ಐಪಿಎಲ್ ಬಿಡ್ಡಿಂಗ್ ವೇಳೆ ನಡೆಯಿತೆ ದೊಡ್ಡ ಪ್ರಮಾದ? ಇದೀಗ ವೈರಲ್ ಆಗಿದೆ ವಿಡಿಯೋ.

ಐಪಿಎಲ್ ಎಂದರೆ ಗಲ್ಲಿ ಗಲ್ಲಿಯಲ್ಲಿ ಸುದ್ದಿ ಮಾಡಿರುವ ಕ್ರಿಕೆಟ್ ಟೂರ್ನಮೆಂಟ್. ಅತ್ಯಂತ ಹೆಚ್ಚು ಹಣದ ಹೊಳೆಯನ್ನು ಹಾರೈಸುವ ಪಂದ್ಯ ಇದು. ನ್ಯಾಯಯುತವಾಗಿ ಹಣದ ಹರಿವು ಆಗುತ್ತದೆ, ಆದೆ ತರ ಅನ್ಯಾಯದ ಹಾದಿಯಲ್ಲಿ ಕೂಡ ನಡೆಯುತ್ತದೆ ಅದು ಬೆಟ್ಟಿಂಗ್ ದಂದೆಗಳ ಮೂಲಕ. ಇದೀಗ ಐಪಿಎಲ್ ಬಿಡ್ಡಿಂಗ್ ವಿಚಾರ ಬಾರಿ ಸುದ್ದಿ ಮಾಡುತ್ತಿದೆ. ಇಲ್ಲಿ ಮೋಸ ಆಗಿದೆ ಎಂಬ ವಿಚಾರ ಸೋಶಿಯಲ್ ಮೀಡಿಯಾ ದಲ್ಲು ವೈರಲ್ ಆಗುತ್ತಿದೆ. ಹಾಗಾದರೆ ನಡೆದ ಘಟನೆ ಏನು ಬನ್ನಿ ತಿಳಿಯೋಣ.

ಮೊನ್ನೆ ತಾನೆ ಐಪಿಎಲ್ ಬಿಡ್ಡಿಂಗ್ ಮುಗಿದಿದ್ದು, ಘಟಾನುಘಟಿ ಆಟಗಾರರ ಖರೀದಿ ಮುಗಿದು ಪ್ರಭಲ ತಂಡವನ್ನು ಕಟ್ಟಿಕೊಂಡಿದೆ. ಆದರೆ ಮೊನ್ನೆ ನಡೆದ ಬಿಡ್ಡಿಂಗ್ ಘಟನೆಯಲ್ಲಿ ಮೋಸ ಆಗಿದೆ ಎಂಬ ವಿಚಾರ ಸೋಶಿಯಲ್ ಮೀಡಿಯಾ ದಲ್ಲೂ ಹಂಚಿಕೊಂಡು ಸುದ್ದಿ ಮಾಡಿದ್ದಾರೆ. ಈ ಬಾರಿ ಹ್ಯುಗ್ ಅವರ ಅನಾರೋಗ್ಯ ಕಾರಣದಿಂದ ಚಾರು ಶರ್ಮಾ ಬಿಡ್ಡಿಂಗ್ ಆಯೋಜಿಸಿದ್ದರು . ಈ ಸಮಯದಲ್ಲಿ ವಾಷಿಂಗ್ ಟನ್ ಸುಂದರ ಅವರ ಬಿಡ್ಡಿಂಗ್ ವೇಳೆ ಮೋಸ ನಡೆದಿದೆ ಎಂದು ಹೇಳಲಾಗುತ್ತಿದೆ. ಸುಂದರ್ ಅವರ ಬಿಡ್ಡಿಂಗ್ 6.50ಕೋಟಿ ತಲುಪಿದಾಗ ಗುಜರಾತ್ ಟೈಟಾನ್ 6.75 ಕೋಟಿ ಬಿಡ್ಡಿಂಗ್ ಮಾಡಿತು, ಇದಕ್ಕೆ ಉತ್ತರವಾಗಿ ಡೆಲ್ಲಿ ಕ್ಯಾಪಿಟಲ್ 7 ಕೋಟಿ ಮಾಡಿತು ಆದರೆ ಮುಂದಕ್ಕೆ ಚಾರು ಶರ್ಮಾ 7.25ಕೋಟಿ ಮಾಡಬೇಕಿತ್ತು ಆದರೆ ಇದಕ್ಕೆ ಬದಲಾಗಿ ಅವರು 7.75ಕೋಟಿ ರೂಪಾಯಿ ಹೇಳಿದ್ದಾರೆ. ಇದು ಬಿಡ್ಡಿಂಗ್ ನಿಯಮದ ವಿರುದ್ಧ ಆಗಿತ್ತು ಮತ್ತು ಡೆಲ್ಲಿ ಕ್ಯಾಪಿಟಲ್ ಪರ ನಿಂತು ಮಾಡಿದ ಹಾಗೆ ಇತ್ತು ಎಂದು ಸೋಶಿಯಲ್ ಮೀಡಿಯಾ ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ ಕೊನೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡ 8.75ಕೋಟಿ ಕೊಟ್ಟು ಖರೀದಿ ಮಾಡಿತು.

ಇನ್ನೊಂದು ಬಿಡ್ಡಿಂಗ್ ವೇಳೆ ಖಲೀಲ್ ಅಹಮ್ಮದ್ ಅವರನ್ನು ಡೆಲ್ಲಿ ಕ್ಯಾಪಿಟಲ್ 5 ಕೋಟಿ ರೂಪಾಯಿಗೆ ಬಿಡ್ ಮಾಡಿತು. ಅದಕ್ಕೆ ಉತ್ತರ ವಾಗು ಮುಂಬೈ 5.25 ಕೋಟಿ ಮಾಡಿತು. ಮತ್ತೆ ಡೆಲ್ಲಿ 5.50ಕೋಟಿಗೆ ಏರಿಸಿತ್ತು, ಆದರೆ ತಾವು ಅದನ್ನು ಹಿಂಪಡೆಯುವುದಾಗಿ ಹೇಳಿತು. ಈ ಸಂದರ್ಭದಲ್ಲಿ ಚಾರು ಶರ್ಮಾ ಖಲೀಲ್ ಅಹಮ್ಮದ್ ಅವರನ್ನು 5.25 ಕೋಟಿಗೆ ಮುಂಬೈ ತಂಡಕ್ಕೆ ಸೇರಿಸಬೇಕು ಆದರೆ ಅವರು ಅದೇ ಮೊತ್ತಕ್ಕೆ ಡೆಲ್ಲಿ ತಂಡಕ್ಕೆ ಎಂದು ಘೋಷಣೆ ಮಾಡಿದರು. ಈ ಎರಡು ವಿಚಾರಗಳು ಡೆಲ್ಲಿ ತಂಡದ ಪರವಾದ ನಿಲುವು ತೋರುತ್ತಿದೆ. ಈ ಬಾರಿಯ ಬಿಡ್ಡಿಂಗ್ ನಲ್ಲಿ ಮೊಸವಾಗಿದೆ ಎಂದು ಸೋಶಿಯಲ್ ಮೀಡಿಯಾ ದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಸಖತ್ ವೈರಲ್ ಆಗಿದ್ದು ಪರ ವಿರೋಧ ಚರ್ಚೆ ನಡೆಯುತ್ತಾ ಇದೆ.

Comments (0)
Add Comment