ಮಿಥಾಲಿ ರಾಜ್ ಹಾಗು ಮಹೇಂದ್ರ ಸಿಂಗ್ ಧೋನಿ ಇಬ್ಬರ ವೃತ್ತಿ ಜೀವನದ ಈ 5 ಸಾಮ್ಯತೆಗಳು. ಇದೀಗ ಇಬ್ಬರು ಕೂಡ ನಿವೃತ್ತಿ ಹೊಂದಿದ್ದಾರೆ.

23 ವರ್ಷಗಳ ಸುಧೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಬಳಿಕ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಬುಧವಾರ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಮಿಥಾಲಿ ರಾಜ್ ಅವರನ್ನು ಮಹಿಳಾ ಕ್ರಿಕೆಟ್ ತಂಡದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಂತಾನೆ ಕರೆಯುತ್ತಾರೆ. ಏಕೆಂದರೆ ಸಚಿನ್ ಹಾಗು ಮಿಥಾಲಿ ರಾಜ್ ಇಬ್ಬರು ಕೂಡ ಸಣ್ಣ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದವರಾಗಿದ್ದರೆ. ಹಾಗೇನೇ ಸುಧೀರ್ಘ ಅವಧಿವರೆಗೆ ಕ್ರಿಕೆಟ್ ಆಡಿದವರಾಗಿದ್ದಾರೆ.

26 ಜೂನ್ 1999 ರಂದು ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. 2022 ರ ಮಹಿಳಾ ವಿಶ್ವಕಪ್ ಅಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಮಹಿಳಾ ತಂಡ ಸೋಲನ್ನು ಅನುಭವಿಸಿತು. ಹಾಗೇನೇ ಭಾರತೀಯ ತಂಡ ಲೀಗ್ ಇಂದಲೇ ಹೊರ ಬಿದ್ದಿತ್ತು. ಮಿಥಾಲಿ ರಾಜ್ ಅವರ ನಿವೃತ್ತಿ ನಂತರ ಅವರನ್ನು ಧೋನಿ ಜೊತೆ ಹೋಲಿಸಲಾಗುತ್ತಿದೆ. ಹೀಗಿರುವಾಗ ಈ ಎರಡು ಆಟಗಾರರ ನಡುವಿನ ಸಾಮ್ಯತೆ ಬಗ್ಗೆ ನಿಮಗೆ ಗೊತ್ತಿರಲೇ ಬೇಕು. ಇದು ನಿಮಗೆ ಅಚ್ಚರಿಯ ವಿಷಯವು ಆಗಿರಬಹುದು.

ಮಿಥಾಲಿ ರಾಜ್ ಹಾಗು ಮಹೇಂದ್ರ ಸಿಂಗ್ ಧೋನಿ ಇಬ್ಬರು ಕೂಡ ಭಾರತ ತಂಡಕ್ಕೆ ಹೆಚ್ಚಿನ ಪಂದ್ಯಗಳಲ್ಲಿ ನಾಯಕತ್ವ ಹೊಂದಿದವರಾಗಿದ್ದಾರೆ. ಧೋನಿ ಭಾರತ ತಂಡವನ್ನು 332 ಪಂದ್ಯಗಳಲ್ಲಿ ನಾಯಕತ್ವ ಜವಾಬ್ದಾರಿ ನಿಭಾಯಿಸಿದ್ದಾರೆ. ಅದೇ ಮಿಥಾಲಿ ರಾಜ್ ನಾಯಕ್ತ್ವದಲ್ಲಿ ಭಾರತ ತಂಡ 195 ಬಾರಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಧೋನಿ ಹಾಗು ಮಿಥಾಲಿ ರಾಜ್ ಇಬ್ಬರ ಕೊನೆಯ ಪಂದ್ಯ ವಿಶ್ವಕಪ್ ಆಗಿತ್ತು. ಇಬ್ಬರು ಆಟಗಾರರು ತಮ್ಮ ಕೊನೆಯ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದಾರೆ.

ಧೋನಿ ಮತ್ತು ಮಿಥಾಲಿ ರಾಜ್ ಇಬ್ಬರ ಅರ್ಧಶತಕದ ಹೊರತಾಗಿಯೂ ಭಾರತ ತಂಡ ಪುರುಷರ ಹಾಗು ಮಹಿಳೆಯರ ತಂಡ ಸೋಲನ್ನು ಎದುರಿಸಬೇಕಾಯಿತು, ಹಾಗೇನೇ ವಿಶ್ವಕಪ್ ಇಂದ ಹೊರಗುಳಿಯಿತು. ವಿಶ್ವಕಪ್ ನಂತರ ಇಬ್ಬರು ಆಟಗಾರರು ಕೂಡ ಯಾವುದೇ ವಿದಾಯ ಪಂದ್ಯವಿಲ್ಲದೆ ನಿವೃತ್ತಿ ಪಡೆದವರು. ಧೋನಿ ಬಗ್ಗೆ ಹೇಳಬೇಕೆಂದರೆ 2019 ರಲ್ಲಿ ವಿಶ್ವಕಪ್ ನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ನ್ಯೂಜಿಲ್ಯಾಂಡ್ ಎದುರು ಆಡಿದರು. ಈ ಪಂದ್ಯ ಸೋತ ಬಳಿಕ ಮುಂದಿನ ವರ್ಷ ಆಗುಸ್ಟ್ 15 ರಂದು ಧೋನಿ ನಿವೃತ್ತಿ ಘೋಷಣೆ ಮಾಡಿದ್ದರು.

Comments (0)
Add Comment