ಜಗತ್ತಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಲನಚಿತ್ರದ ಎರಡನೇ ಪಾರ್ಟ್ ಇದೆ ವರ್ಷ ಡಿಸೆಂಬರ್ ಗೆ ಬಿಡುಗಡೆಯಾಗಲಿದೆ. ಬರೋಬ್ಬರಿ ೧೬೦ ಭಾಷೆಗಳಲ್ಲಿ ಈ ಸಿನೆಮಾ ಬಿಡುಗಡೆ?

ಬಹು ನಿರೀಕ್ಷಿತ ಸಿನೆಮಾ ಅಂದರೆ ತಪ್ಪಾಗಲಾರದು. ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನೆಮಾ. ಅತಿ ಹೆಚ್ಚು ಜನರು ನೂಕುನುಗ್ಗಲಿನಲ್ಲಿ ಥಿಯೇಟರ್ ಗೆ ಹೋಗಿ ವೀಕ್ಷಿಸಿದ ಸಿನೆಮಾ ಅಂದರೆ ಅದು ಅವತಾರ ಸಿನೆಮಾ. ಇದರ ಇನ್ನೊಂದು ಅವತರಣಿಕೆ ಅಂದರೆ ಎರಡನೇ ಪಾರ್ಟ್ ಗೆ ಜನರು ಅತ್ಯಂತ ಕಾತುರದಿಂದ ವಿಶ್ವದಾದ್ಯಂತ ಕಾಯುತಿದ್ದರು. ೧೩ ವರ್ಷಗಳ ನಂತರ ಈ ಸಿನೆಮಾ ತೆರೆಗೆ ಬರಲಿದ್ದು, ಅಚ್ಚರಿಯ ವಿಷಯವೆಂದರೆ ಇದು ಬರೋಬರಿ ವಿಶ್ವದ ೧೬೦ ಭಾಷೆಯಲ್ಲಿ ತೆರೆಗೆ ಬರಲಿದೆ.

ಅಷ್ಟಕ್ಕೂ ಈ ಸಿನಿಮಾ ವಿಶೇಷತೆ ಏನು ಅಂತೀರಾ? ಇದರ ಕತೆ ೧೩ ವರ್ಷದ ಹಿಂದೆ ಎಲ್ಲರನ್ನು ಸೆಳೆದಿತ್ತು. ಅಲ್ಲದೆ ಅಂದಿನ ಕಾಲದಲ್ಲೇ ೨೮೪.೭೨ ಕೋಟಿ ಅಮೇರಿಕನ್ ಡಾಲರ್ ಗಳಿಕೆ ಮಾಡಿತ್ತು. ಇಂದಿನ ಲೆಕ್ಕಾಚಾರದಲ್ಲಿ ಇದೊಂದು ದೊಡ್ಡ ಮೊತ್ತವಾಗಿದೆ. ಈ ಸಿನೆಮಾ ಬರೋಬ್ಬರಿ ೧೩ ವರ್ಷಗಳ ನಂತರ ಬಿಡುಗಡೆ ಆಗುತ್ತಿದೆ ಇದು ಇನ್ನೊಂದು ವಿಶೇಷ. ಈ ಚಲನಚಿತ್ರಕ್ಕೆ ಒಟ್ಟು ೩ ಆಸ್ಕರ್ ಪುರಸ್ಕಾರ ಸಿಕ್ಕಿದೆ. ಅಲ್ಲದೆ 3D ಡಿಜಿಟಲ್ ಯುಗಕ್ಕೆ ನಂದಿ ಹಾಕಿದ ಚಿತ್ರ ಎಂದರು ಕೂಡ ತಪ್ಪಾಗಲಾರದು.

ಕೋರೋ-ಣ ಕಾರಣದಿಂದ ಇದು ಬಿಡುಗಡೆ ಹಿಂದೆ ಹೋಯಿತು. ಇದೀಗ ಡಿಸೆಂಬರ್ ನಲ್ಲಿ ಬಿಡುಗಡೆ ಯಾಗಲು ಸಜ್ಜಾಗಿದೆ. ಇನ್ನೊಂದು ವಿಶೇಷ ಎಂದರೆ ಅಂದು 3D ಅಲ್ಲಿ ಬಂದು ಎಲ್ಲರಿಗು ಸೋಜಿಗ ನೀಡಿದ ಅವತಾರ ಇಂದು ಕೂಡ ವಿಶಿಷ್ಟ ರೀತಿಯಲ್ಲಿ ಬರಲು ಸಿದ್ಧವಾಗಿದೆ. ಈ ಸಿನೆಮಾ ಪ್ರೀಮಿಯಂ 4K ಅಲ್ಲಿ ಬರಲಿದೆ. ಇದು ಹೆಚ್ಚಿನ ಫ್ರೇಮ್ ದರವಾಗಿದೆ, ಹೆಚ್ಚಿನ ಡೈನಾಮಿಕ್ ಶ್ರೇಣಿಯಾಗಿದೆ. ಮತ್ತು ಅಂದಿನ 3D ಗಿಂತ ಈ ಬಾರಿ ಇನ್ನು ಹೆಚ್ಚಿನ ಗುಣಮಟ್ಟದಲ್ಲಿ ಈ 3D ಬರಲಿದೆ. ಈ ಸಿನಿಮಾಗಾಗಿ ಎಲ್ಲರು ಕಾತುರದಿಂದ ಕಾಯುತ್ತಿದ್ದು ಡಿಸೆಂಬರ್ ತಿಂಗಳು ಬೇಗ ಬರಲಿ ಎಂದು ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರ ಪ್ರೇಕ್ಷಕರಿಗೆ ಈ ಸಿನೆಮಾ ಒಳ್ಳೆಯ ಮನೋರಂಜನೆ ನೀಡಿದರೆ ಸಾಕು.

Comments (0)
Add Comment