ಈ ಅಂತಾರಾಷ್ಟ್ರೀಯ ತಂಡದ ಒಟ್ಟು ಮೊತ್ತ ಕೇವಲ 8 ರನ್. ಪಂದ್ಯ ಕೇವಲ 7 ಬಾಲ್ ಗಳಲ್ಲಿ ಮುಕ್ತಾಯ.

ನೇಪಾಳದ ಮಹಿಳಾ ಕ್ರಿಕೆಟ್ ತಂಡ ಟಿ-೨೦ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. ಹತ್ತೊಂಬತ್ತು ವರ್ಷದೊಳಗಿನವರ ಮಹಿಳೆಯರ ಟಿ-೨೦ ವಿಶ್ವಕಪ್ ನ ಕ್ವಾಲಿಫೈರ್ ಪಂದ್ಯದಲ್ಲಿ ನೇಪಾಳದ ಮಹಿಳಾ ತಂಡ ೮ ರನ್ ಗಳಿಗೆ ಆಲ್ ಔಟ್ ಆಗಿದೆ. UAE ತಂಡ ಕೇವಲ ೭ ಬಾಲ್ ಗಳಲ್ಲಿ ಈ ಪಂದ್ಯವನ್ನು ಗೆದ್ದುಕೊಂಡಿದೆ. ಎಮಿರೇಟ್ಸ್ ನ ಮಾಹಿಕ ಗೌರ್ ಎರಡು ರನ್ ಗಳಿಗೆ ಅತಿ ಹೆಚ್ಚು 5 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯ ಮಲೇಷ್ಯಾ ದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ನೇಪಾಳ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ.

ನೇಪಾಳ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದಿತ್ತು. ನೇಪಾಳ ತಂಡದ ಮೊದಲ ಆರು ಬ್ಯಾಟ್ಸಮನ್ ಗಳು ಯಾವುದೇ ರನ್ ಗಳಿಸದೆ ಪೆವಿಲಿಯನ್ ನತ್ತ ಮುಖ ಮಾಡಿದ್ದಾರೆ. ೨೦ ಓವರ್ ಗಳ ಈ ಪಂದ್ಯದಲ್ಲಿ ನೇಪಾಳ ತಂಡ ೯.೧ ಓವರ್ ತನಕ ಕ್ರೀಸ್ ಅಲ್ಲಿತ್ತು. ನೇಪಾಳ ತಂಡದ ಪರ ಸ್ನೇಹ ಮಹಾರಾಜ್ ಗರಿಷ್ಟ 3 ರನ್ ಗಳಿಸಿದರು. UAE ನ ಮಹಿಕ್ ಗೌರ್ ತಮ್ಮ ಹೆಸರಿನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆ ಪಡೆದುಕೊಂಡಿದ್ದಾರೆ. ಮಾಹಿಕ ಎರಡು ಮೇಡನ್ ಓವರ್ ಕೂಡ ಹಾಕಿದ್ದಾರೆ. ಹಾಗೇನೇ ಕೇವಲ ಎರಡು ರನ್ ನೀಡಿ 5 ವಿಕೆಟ್ ಪಡೆದರು. ನೇಪಾಳ ಕೇವಲ 8 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ ಕಳೆದುಕೊಂಡಿದೆ.

ನೇಪಾಳ ತಂಡದ ೮ ರನ್ ಗಳ ಟಾರ್ಗೆಟ್ ಗೆ UAE ೯ ರನ್ ಗಳನ್ನೂ ಗಳಿಸಬೇಕಿತ್ತು. UAE ಈ ರನ್ ಅನ್ನು ಕೇವಲ 7 ಎಸೆತದಲ್ಲಿ ಪೂರ್ತಿ ಗೊಳಿಸಿತು. UAE ಪರ ತಿರ್ತ ಸತೀಶ್ ಔಟಾಗದೆ 4 ರು ಗಳಿಸಿದ್ದಾರೆ. ಈ ಪಂದ್ಯ ಒಂದು ಗಂಟೆಯೂ ನಡೆಯಲಿಲ್ಲ. ಅದಕ್ಕಿಂತ ಮೊದಲೇ ಪಂದ್ಯ ಪೂರ್ಣಗೊಂಡಿತ್ತು. ಇದು ಕಡಿಮೆ ಸ್ಕೋರ್ ಅಲ್ಲ. ಇದಕ್ಕಿಂತ ಹಿಂದೆ ಮಾಲಿ ಮಹಿಳಾ ತಂಡ ಕೇವಲ 6 ರನ್ ಗಳಿಗೆ ಆಲ್ ಔಟ್ ಆಗಿದೆ. ಇನ್ನೊಂದು ಬಾಂಗ್ಲಾದೇಶ ಹಾಗು ಮಾಲ್ಡೀವ್ಸ್ ನಡುವಿನ ಪಂದ್ಯದಲ್ಲಿ ಬಾಂಗ್ಲಾದೇಶ ಮಾಲ್ಡೀವ್ಸ್ ವಿರುದ್ಧ ಕೇವಲ 6 ರನ್ ಗಳಿಗೆ ಆಲೌಟ್ ಆಗಿತ್ತು.

Comments (0)
Add Comment