ಒಂದು ಕಡೆ ಆಧಿಪುರುಷ್ ಟ್ರೈಲರ್ ಟ್ರೊಲ್ ಆಗುತ್ತಿರುವಾಗ ನಿರ್ದೇಶಕ ಓಂ ರಾವತ್ ಹೇಳಿದ್ದೇನು ಗೊತ್ತೇ??ನೀಡಿದ ಕಾರಣ ಏನು ಗೊತ್ತೇ??

ನಟ ಪ್ರಭಾಸ್ ಹಾಗೂ ಕೃತಿ ಸನೊನ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿ, ಓಂ ರಾವತ್ ಅವರು ನಿರ್ದೇಶನ ಮಾಡಿರುವ, ರಾಮಾಯಣ ಕಥೆಯ ಆಧಾರಿತ ಸಿನಿಮಾ ಆದಿಪುರುಷ್ ಸಿನಿಮಾ ಟ್ರೈಲರ್ ಆಕ್ಟೊಬರ್ 2ರಂದು ಬಿಡುಗಡೆಯಾಗಿ ಭಾರಿ ಟೀಕೆಗೆ ಒಳಗಾಗಿದೆ, ಸಿನಿಮಾ ಸಿಜಿಐ ಮತ್ತು ವಿ.ಎಫ್.ಎಕ್ಸ್ ಚೆನ್ನಾಗಿಲ್ಲ ಎಂದು ಸಿನಿಪ್ರಿಯರು ಟ್ರೋಲ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಅವರು ರಾಘವನಾಗಿ, ಕೃತಿ ಸನೊನ್ ಜಾನಕಿಯಾಗಿ, ನಟ ಸೈಫ್ ಅಲಿ ಖಾನ್ ಅವರು ಲಂಕೇಶನ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ಕಾರಣಗಳಿಗೆ ಆದಿಪುರುಷ್ ಸಿನಿಮಾ ಟೀಸರ್ ಟೀಕೆಗೆ ಒಳಗಾಗಿದೆ.

ಇದೀಗ ಟೀಸರ್ ಟ್ರೋಲ್ ಆಗುತ್ತಿರುವ ಬಗ್ಗೆ ಮತ್ತು ಟೀಕೆಗೆ ಒಳಗಾಗಿರುವ ಬಗ್ಗೆ ನಿರ್ದೇಶಕ ಓಂ ರಾವತ್ ಅವರು ಮಾತನಾಡಿ, ತಮ್ಮನ್ನು ತಾವು ಡಿಫೆಂಡ್ ಮಾಡಿಕೊಂಡಿದ್ದಾರೆ., ಟ್ರೋಲ್ ಮತ್ತು ಟೀಕೆಗಳು ನನಗೆ ಆಶ್ಚರ್ಯ ತಂದಿಲ್ಲ ಎಂದಿದ್ದಾರೆ. “ಟ್ರೋಲ್ ಗಳನ್ನು ನೋಡಿ ಬೇಸರ ಆಗಿದ್ದು ನಿಜ, ಆದರೆ ಇದು ನನಗೆ ಆಶ್ಚರ್ಯವೇನಿಲ್ಲ. ಈ ಸಿನಿಮಾ ಬಿಗ್ ಸ್ಕ್ರೀನ್ ನಲ್ಲಿ ನೋಡಲು ತಯಾರಿಸಿರುವ ಸಿನಿಮಾ. ಚಿಕ್ಕ ಸ್ಕ್ರೀನ್ ಗಳಿಗಾಗಿ ಮಾಡಿರುವ ಸಿನಿಮಾ ಅಲ್ಲ. ಮೊಬೈಲ್ ನಲ್ಲಿ ನೋಡುವುದರಿಂದ ಸಿನಿಮಾ ಎಫೆಕ್ಟ್ ಗೊತ್ತಾಗುವುದಿಲ್ಲ. ನನಗೆ ಅವಕಾಶ ಕೊಟ್ಟಿದ್ದರೆ ನಾನು ಯೂಟ್ಯೂಬ್ ನಲ್ಲಿ ಟೀಸರ್ ಬಿಡುಗಡೆಯನ್ನೇ ಮಾಡುತ್ತಿರಲಿಲ್ಲ. ಆದರೆ ಹೆಚ್ಚು ಜನರನ್ನು ತಲುಪಬೇಕಿರುವ ಕಾರಣ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲೇಬೇಕಿತ್ತು..

ಈ ಸಿನಿಮಾ ಹೆಚ್ಚಿನ ಜನರನ್ನು ಥಿಯೇಟರ್ ಗೆ ಬರುವ ಹಾಗೆ ಮಾಡಲು ತಯಾರಿಸಲಾಗಿದೆ. ಮುಖ್ಯವಾಗಿ ಹಿರಿಯರು ಚಿತ್ರಮಂದಿರಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ. ರಾಮಾಯಣದ ಕಥೆ ಆಗಿರುವುದರಿಂದ ಹಿರಿಯರು ಥಿಯೇಟರ್ ಗೆ ಬಂದು ಸಿನಿಮಾ ನೋಡಲಿ ಎನ್ನುವುದು ನಮ್ಮ ಆಸೆ. ಜನವರಿ 12, 2023ರಂದು ಥಿಯೇಟರ್ ನಲ್ಲಿ ಸಿನಿಮಾ ನೋಡುವಾಗ ಜನರಿಗೆ ಅರ್ಥವಾಗುತ್ತದೆ. ಈಗ ಇದರ ಬಗ್ಗೆ ಏನನ್ನೂ ಹೇಳಲು ಆಗುವುದಿಲ್ಲ, ನಾನು ಈಗಾಗಲೇ ಹೇಳಿದ ಹಾಗೆ ಇದು ದೊಡ್ಡ ಪರದೆಗಾಗಿ ಮಾಡಿರುವ ಸಿನಿಮಾ..” ಎಂದು ಟ್ರೋಲ್ ಗಳಿಗೆ ಉತ್ತರ ಕೊಟ್ಟಿದ್ದಾರೆ ಓಂ ರಾವತ್.

Comments (0)
Add Comment