ಒಂದು ಕಾಲದಲ್ಲಿ ಪ್ರಧಾನಮಂತ್ರಿ ಕೂಡ ಬಳಸುತ್ತಿದ್ದ ಅಂಬಾಸಿಡರ್ ಕಾರ್ ಹೊಸ ಲುಕ್ ಅಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಕಾರ್ ನ ಫಸ್ಟ್ ಲುಕ್ ಇದೀಗ ವೈರಲ್ ಆಗುತ್ತಿದೆ.

ಒಂದು ಕಾಲದಲ್ಲಿ ಭಾರತದ ರಸ್ತೆಗಳ ರಾಜ ಎಂದೇ ಕರೆಸಿಕೊಂಡಿದ್ದ ಅಂಬಾಸಿಡರ್ ಕಾರ್ ಯಾರಿಗೆ ತಾನೇ ಗೊತ್ತಿಲ್ಲ. ೯೦ ರ ದಶಕದ ಪ್ರತಿಯೊಬ್ಬರೂ ಕೂಡ ಈ ಕಾರಿನಲ್ಲಿ ಚಲಿಸದೆ ಇರಲಾರರು. ಕಾಲ ಬದಲಾದ ಹಾಗೆ ಈ ಕಾರ್ ಗಳ ಡಿಸೈನ್, ಸ್ಟೈಲ್, ಕ್ಷಮತೆ ಹಾಗು ಬೆಳೆಗಳಲ್ಲಿ ಬದಲಾವಣೆ ಆಗುತ್ತಾ ಹೋಯಿತು. ಇಂದು ಅನೇಕ ಕಾರ್ ಕಂಪನಿಗಳು ಇವೆ. ಒಂದೊಂದು ಕಾರ್ ಗಳಲ್ಲಿ ಒಂದೊಂದು ಹೊಸ ಆವಿಷ್ಕಾರ ದಿಂದ ಕೂಡಿರುತ್ತದೆ. ಇದೆ ಕಾರಣಕ್ಕೆ ೨೦೧೪ ರಲ್ಲಿ ಈ ಅಂಬಾಸಿಡರ್ ಕಾರು ಬೇಡಿಕೆ ಇಲ್ಲದೆ ಹಾಗೇನೇ ಆರ್ಥಿಕ ಸಂಕಷ್ಟದಿಂದ ತನ್ನ ಉತ್ಪಾದನೆ ನಿಲ್ಲಿಸಿತ್ತು. ಇದೀಗ ಇದೆ ಕಾರು ಹೊಸ ಲುಕ್ ಅಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ.

ಈಗ ಸಿಗುತ್ತಿರುವ ಮಾಹಿತಿ ಪ್ರಕಾರ ಈ ಅಂಬಾಸಿಡರ್ ಕಾರು ಹಿಂದೂಸ್ತಾನ್ ಮೋಟರ್ಸ್ ಮತ್ತೊಮ್ಮೆ ಉತ್ಪಾದಿಸಲು ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ಫ್ರಾನ್ಸ್ ಮೂಲದ ಪ್ರಖ್ಯಾತ ಆಟೋಮೊಬೈಲ್ ಸಂಸ್ಥೆ ಪಿಯುಗಿಯೋ ಕಂಪನಿ ಜೊತೆ ಮಾತುಕತೆ ಕೂಡ ನಡೆಸಲಾಗಿದೆ ಅಂತೇ. ಇದರ ಶೈಲಿ, ಲುಕ್ ಬಗ್ಗೆ ಕೂಡ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಬಾರಿ ಮಾರುಕಟ್ಟೆಗೆ ಬರಲಿರುವ ಅಂಬಾಸಿಡರ್ ಕಾರ್ ವಿದ್ಯುತ್ ಚಾಲಿತ ಕಾರ್ ಆಗಿರುತ್ತದೆ. ೧೯೯೦ ರ ತನಕ ಈ ಕಾರ್ ಗಳು ನಂಬರ್ ೧ ಸ್ಥಾನದಲ್ಲಿತ್ತು.

೨೦೧೪ ರಲ್ಲಿ ಉತ್ಪಾದನೆ ನಿಲ್ಲಿಸಸಿದ್ದರು ಕೂಡ ಇಂದು ಕೂಡ ನಾವು ಭಾರತದ ಹಲವು ಕಡೆ ಈ ಕಾರುಗಳನ್ನು ನೋಡಬಹುದಾಗಿದೆ. ಇದೆ ಕಾರು ಎಲೆಕ್ಟ್ರಿಕ್ ಕಾರ್ ಆಗಿ ಆಧುನಿಕ ಯುಗದ ಶೈಲಿಯಲ್ಲಿ ಯುವ ಜನತೆಯನ್ನು ಆಕರ್ಷಿಸಲು ಹಾಗೇನೇ ಉತ್ತಮ ವಿನ್ಯಾಸದೊಂದಿಗೆ ಬರಲಿದೆ ಎನ್ನುವ ವಿಚಾರ ಹಿಂದೂಸ್ತಾನ್ ಮೋಟರ್ಸ್ ಮುಖ್ಯಸ್ಥ ಉತ್ತಮ ಬೋಸ್ ಹೇಳಿದ್ದಾರೆ. ಇಷ್ಟೇ ಅಲ್ಲದೆ ಯೂರೋಪ್ ನ ಒಂದು ಸಂಸ್ಥೆ ೬೦೦ ಕೋಟಿ ಬಂಡವಾಳ ಹೂಡಲು ಕೂಡ ಮುಂದಾಗಿದೆ ಎನ್ನುವ ವರದಿಗಳು ಬರುತ್ತಿದೆ. ಈ ಅಂಬಾಸಿಡರ್ ಕಾರ್ ನ ಎಲೆಕ್ಟ್ರಿಕ್ ಶೈಲಿಯ ಹೊಸ ಕಾರ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಎಲ್ಲ ಮಾಹಿತಿ ಬರುವ ವರ್ಷ ಜನರ ಮುಂದೆ ಬರಲಿದೆ.

Comments (0)
Add Comment