ಟ್ರೋಫಿ ಗೆದ್ದ ಬಳಿಕ ಸಂಪ್ರದಾಯ ಬದಲಿಸಿದ ರೋಹಿತ್: ಸರಣಿ ಗೆದ್ದ ಕೂಡಲೇ ಕಪ್ ನೀಡಿದ್ದು ಯಾರಿಗೆ ಗೊತ್ತೇ??

ಭಾರತ ವರ್ಸಸ್ ಟಿ20 ಸರಣಿಯ ಮೂರು ಪಂದ್ಯಗಳು ಸಹ ರೋಚಕವಾಗಿತ್ತು. ಮೊದಲ ಪಂದ್ಯದಲ್ಲಿ ಭಾರತ ತಂಡ ಸೋತಿತು, ಆದರೆ ಎರಡನೇ ಪಂದ್ಯದಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿ ಪಂದ್ಯ ಗೆದ್ದಿತು, ಮೂರನೇ ಪಂದ್ಯದಲ್ಲಿ ಸಹ ಭಾರತ ತಂಡ ಗೆಲುವು ಸಾಧಿಸಿತು. ಈ ಮೂಲಕ ಭಾರತ ವರ್ಸಸ್ ಆಸ್ಟ್ರೇಲಿಯಾ ಸರಣಿಯ ಚುಟುಕು ಸರಣಿಯನ್ನು ತನ್ನದಾಗಿಸಿಕೊಂಡಿತು. ಭಾರತ ತಂಡ ಟ್ರೋಫಿ ಪಡೆದಾಗ, ಒಂದು ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿತ್ತು, ಆದರೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಈಗ ಆ ಸಂಪ್ರದಾಯವನ್ನು ಮುರಿದಿದ್ದಾರೆ.

ಎಂ.ಎಸ್.ಧೋನಿ ಅವರು ಈ ಸಂಪ್ರದಾಯ ಶುರು ಮಾಡಿದ್ದರು. ಯಾವುದೇ ಟೂರ್ನಿಯನ್ನು ಗೆದ್ದು ಕಪ್ ಗೆದ್ದರು ಸಹ, ಆ ಕಪ್ ಅನ್ನು ನಾಯಕ ಸ್ವೀಕರಿಸಿದ ಬಳಿಕ ಟ್ರೋಫಿಯನ್ನು ತಂಡದ ಅತ್ಯಂತ ಕಿರಿಯ ಆಟಗಾರನಿಗೆ ನೀಡಿ ಸಂಭ್ರಮಿಸಲಾಗುತ್ತಿತ್ತು, ವಿರಾಟ್ ಕೋಹ್ಲಿ ಅವರು ಸಹ ಇದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿದ್ದರು. ರೋಹಿತ್ ಶರ್ಮಾ ಅವರು ಸಹ ಕಳೆದ ಪಂದ್ಯದ ವರೆಗು ಮುಂದುವರೆಸಿಕೊಂಡು ಬಂದಿದ್ದರು. ಆದರೆ ಈ ಬಾರಿ ಟ್ರೋಫಿ ಸ್ವೀಕರಿಸಿದ ಬಳಿಕ ರೋಹಿತ್ ಶರ್ಮಾ ಅವರು ಈ ಸಂಪ್ರದಾಯವನ್ನು ಮುರಿದಿದ್ದಾರೆ.

ರೋಹಿತ್ ಶರ್ಮಾ ಅವರು ಅತ್ಯಂತ ಕಿರಿಯ ಆಟಗಾರನಿಗೆ ಟ್ರೋಫಿ ನೀಡುವ ಬದಲಾಗಿ, ತಂಡದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಟ್ರೋಫಿ ನೀಡಿದ್ದಾರೆ. ಡಿಕೆ ಅವರಿಗೆ ಟ್ರೋಫಿ ನೀಡುವ ಮೂಲಕ ಹಿರಿಯ ಆಟಗಾರನಿಗೆ ಗೌರವ ಸೂಚಿಸಿದ್ದಾರೆ ರೋಹಿತ್ ಶರ್ಮಾ. ದಿನೇಶ್ ಕಾರ್ತಿಕ್ ಅವರು ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿ, ಫಿನಿಷರ್ ಆಗಿ ಮಿಂಚುತ್ತಿದ್ದಾರೆ. ಎಲ್ಲಾ ಪಂದ್ಯಗಳಲ್ಲೂ ಡಿಕೆ ಅವರ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡರಲ್ಲೂ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ, ಹಾಗಾಗಿ ರೋಹಿತ್ ಶರ್ಮಾ ಅವರ ಈ ನಡೆಗೆ ಮೆಚ್ಚುಗೆಯು ವ್ಯಕ್ತವಾಗುತ್ತಿದೆ.

Comments (0)
Add Comment