ಮೈದಾನದಲ್ಲಷ್ಟೇ ಅಲ್ಲದೆ ಹೊರಗಡೆಯೂ ಉತ್ತಮ ಗೆಳೆತನ ಹೊಂದಿರುವ ಈ ಐದು ಕ್ರಿಕೆಟ್ ಜೋಡಿಗಳು ಯಾರ್ಯಾರು ಗೊತ್ತೇ?

ಕ್ರಿಕೆಟ್ ನ ಜನಪ್ರಿಯತೆಯಿಂದಾಗಿ, ಇಂದು ಕ್ರಿಕೆಟಿಗರು ಮೊದಲಿಗಿಂತಲೂ ಹೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ. ಇದೆ ಕಾರಣದಿಂದಾಗಿ ಅನೇಕರು ಕೋಟ್ಯಧಿಪತಿಗಳಾಗಿದ್ದರೆ, ಅಲ್ಲದೆ ಎಲ್ಲ ದೇಶಗಳು ಕೂಡ ಒಂದೊಂದು ಪ್ರೀಮಿಯರ್ ಲೀಗ್ ಪ್ರಾರಂಭ ಮಾಡಿದೆ. ಇಷ್ಟು ಅಲ್ಲದೆ ಈ ಜನಪ್ರಿಯವೆ ಹೊಂದಿದ ಆಟಗಾರರು ತಮ್ಮ ಸಹ ಆಟಗಾರ ನಡುವೆ ಕೂಡ ಪೈಪೋಟಿ ಹೊಂದಿರುತ್ತಾರೆ. ಕೆಲವು ಮಾಧ್ಯಮದ ಮುಂದೆ ಬರದಿದ್ದರೂ ಕೂಡ ತೆರೆ ಹಿಂದೆ ಈ ಸರ್ಕಸ್ ಗಳು ನಡೆಯುತ್ತಿರಬಹುದು. ಆದರೆ ನಾವು ಇಂದು ಐದು ಉತ್ತಮ ಜೋಡಿ ಬಗ್ಗೆ ಹೇಳಲಿದ್ದೇವೆ, ಇವರು ಮೈದಾನದಲ್ಲಿ ಅಷ್ಟೇ ಅಲ್ಲದೆ ಮೈದಾನದ ಹೊರಗೂ ಕೂಡ ಉತ್ತಮ ಬಾಂದವ್ಯ ಹೊಂದಿದ್ದಾರೆ.

೧. ಮಹೇಂದ್ರ ಸಿಂಗ್ ಧೋನಿ ಹಾಗು ಸುರೇಶ ರೈನಾ – ಧೋನಿ ಹಾಗು ರೈನಾ ಅತ್ಯುತ್ತಮ ಆಟಗಾರರು ಅದಕ್ಕಿಂತಲೂ ಮುಖ್ಯ ಇಬ್ಬರು ಉತ್ತಮ ಗೆಳೆಯರು ಆಗಿದ್ದಾರೆ. ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುವ ಮೂಲಕ ಇಬ್ಬರ ಗೆಳೆತನ ಎಷ್ಟು ಗಟ್ಟಿ ಆಗಿದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಧೋನಿ ಐಪಿಎಲ್ ಆಡುವುದನ್ನು ನಿಲ್ಲಿಸಿದರೆ ತಾನು ಕೂಡ ಐಪಿಎಲ್ ಆತ ನಿಲ್ಲಿಸುತ್ತೇನೆ ಎಂದು ಕೂಡ ಹೇಳಿದ್ದಾರೆ ಸುರೇಶ ರೈನಾ. ಧೋನಿ ಹಾಗು ರೈನಾ ಇಬ್ಬರು ಕೂಡ ಒಟ್ಟಾಗಿ ಸೇರಿ ತಂಡ ಗೆಲ್ಲಿಸಿ ಕೊಟ್ಟ ಅನೇಕ ಉದಾಹರಣೆ ಇದೆ.

೨. ವಿರಾಟ್ ಕೊಹ್ಲಿ ಹಾಗು ಎಬಿ ಡಿ ವಿಲಿಯರ್ಸ್- ಭಾರತೀಯ ಕ್ರಿಕೆಟ್ ತಂಡ ಹಾಗು ಅರ ಸಿ ಬಿ ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ ಉತ್ತಮ ನಾಯಕ ಹಾಗು ಅತ್ಯುತ್ತಮ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಸಹವರ್ತಿ ದಕ್ಷಿಣ ಆಫ್ರಿಕಾ ದ ಮಿಸ್ಟರ್ ೩೬೦ ವಿಲಿಯರ್ಸ್ ಕೂಡ ಶ್ರೇಷ್ಠ ಆಟಗಾರ. ೨೦೧೧ ರಲ್ಲಿ ವಿಲಿಯರ್ಸ್ ಅರ ಸಿ ಬಿ ಪರ ಸಹಿ ಹಾಕಿ ತಂಡಕ್ಕೆ ಸೇರಿದ ಸಮಯದಿಂದ ಇಂದಿನ ವರೆಗೂ ಇಬ್ಬರು ಉತ್ತಮ ಗೆಳೆತನ ಹೊಂದಿದ್ದಾರೆ. ಇವರ ಸ್ನೇಹ ೧೦ ವರ್ಷಗಳು ಕಳೆದಿವೆ. ಇವರಿಬ್ಬರು ಒಟ್ಟಿಗೆ ಮೈದಾನಕ್ಕೆ ಬಂದರೆ ಬೌಂಡರಿ ಸಿಕ್ಸರ್ ಗಳದ್ದೇ ಹವಾ ಇರುತ್ತೆ. ಇಬ್ಬರು ಕೂಡ ಮೈದಾನದಲ್ಲಿ ಅಲ್ಲದೆ ಹೊರಗೂ ಕೂಡ ಉತ್ತಮ ಸ್ನೇಹಿತರಾಗಿದ್ದಾರೆ.

