ವಿರಾಟ ಪರ್ವದ ಯುಗಾಂತ್ಯ ಹಾಗಾದರೆ ಕ್ಯಾಪ್ಟನ್ ಕೊಹ್ಲಿಯ ನಾಯಕತ್ವದ ದಾರಿ ಹೇಗಿತ್ತು ತಿಳಿಯೋಣ.

2014 ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಂತರ ಕೊಹ್ಲಿ ಅವರು ಭಾರತದ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಾರೆ ಅಲ್ಲಿಂದ ಶುರುವಾದ ಇವರ ಆಟ ಇಂದಿಗೂ ಸಾಗುತ್ತಿದೆ. ಟೆಸ್ಟ್ ಕ್ಯಾಪ್ಟನ್ ಆಗಿ ನಿರಂತರ 9 ಮ್ಯಾಚ್ ಗೆದ್ದ ಸಾಧನೆ ಮಾಡಿದ್ದಾರೆ. ಹಾಗೆಯೇ ನಾಯಕನಾಗಿ ನಿರಂತರ ಮೂರು ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ ರೆಕಾರ್ಡ್ ಕೂಡ ಇವರ ಹೆಸರಿಗಿದೆ.

ರನ್ ಮೆಶೀನ್ ಎಂದೇ ಕರೆಯಲ್ಪಡುವ ಕೊಹ್ಲಿ ಅವರ ನಾಯಕತ್ವದ ಸಾಧನೆ ಅಗಣಿಯ. ಟೆಸ್ಟ್ ಕ್ರಿಕೆಟ್ ನಲ್ಲಿ ನಾಯಕನಾಗಿ 38 ಪಂದ್ಯ ಗೆದ್ದಿರುವ ಕೊಹ್ಲಿ , ರಿಕಿ ಪಾಂಟಿಂಗ್ ನಂತರ ಅತ್ಯುತ್ತಮ ಟೆಸ್ಟ್ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಾಗೆಯೇ 95 ಏಕದಿನ ಪಂದ್ಯದಲ್ಲಿ ನಾಯಕತ್ವ ವಹಿಸಿರುವ ಕೊಹ್ಲಿ 65 ಪಂದ್ಯ ಗೆಲ್ಲಿಸಿರುವ ಕೊಹ್ಲಿ ಸರಾಸರಿ 70 ಶೇಕಡಾ ಪಂದ್ಯ ಗೆದ್ದು ಯಶಸ್ವಿ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಟಿ ಟ್ವೆಂಟಿ ಪಂದ್ಯದಲ್ಲಿ ಕೂಡ ಯಶಸ್ವಿ ನಾಯಕ ಎನಿಸಿಕೊಂಡು ನಮೀಬಿಯಾ ಎದುರು ಗೆದ್ದು ತನ್ನ ನಾಯಕತ್ವದ ಪಯಣ ಕೊನೆ ಗೊಳಿಸಿದರು. ಐಸಿಸಿ ಟ್ರೋಫಿ ವಿಚಾರ ಬಂದಾಗ ಕೊಹ್ಲಿ ಯಾಕೋ unlucky ಎಂದರೂ ತಪ್ಪಾಗದು ಯಾಕೆಂದರೆ ಅದು ಅವರ ನಾಯಕತ್ವದ ಐಸಿಸಿ ಟೂರ್ನಿ ಯ ರೆಕಾರ್ಡ್ ನೋಡಿದಾಗ ಗೊತ್ತಾಗುತ್ತದೆ. ಆದರೂ ಯಶಸ್ಸಿನ ಶಿಖರದಲ್ಲಿ ಇರುವ ಕೊಹ್ಲಿ ಅವರ ವಿರಾಟ ಪರ್ವ ಕೊನೆಗೊಂಡಿರುವುದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.

Comments (0)
Add Comment