ಮತ್ತೊಮ್ಮೆ ತಟ್ಟಲಿದೆ ಬೆಲೆ ಏರಿಕೆಯ ಬಿಸಿ. ಮತ್ತೆ ಗಗನಕ್ಕೇರಿದ ಪೆಟ್ರೋಲ್ ದರ. ಎಷ್ಟು ಹೆಚ್ಚಾಗಲಿದೆ ಭಾರತದಲ್ಲಿ ತೈಲ ಬೆಲೆ?

ಸರಿ ಸುಮಾರು ಒಂದು ತಿಂಗಳು ಕಳೆದು ಹೋಯಿತು ಪೆಟ್ರೋಲ್ ತನ್ನ ಬೆಲೆಯಲ್ಲಿ ಸ್ಥಿರತೆ ಕಂಡು ಕೊಂಡಿದೆ. ಗಗನಕ್ಕೇರಿದ್ದ ಪೆಟ್ರೋಲ್ ದರವನ್ನು ಮೋದಿ ಸರ್ಕಾರ ಇಳಿಸಿ ಸಾಮಾನ್ಯ ಜನರು ಉಸಿರು ಬಿಡುವಂತೆ ಮಾಡಿದ್ದರು. ಇದನ್ನೇ ಬಂಡವಾಳ ಮಾಡಿ ಕೊಂಡು ಕುಗಾಡುತ್ತಿದ್ದ ವಿರೋಧ ಪಕ್ಷಗಳು ಕೂಡ ಬಾಯಿ ಮುಚ್ಚಿ ಕೊಂಡಿದೆ. ಆದರೆ ಇದೀಗ ಮತ್ತೆ ತೈಲ ಬೆಲೆಯಲ್ಲಿನ ಬದಲಾವಣೆ ಪೆಟ್ರೋಲ್ ಡೀಸೆಲ್ ದರ ಏರಿಕೆ ಆಗುವತ್ತ ಮುಖ ಮಾಡಿದೆ. ಹಾಗಾದರೆ ಎಷ್ಟಾಗಲಿದೆ ದರ?

ಪಂಚ ರಾಜ್ಯ ಚುನಾವಣೆ ಬಳಿಕ ಪೆಟ್ರೋಲ್ ಡೀಸೆಲ್ ದರ ಏರಿಕೆ ಆಗಲಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ. ಪಂಚ ರಾಜ್ಯದ ಚುನಾವಣೆ ಮುಂದಿಟ್ಟುಕೊಂಡು ಇದೀಗ ಯಾವುದೇ ಬದಲಾವಣೆ ಮಾಡುತ್ತಿಲ್ಲ ಎಂಬ ಮಾಹಿತಿ ಇದೆ. ಅದೇ ರೀತಿಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇದೆ ಮೊದಲ ಬಾರಿಗೆ ಬ್ಯಾರಲ್ ಗೆ 100 ಡಾಲರ್ ದಾಟಿದೆ. ಇದರಿಂದಾಗಿ ಮಾರುಕಟ್ಟೆ ದರದಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ. ಈಗಿನ ಕಚ್ಚಾ ತೈಲ ದರ ಬದಲಾವಣೆ ತೈಲ ಕಂಪನಿಗಳಿಗೆ ಪ್ರತಿ ಲೀಟರ್ ಗೆ 5.7 ರೂಪಾಯಿ ನಷ್ಟ ಅನುಭವಿಸುತ್ತಿದೆ.

ಮೂಲಗಳ ಪ್ರಕಾರ ಪಂಚ ರಾಜ್ಯದ ಚುನಾವಣಾ ನಂತರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 9 ರೂಪಾಯಿ ವರೆಗಿನ ಹೆಚ್ಚಳ ಕಾಣ ಬಹುದು. ಹೌದು ಇದು ಮತ್ತೊಮ್ಮೆ ಗ್ರಾಹಕರಿಗೆ ಹೊರೆ ಆಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಅದೇನೇ ಆಗಲಿ ಹಲವಾರು ಕಾರಣಗಳಿಂದಾಗಿ ಈ ಬದಲಾವಣೆ ಕಂಡು ಬರುವ ಎಲ್ಲಾ ಸಾಧ್ಯತೆಗಳೂ ಇದ್ದು, ಸಾಮಾನ್ಯ ಜನರ ಮೇಲೆ ಹೊರೆ ಆಗದಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂಬ ನಂಬಿಕೆ ಎಲ್ಲರಿಗೂ ಇದೆ.

Comments (0)
Add Comment