೩. ಸಚಿನ್ ತೆಂಡೂಲ್ಕರ್ ಹಾಗು ಸೌರವ್ ಗಂಗೂಲಿ- ಕ್ರಿಕೆಟಿಗರ ಸ್ನೇಹ ಅಂತ ಬಂದಾಗ ಸಚಿನ್ ತೆಂಡೂಲ್ಕರ್ ಹಾಗು ಸೌರವ್ ಗಂಗೂಲಿ ಬಗ್ಗೆ ಹೆಸರು ಬಂದೆ ಬರುತ್ತೆ. ವೀರೇಂದ್ರ ಸೆಹ್ವಾಗ್ ಹಾಗು ಸಚಿನ್ ತೆಂಡೂಲ್ಕರ್ ಇಬ್ಬರು ಉತ್ತಮ ಸ್ನೇಹಿತರು ಎಂದು ಅನೇಕರು ಭಾವಿಸಿದರು ಕೂಡ ಸಚಿನ್ ತೆಂಡೂಲ್ಕರ್ ಹಾಗು ಸೌರವ್ ಗಂಗೂಲಿ ನಡುವಿನ ಸ್ನೇಹ ಗಾಢವಾದದ್ದು. ಇತ್ತೀಚಿಗೆ ಹಿಂದಿಯ ಕೋಟ್ಯಧಿಪತಿ ಶೋ ಅಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

೪. ಕೆ ಎಲ್ ರಾಹುಲ್ ಹಾಗು ಮಾಯಾಂಕ್ ಅಗರ್ವಾಲ್- ಕೆ ಎಲ್ ರಾಹುಲ್ ಹಾಗು ಮಾಯಾಂಕ್ ಅಗರ್ವಾಲ್ ಇಬ್ಬರು ಪಂಜಾಬ್ ಪರ ಆಟ ಆಡುತ್ತಿದ್ದರು. ಇಬ್ಬರು ಕರ್ನಾಟಕದವರೇ ಆಗಿದ್ದಾರೆ. ದೇಶಿಯ ಕ್ರಿಕೆಟ್ ಅಲ್ಲಿ ಆಡಿದ ಇಬ್ಬರು ಕೂಡ ಅನೇಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟವಾಡಿದ್ದಾರೆ. ಇವರಿಬ್ಬರ ಸ್ನೇಹ ದೇಶಿಯ ಕ್ರಿಕೆಟ್ ನ ಸಮಯದಿಂದ ಇದೆ. ಇಂದು ಅದು ಮುಂದುವರೆದಿದೆ.

೫. ಯುವರಾಜ್ ಸಿಂಗ್ ಹಾಗು ಹರ್ಭಜನ್ ಸಿಂಗ್- ೨೦೦೭ ಹಾಗು ೨೦೧೧ ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿ ಸದಸ್ಯರಾಗಿದ್ದ ಹರ್ಭಜನ್ ಸಿಂಗ್ ಹಾಗು ಯುವರಾಜ್ ಸಿಂಗ್ ಉತ್ತಮ ಆಟಗಾರರು ಹಾಗು ಉತ್ತಮ ಸ್ನೇಹಿತರಾಗಿದ್ದಾರೆ. ಯುವರಾಜ್ ಸಿಂಗ್ ಆಲ್ರೌಂಡರ್ ಪ್ರದರ್ಶನ ಹಾಗು ಹರ್ಭಜನ್ ಸಿಂಗ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಇಂದ ಭಾರತ ಎರಡು ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇವರಿಬ್ಬರು ಕೂಡ ಬಹು ವರ್ಷಗಳಿಂದ ಒಟ್ಟಿಗೆ ತಂಡದಲ್ಲಿ ಆಟವಾಡಿದ್ದಾರೆ. ಐಪಿಎಲ್ ಅಲ್ಲಿ ಎದುರಾಳಿ ತಂಡದಲ್ಲಿ ಆಟವಾಡಿದರು ಕೂಡ ಪೈಪೋಟಿ ಇದ್ದರು ಕೂಡ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ.

Comments (0)
Add Comment