ಟೀಮ್ ಇಂಡಿಯಾ ಗೆ ಹೊಸ ಆಟಗಾರನ ಎಂಟ್ರಿ ? ಎರಡನೇ ಟೆಸ್ಟ್ ಪಂದ್ಯದ ಸಂಭಾವ್ಯ ತಂಡ ಹೀಗಿದೆ.

ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತ್ತು. ಇದೀಗ ಎರಡನೇ ಪಂದ್ಯ ಆರಂಭವಾಗುವ ಹಂತದಲ್ಲಿದ್ದು ಫಾರ್ಮ್ ಕಳೆದುಕೊಂಡಿರುವ ಎಲ್ಲಾ ಆಟಗಾರರನ್ನು ತಂಡದಿಂದ ಕೈ ಬಿಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಹೌದು ಇದೀಗ ಹೊಸ ಆಟಗಾರನ ಎಂಟ್ರಿ ಆಗಿದೆ ಟೀಮ್ ಇಂಡಿಯಾ ತಂಡಕ್ಕೆ. ಇವತ್ತಿನಿಂದ ಆರಂಭವಾಗುವ ಪಂದ್ಯಕ್ಕೆ ಎಲ್ಲಾ ರೀತಿಯಲ್ಲೂ ಸಜ್ಜುಗೊಂಡಿದೆ. ದಕ್ಷಿಣಾ ಆಫ್ರಿಕಾ ನೆಲದಲ್ಲಿ ಇದುವರೆಗೂ ಯಾವುದೇ ಟೆಸ್ಟ್ ಸರಣಿ ಗೆದ್ದಿಲ್ಲ ಭಾರತ . ಈ ಬಾರಿ ಹೊಸ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಇದೆ ನಮ್ಮ ದೇಶ.

ಮೊದಲ ಪಂದ್ಯದಲ್ಲಿ ಮಿಂಚಿದ ರಾಹುಲ್ ಮತ್ತು ಮಾಯಾಂಕ್ ಜೋಡಿ ಈ ಬಾರಿಯೂ ಇನ್ನಿಂಗ್ಸ್ ಓಪನ್ ಮಾಡುವುದು ಪಕ್ಕಾ ಆಗಿದೆ . 3 ನೆಯ ವಿಕೆಟ್ ಗೆ ಬಲು ದೊಡ್ಡ ತಲೆಬಿಸಿ ಆಗಿದ್ದ ಚೇತೇಶ್ವರ್ ಪೂಜಾರಾ ಅವರನ್ನು ಹೊರಗಿಡುವ ಎಲ್ಲಾ ಸಾಧ್ಯತೆ ಇದ್ದು, ಈ ಬಾರಿ ಹೊಸ ಪ್ರತಿಭೆಗೆ ಮಣೆ ಹಾಕಿದರು ಅಚ್ಚರಿ ಇಲ್ಲ. 3 ನೆಯ ಕ್ರಮಾಂಕದಲ್ಲಿ ಪ್ರಿಯಾಂಕ್ ಪಾಂಚಲ್ ಗೆ ಅವಕಾಶ ಕೊಟ್ಟರು ಅಚ್ಚರಿ ಇಲ್ಲ. 4 ನೆಯ ಕ್ರಮಾಂಕ ಕೊಹ್ಲಿ ಫಿಕ್ಸ್ ಆಗಿದ್ದಾರೆ. ಇನ್ನುಳಿದಂತೆ ರಹಾನೆ ಈ ಪಂದ್ಯದಲ್ಲಿ ಸ್ಥಾನ ಪಡೆಯುತ್ತಾರೆ, ಹಾಗೆ ವಿಕೆಟ್ ಕೀಪಿಂಗ್ ರಿಶಬ್ ಪಂತ್ ಹೆಗಲೇರಲಿದೆರಲಿದೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಯಾವುದೇ ರೀತಿಯ ಮಹತ್ತರ ಬದಲಾವಣೆಗಳನ್ನು ಕಾಣದೆ ಇರಬಹುದು. ಅಶ್ವಿನ್ ಮತ್ತು ಶಾರ್ದುಲ್ ಠಾಕೂರ್ ಅಲ್ ರೌಂಡರ್ ಭೂಮಿಕೆಯಲ್ಲಿ ಕಾಣಬಹುದು. ಇನ್ನು ವೇಗಿಗಳಾದ ಬಮ್ರಾ , ಸಿರಾಜ್ ,ಶಮ್ಮಿ ಕಣಕ್ಕಿಳಿಯಲಿದ್ದಾರೆ. ಈ ಅಂಗಣದಲ್ಲಿ ದಕ್ಷಿಣ ಆಫ್ರಿಕಾ ಇದುವರೆಗೂ ಒಂದು ಪಾಂಡ್ಯ ಕೂಡ ಸೋಲಲಿಲ್ಲ. ಹಾಗಾದರೆ ಈ ಪಂದ್ಯದ ಫಲಿತಾಂಶ ಏನು ಎಂದು ಎಲ್ಲರೂ ಕಾದು ನೋಡಬೇಕು.

 

Comments (0)
Add Comment