ದಕ್ಷಿಣ ಆಫ್ರಿಕಾ ಸರಣಿಯಿಂದ ರಾಹುಲ್ ನಂತರ ಈ ಆಟಗಾರ ಕೂಡಾ ಔಟ್. ನಾಯಕನ ನಂತರ ಈ ದಿಗ್ಗಜ ಕೂಡಾ ಸರಣಿಯಿಂದ ಹೊರಕ್ಕೆ.

ದಕ್ಷಿಣ ಆಫ್ರಿಕಾ ಜೊತೆಗಿನ ೫ ಪಂದ್ಯಗಳ ಟಿ-೨೦ ಸರಣಿ ಇಂದು ಜೂನ್ ೬ ರಿಂದ ಶುರುವಾಗಲಿದೆ. ಇಂದು ಅರುಣ್ ಜೇಟ್ಲೀ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಒಂದು ದಿನ ಮುಂಚೆನೆ ಟೀಂ ಇಂಡಿಯಾ ಗೆ ದೊಡ್ಡ ಶಾಕ್ ಸಿಕ್ಕಿದೆ. ಸರಣಿಯ ನಾಯಕ ಎಂದು ಆಯ್ಕೆ ಆದ ಕೆ.ಎಲ್.ರಾಹುಲ್ ಗಾಯದ ಸಮಸ್ಯೆಯಿಂದ ಸರಣಿಯಿಂದಲೇ ಔಟ್ ಆಗಿದ್ದಾರೆ. ಎಲ್ಲ ಹೊಸ ಮುಖಗಳು ಆಗಿರುವುದರಿಂದ ರಾಹುಲ್ ದ್ರಾವಿಡ್ ತರಬೇತು ದಾರರಾಗಿ ಹೇಗೆ ತಂಡ ಕಟ್ಟುತ್ತಾರೆ ಹೇಗೆ ಆಟಗಾರರನ್ನು ತಯಾರು ಮಾಡುತ್ತಾರೆ ಎನ್ನವುದು ಕುತೂಹಲ ಹೆಚ್ಚಿಸಿದೆ.

ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದರಿಂದ ರೋಹಿತ್ ಶರ್ಮಾ ಅಲಬ್ಯರಾಗಿದ್ದರು. ಅವರ ಬದಲಿಗೆ ಕೆ.ಎಲ್.ರಾಹುಲ್ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ನಿನ್ನೆ ರಾಹುಲ್ ಸೈಡ್ ಸ್ಟ್ರೇನ್ ಕಾರಣದಿಂದ ಈ ದಕ್ಷಿಣ ಆಪ್ರಿಕಾ ಸರಣಿಯಿಂದಲೇ ಹೊರಗೆ ನಡೆದಿದ್ದಾರೆ. ಅವರ ಜೊತೆಗೆ ಕುಲದೀಪ್ ಯಾದವ್ ಕೂಡಾ ಸರಣಿಯಿಂದ ಹೊರ ನಡೆದಿದ್ದಾರೆ. ಎಲ್ಲ ಹಿರಿಯ ಆಟಗಾರರು ಕೂಡ ತಮ್ಮ ನೆಚ್ಚಿನ ಆಟಗಾರರು ಪ್ಲೇಯಿಂಗ್ ೧೧ ಅಲ್ಲಿ ಸ್ಥಾನ ಪಡೆಯಬೇಕು ಎಂದು ಬಯಸುತ್ತಿದ್ದಾರೆ. ಪಂತ್ ಹಾಗು ದ್ರಾವಿಡ್ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.

ಇದೀಗ ದಕ್ಷಿಣಾ ಆಪ್ರಿಕಾ ಸರಣಿಗೆ ರಿಷಬ್ ಪಂತ್ ಅವರನ್ನು ನಾಯಕರನ್ನಾಗಿ ನೇಮಿಸಿದೆ ಹಾಗೆನೆ ಹಾರ್ದಿಕ್ ಪಾಂಡ್ಯರನ್ನು ಉಪನಾಯಕನನ್ನಾಗಿ ನೇಮಿಸಿದೆ. ಭಾರತೀಯ ಕ್ರಿಕೆಟ್ ಸಂಸ್ಥೆ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಾಹುಲ್ ಹಾಗು ಕುಲದೀಪ್ ಯಾದವ್ ಅವರು ಗಾಯಗೊಂಡು ಸರಣಿಗೆ ಅಲಬ್ಯರಾದ ಬಗ್ಗೆ ಹೇಳಿಕೊಂಡಿದೆ. ಇದೀಗ ಕೂಚ್ ರಾಹುಲ್ ದ್ರಾವಿಡ್ ಹೊಸ ನಾಯಕ ಹಾಗು ಆಟಗಾರರಿಗೆ ಹೊಸ ತಂತ್ರ ರಚಿಸಬೇಕಾಗಿದೆ. ಐಪಿಎಲ್ ಅಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಈ ಬಾರಿ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅರ್ಶದೀಪ್ ಸಿಂಗ್ ಹಾಗು ಉಮ್ರಾನ್ ಮಲಿಕ್ ನಂತಹ ಹೊಸ ಮುಖಗಳು ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದಾರೆ

Comments (0)
Add Comment