ಚಾಣಕ್ಯ ನೀತಿ ಪ್ರಕಾರ ಈ ನಾಲ್ಕು ಗುಣ ಇರುವವರು ನಿಜವಾಗಲೂ ಒಳ್ಳೆಯ ಮಿತ್ರರಾಗಿರುತ್ತಾರೆ. ನೀವು ನಿಮ್ಮ ಗೆಳೆಯರ ಬಳಿ ನೋಡಿದ್ದೀರಾ ಈ ನಾಲ್ಕು ಗುಣ?

ಒಬ್ಬ ಒಳ್ಳೆಯ ಗೆಳೆಯ ವ್ಯಕ್ತಿಯ ಜೀವನ ಬದಲಿಸಬಲ್ಲ. ಒಬ್ಬ ವ್ಯಕ್ತಿಯ ಜೀವನದಲ್ಲಿ ಗೆಳೆಯನ ಪಾತ್ರ ತುಂಬಾ ಇರುತ್ತದೆ, ಅದೇ ರೀತಿ ಅವನ ಯೋಗದನವು ತುಂಬಾ ಇರುತ್ತದೆ. ಆಚಾರ್ಯ ಚಾಣಕ್ಯರ ಹೆಸರು ಭಾರತದ ಮಹಾನ್ ವಿದ್ವಾನರ ಪಟ್ಟಿಯಲ್ಲಿ ಸೇರಿದೆ. ಆಚಾರ್ಯ ಚಾಣಕ್ಯರ ನೀತಿ ಪಾಲನೆ ಮಾಡಿದರೆ ಪ್ರತಿ ವ್ಯಕ್ತಿ ಜೀವನದಲ್ಲಿ ಉತ್ತಮ ಮಟ್ಟಕ್ಕೆ ಏರಬಹುದು. ಚಾಣಕ್ಯರು ಒಳ್ಳೆ ಮಿತ್ರನ ಕೆಲವು ಗುಣಗಳನ್ನು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ. ಏನಿದು ಚಾಣಕ್ಯ ನೀತಿಗಳು ಇಲ್ಲಿದೆ ಮುಂದೆ ಓದಿ.

೧. ಕಷ್ಟದ ಸಮಯದಲ್ಲೂ ಕೈ ಬಿಡದವನು- ಆಚಾರ್ಯ ಚಾಣಕ್ಯರ ಪ್ರಕಾರ ಕಷ್ಟದ ಸಮಯದಲ್ಲೂ ಒಬ್ಬ ಮಿತ್ರ ಕೈ ಬಿಡಲಿಲ್ಲ ಎಂದರೆ ಅವನು ನಿಜವಾದ ಒಳ್ಳೆಯ ಸ್ನೇಹಿತನಾಗಿರುತ್ತಾನೆ. ಇಂತಹ ಸ್ನೇಹಿತ ಇದ್ದರೆ ಯಾವುದೇ ಕಷ್ಟದಿಂದ ಪಾರಾಗಬಹುದು ಎನ್ನುವುದು ಚಾಣಕ್ಯರು ಹೇಳುತ್ತಾರೆ. ನಾಡು ದಾರಿಯಲ್ಲಿ ಕೈ ಬಿಡುವ ಸ್ನೇಹಿತರ ಬಳಿ ಯಾವತ್ತೂ ಇರಬೇಡಿ ಹಾಗು ಸ್ನೇಹ ಕೂಡ ಮಾಡಬೇಡಿ ಎಂದು ಚಾಣಕ್ಯರು ಹೇಳುತ್ತಾರೆ.

೨. ಆರ್ಥಿಕವಾಗಿ ಕಷ್ಟ ಬಂದಾಗ ಸಹಾಯ ಮಾಡುವವ- ಆರ್ಥಿಕವಾಗಿ ನೀವು ಕಶ್ಟದಲ್ಲಿರುವಾಗ ಸಹಾಯ ಮಾಡಲು ಮುಂದೆ ಬರುವವ ಉತ್ತಮ ಸ್ನೇಹಿತನಾಗಿರುತ್ತಾನೆ. ನೀವು ಆರ್ಥಿಕವಾಗಿ ಕಷ್ಟದಲ್ಲಿರುವುದನ್ನು ನೋಡಲಾಗದೆ ಸಹಾಯ ಮಾಡಲು ಮುಂದೆ ಬರುವವನು ಒಬ್ಬ ಒಳ್ಳೆಯ ಮಿತ್ರನಾಗಿರುತ್ತಾನೆ. ಅದೇ ರೀತಿ ಅಂತವರನ್ನು ಇಂದಿಗೂ ದೂರ ಮಾಡಬೇಡಿ ಎಂದು ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳುತ್ತಾರೆ.

೩.ಪ್ರೀತಿ ಪಾತ್ರರನ್ನು ಕಳೆದುಕೊಂಡ ಸಮಯದಲ್ಲಿ ನಿಮ್ಮ ಜೊತೆ ನಿಲ್ಲುವವ ನಿಜವಾದ ಮಿತ್ರನಾಗಿರುತ್ತಾನೆ. ಪ್ರೀತಿ ಪಾತ್ರರು ಬಿಟ್ಟು ಹೋದ ಸಮಯದಲ್ಲಿ ಮನುಷ್ಯ ಮಾನಸಿಕವಾಗಿ ಕುಗಿಹೋಗಿರುತ್ತಾನೆ. ಅಂತಹ ಸಮಯದಲ್ಲಿ ಅವನಿಗೆ ಸಮಾಧಾನ ಹೇಳಲು ನಿಲ್ಲುವ ವ್ಯಕ್ತಿ ನಿಜವಾದ ಸ್ನೇಹಿತನಾಗಿರುತ್ತಾನೆ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳುತ್ತಾರೆ. ೪-ನೀವು ಅನಾರೋಗ್ಯ ಸಮಯದಲ್ಲಿ ನಿಮ್ಮ ಜೊತೆ ನಿಲ್ಲುವವನು ನಿಜವಾದ ಸ್ನೇಹಿತ ಎಂದು ಚಾಣಕ್ಯರು ಹೇಳುತ್ತಾರೆ.

Comments (0)
Add Comment