ರೌಡಿಸಂ ಇರುವ ಸಿನೆಮಾ ಕನ್ನಡದ ಹೆಮ್ಮೆಯಲ್ಲ ಎಂದ ಆಮ್ ಆದ್ಮಿ ಪಕ್ಷದ ಭಾಸ್ಕರ್ ರಾವ್?. ಚಿತ್ರದಲ್ಲಿ ರೌಡಿಸಂ ತೋರಿಸಲೇ ಬಾರದಂತೆ.

kgf ೨ ನೇ ಸಿನಿಮಾ ತೆರೆಗೆ ಬಂದು ಹಿಂದಿನ ಎಲ್ಲ ದಾಖಲೆಗಳನ್ನು ಕೂಡ ಮು ರಿದು ಹೊಸ ದಾಖಲೆ ನಿರ್ಮಿಸುತ್ತಿದೆ. ಮೊದಲ ದಿನವೇ ಬರೋಬ್ಬರಿ ೧೩೪ ಕೋಟಿ ದೇಶದಲ್ಲಿ ದಾಖಲೆ ಮಾಡಿ ಹಿಂದಿನ ಭಾರತದ ದಾಖಲೆ ಸರಿಗಟ್ಟಿದೆ. ಇದೀಗ ಎರಡನೇ ದಿನವೂ ೧೦೦ ಕೋಟಿ ಗು ಅಧಿಕ ಹಣ collect ಮಾಡಿ ೨೫೦ ಕೋಟಿ ದಾಟಿದೆ. ಇನ್ನು ಶನಿವಾರ ಹಾಗು ಭಾನುವಾರ ಈ ಚಿತ್ರದ ಮೇಲೆ ದೇಶದಾದ್ಯಂತ ಉತ್ತಮ ನಿರೀಕ್ಷೆ ಜನರಿಂದ ಬರುತ್ತಿದೆ. ಎಲ್ಲ ಕಡೆ ಹೌಸ್ಫುಲ್ ಬೋರ್ಡ್ ಹಾಕಲಾಗಿದೆ.

ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಅವರು ಇತ್ತೀಚಿಗೆ ಆಮ್ ಆದ್ಮಿ ಪಾರ್ಟಿ ಗೆ ಸೇರಿಕೊಂಡರು. ಇವರು ಸೇರುತ್ತಿದ್ದಂತೆಯೇ ಬೇಡದ ಉಸಾಬರಿಗೆ ಕೈ ಹಾಕಿ ಕನ್ನಡ ಸಿನಿ ಪ್ರೇಕ್ಷಕರಿಂದ ಬೈಸಿಕೊಳ್ಳುತ್ತಿದ್ದಾರೆ. ರೌಡಿಸಂ ಆಧಾರಿತ ಚಿತ್ರ ನಾನೆಂದು ಒಪ್ಪುವುದಿಲ್ಲ, ಇದರಿಂದ ಎಂದು ಪ್ರಯೋಜನವಿಲ್ಲ, ಇದನ್ನು ಕೆಲ ರಾಜಕಾರಣಿಗಳು ಹೊಗಳುತ್ತಾರೆ ಆದರೆ ನನಗೆ ಇದು ಇಷ್ಟವಿಲ್ಲ ಎಂದು ಪರೋಕ್ಷವಾಗಿ KGF 2 ಗೆ ಟಾಂಗ್ ನೀಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

ಮಾದ್ಯಮಕ್ಕೆ ಸಂದರ್ಶನ ನೀಡಿದ ಇವರು ವಿಚಿತ್ರವಾಗಿ ಗಡ್ಡ ಬಿಟ್ಟು, ಕ್ರೂ ರವಾಗಿ ವರ್ತಿಸುವ ಸಿನೆಮಾಗಳು ಕನ್ನಡದ ಹೆಮ್ಮೆಯಲ್ಲ, ಉತ್ತಮ ಸಾಧಕರ ಚಿತ್ರವನ್ನು ಮಾಡಬೇಕು, ಕರ್ನಾಟಕದಲ್ಲಿ ಅನೇಕ ಬಡಮಕ್ಕಳು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಅನೇಕ ಸಾಧಕರಿದ್ದಾರೆ. ಅವರ ಸಾಧನೆಗಳ ಸಿನೆಮಾ ಮಾಡಬೇಕೆಂದು ಹೇಳಿದ್ದಾರೆ. ರೌಡಿಸಂ ಚಿತ್ರದಿಂದ ಯುವ ಜನತೆ ದಾರಿ ತಪ್ಪುತ್ತಿದೆ, ಹೀರೋಯಿಸಂ ಹಾಗು ರೌಡಿಸಂ ಇಂದ ಎಂದು ಸಾಧಿಸೋಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ರೀತಿಯ ಸಿನೆಮಾ ಜನ ಒಪ್ಪಿಕೊಳ್ಳ ಬಾರದು ಎಂದು ಆಮ್ ಆದ್ಮಿ ಪಕ್ಷದ ಭಾಸ್ಕರ್ ರಾವ್ ಹೇಳಿದ್ದಾರೆ.

Comments (0)
Add Comment