿ ನೀವು ಪಡೆಯುವ ಡೇಟಾ ಸ್ಪೀಡ್ 1ಜಿಬಿಪಿಎಸ್. ಜೊತೆಗೆ ಈ 5ಜಿ ಸೇವೆಯನ್ನು ಆಟೊಮ್ಯಾಟಿಕ್ ಆಗಿ ಪಡೆಯಲು ಆಗುವುದಿಲ್ಲ, ಜಿಯೋ ಇಂದ ನಿಮಗೆ 5ಜಿ ಸೇವೆ ಪಡೆಯಲು ಆಹ್ವಾನ ಬರುತ್ತದೆ, ಅದರ ಮೂಲಕ ನೀವು ಜಿಯೋ 5ಜಿ ಸೇವೆಯನ್ನು ಆನಂದಿಸಬಹುದು.

ಹೊಸದಾಗಿ 5ಜಿ ಸೇವೆ ಪಡೆಯಲು, ನೀವು ಸಿಮ್ ಕಾರ್ಡ್ ಬದಲಾಯಿಸುವ ಅಥವಾ ಹ್ಯಾಂಡ್ ಸೆಟ್ ಬದಲಾಯಿಸುವ ಅವಶ್ಯಕತೆ ಇಲ್ಲ. ಮೈ ಜಿಯೋ ಅಪ್ಲಿಕೇಶನ್ ನಲ್ಲಿ ನಿಮಗೆ 5ಜಿ ಸೇವೆ ಶುರು ಮಾಡಲು ಆಹ್ವಾನ ಬರುತ್ತದೆ, ಅದನ್ನು ಕ್ಲಿಕ್ ಮಾಡಿದಾಗ, 5ಜಿ ಸೇವೆಯನ್ನು ಆನಂದಿಸಬಹುದು. 5ಜಿ ಸೇವೆ ಶುರುವಾದಾಗ, ನಿಮ್ಮ ಡೇಟಾ ಪ್ಲಾನ್ 5ಜಿ ಸ್ಪೀಡ್ ಗೆ ಬದಲಾಗುತ್ತದೆ, ನಿಮ್ಮ ಪ್ಲಾನ್ ನ ವ್ಯಾಲಿಡಿಟಿ ಇರುವ ವರೆಗು ಅನ್ ಲಿಮಿಟೆಡ್ 5ಜಿ ಡೇಟಾ ಆನಂದಿಸಬಹುದು. 239 ರೂಪಾಯಿಗಳ 5ಜಿ ಪ್ಲಾನ್ ನ ನಿರ್ದಿಷ್ಟ ಬೆಲೆ ಅಲ್ಲ, ವೆಲ್ಕಮ್ ಆಫರ್ ನಲ್ಲಿ ಈ ಸೇವೆಯನ್ನು ನೀಡಲಾಗಿದೆ. ಈ ರೀತಿ ಮಾಡುವ ಮೂಲಕ ನೀವು 5ಜಿ ಸೇವೆ ಎಂಜಾಯ್ ಮಾಡಬಹುದು.

Comments (0)
Add Comment