ಶ್ರೀಲಂಕಾ ಟೆಸ್ಟ್ ಸರಣಿಗೆ ಪೂಜಾರ-ರಹಾನೆ ಬದಲಿಗೆ‌ ಈ ಆಟಗಾರರು ಸೂಕ್ತ ಎಂದು‌ ಹೇಳಿದ ಸುನೀಲ್ ಗಾವಸ್ಕರ್. ದಿಗ್ಗಜರ ಆಟ ಇಲ್ಲಿಗೆ ಮುಗಿಯಿತೆ?

1,152

ಚೇತೇಶ್ವರ ಪೂಜಾರ ಹಾಗು ಅಜಿಂಕ್ಯ ರಹಾನೆ ಭಾರತ ಟೆಸ್ಟ್ ತಂಡದಲ್ಲಿ ಕಳೆದ ಒಂದು ದಶಕಗಳಿಂದ ಸ್ಥಾನ ಪಡೆದುಕೊಂಡು ಭಾರತ ಗೆಲ್ಲಲು ತಮ್ಮ ಸಹಾಯ ನೀಡಿದವರು. ಅನೇಕ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಆಗಿಯೂ ಹೊರಹೊಮ್ಮಿದವರು. ಅಲ್ಲದೇ ಚೇತೇಶ್ವರ ಪೂಜಾರ ಅವರನ್ನು ಭಾರತದ ಮಾಜಿ‌ ನಾಯಕ ಹಾಗು ದಿ ವಾಲ್ ಅಂತಾನರ ಕರೆಸಿಕೊಳ್ಳುವ ರಾಹುಲ್ ದ್ರಾವಿಡ್ ಅವರ ಸ್ಥಾನ ಹಾಗು ಜವಬ್ದಾರಿ ಸಮರ್ಥವಾಗಿ ನಿಭಾಯಿಸಬಲ್ಲ ಆಟಗಾರ ಎಂದೂ ಗುರುತಿಸಿಕೊಂಡವರು.

ಇನ್ನೂ ರಹಾನೆ ತಮ್ಮ ದೇಶೀಯ ಪಂದ್ಯಗಳಲ್ಲಿ ಉತ್ತಮ ಆಟವಾಡುತ್ತಾ ಅನೇಕ ವರ್ಷಗಳಿಂದ ಭಾರತದ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಅಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ಆಟಗಾರ. ಉಪಕಪ್ತಾನನಾಗಿ ಜವಬ್ದಾರಿ ವಹಿಸಿಕೊಂಡಿದ್ದರೂ ನಾಯಕನಾಗಿ ಸಿಕ್ಕ ಕೆಲವೇ ಪಂದ್ಯಗಳಲ್ಲಿ ತಮ್ಮ ನಾಯಕತ್ವ ದ ಜಲಕ್ ತೋರಿಸಿಕೊಟ್ಟ ಆಟಗಾರ. ರಹಾನೆ ನಾಯಕನಾಗಿ ಮುನ್ನಡೆಸಿದ ಪಂದ್ಯಗಳಲ್ಲಿ ಒಂದನ್ನೂ ಭಾರತ ಸೋಲಲಿಲ್ಲ. ಕೇವಲ ಒಂದು ಪಂದ್ಯ ಡ್ರಾ ಮೂಲಕ ಮುಕ್ತಾಯಗೊಂಡಿದೆ. ಇದೀಗ ಕಳೆದೆರಡು ವರ್ಷಗಳಿಂದ ಈ ಇಬ್ಬರೂ ಆಟಗಾರರ‌ ಬ್ಯಾಟಿಂದ ರನ್‌ಗಳು ಬರುತ್ತಿಲ್ಲ. ಇದೇ ಕಾರಣಕ್ಕೆ ತಂಡದಲ್ಲಿ‌ ಇವರ ಸ್ಥಾನ ಅಲುಗಾಡುತ್ತಿದೆ.

ಬರುವ ತಿಂಗಳು ಅಂದರೆ ಪೆಬ್ರವರಿ ೨೦೨೨ ರಲ್ಲಿ ಶ್ರೀಲಂಕಾ ಹಾಗು ಭಾರತ ತಂಡದ ನಡುವೆ ಟೆಸ್ಟ್ ಸರಣಿ ನಡೆಯಲಿದೆ. ಭಾರತದ ಆಯ್ಕೆ ಸಮಿತಿಗೆ ಮದ್ಯಮ ಕ್ರಮಾಂಕದ ಉತ್ತಮ ಆಟಗಾರರನ್ನು ಪರೀಕ್ಷೆ ಮಾಡಲು ಉತ್ತಮ ಸಮಯ ಎಂದು ಭಾರತದ ಮಾಜೀ‌ ಆಟಗಾರ ಸುನೀಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ. ಗವಾಸ್ಕಾರ್ ಪ್ರಕಾರ ಪೂಜಾರ ಬದಲಾಗಿ ಶ್ರೇಯಸ್ ಐಯ್ಯರ್ ಹಾಗು ರಹಾನೆ ಬದಲಾಗಿ ಹನುಮ ವಿಹಾರಿ ಆಡುವುದು ಉತ್ತಮ ಎಂದು ಹೇಳುತ್ತಾ ಚೇತೇಶ್ವರ ಪೂಜಾರ ಹಾಗು ಅಜಿಂಕ್ಯ ರಹಾನೆ ಅವರನ್ನು ತಂಡದಿಂದ ಕೈಬಿಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶ್ರೇಯಸ್ ಹಾಗೂ ವಿಹಾರಿ‌ ಅಲ್ಲದೇ ಶುಭಮ್ ಗಿಲ್ ಹಾಗು ಸೂರ್ಯಕುಮಾರ್ ಯಾದವ್ ಅವರ ಹೆಸರು ಕೂಡಾ ಸುನೀಲ್ ಗಾವಸ್ಕರ್ ಆಯ್ಕೆ ಮಂಡಳಿಗೆ ಸಲಹೆ ನೀಡಿದ್ದಾರೆ.

Leave A Reply

Your email address will not be published.