ಸಣ್ಣ ಮಕ್ಕಳ ಆಧಾರ್ ಹೆಸರು ನೋಂದಣಿಯಲ್ಲಿ ಮಹತ್ವದ ಬದಲಾವಣೆ ತರಲಿರುವ UIDAI ? ಏನಿದು ಬನ್ನಿ ಓದಿರಿ.

ಆಧಾರ್ ಕಾರ್ಡ್ ಎಂದರೆ ಎಲ್ಲರಿಗೂ ಬೇಕಿರುವ ಬಹು ಮುಖ್ಯ ದಾಖಲೆ. ಭಾರತೀಯರು ಎಂದು ತಿಳಿದು ಕೊಳ್ಳಲು ಇರುವ ಮೂಲ ದಾಖಲೆಗಳಲ್ಲಿ ಇದು ಕೂಡ ಒಂದು. ಹೌದು ಆಧಾರ್ ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಬ್ಯಾಂಕ್ ಖಾತೆ ತೆರೆಯಲು ಇರಬಹುದು, ಮಕ್ಕಳ ಶಾಲೆಗೆ ಸೇರಿಸಲು ಇರಬಹುದು, ಯಾವುದೇ ಸರ್ಕಾರಿ ದಾಖಲೆ ಪಡೆಯಲು ಇರಬಹುದು, ಅಥವಾ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯ ಪಡೆಯಲು ಇರಬಹುದು ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯ. ಆಧಾರ್ ಕಾರ್ಡ್ ಇಲ್ಲದೆ ಯಾವ ಕೆಲಸವು ಆಗುವುದಿಲ್ಲ.

ಇದೀಗ ಆಧಾರ್ ಕಾರ್ಡ್ ನೋಂದಣಿಯನ್ನು ಸುಲಭಗೊಳಿಸಲು ಯುಐಡಿಎಐ ಹೊಸ ನೀತಿಯನ್ನು ತರಲು ಮುಂದಾಗಿದೆ. ಹಿಂದಿನ ನಿಯಮಗಳ ಪ್ರಕಾರ ಮಕ್ಕಳ ಆಧಾರ್ ನೋಂದಣಿ ಮಾಡಲು 5 ವರ್ಷ ವಯಸ್ಸು ಆಗಿರ ಬೇಕಿತ್ತು. 5 ವರ್ಷದ ನಂತರ ಹೆತ್ತವರು ಈ ಆಧಾರ್ enroll ಮಾಡಲು ಅಲೆದಾಡಬೇಕಿತ್ತು ಆದರೆ ಇದೀಗ ಮಹತ್ತರ ಬದಲಾವಣೆ ಎಂಬಂತೆ ಈ ನೀತಿಯನ್ನು ಬದಲಿಸಲು ಮುಂದಾಗಿದೆ ಯುಐಡಿಎಐ.

ಹೌದು ಮಗು ಹುಟ್ಟಿದ ಸಮಯದಲ್ಲೇ , ಅಂದರೆ ಅದು ಯಾವುದೇ ಆಸ್ಪತ್ರೆ ಇರಲಿ ಅಥವಾ ನರ್ಸಿಂಗ್ ಹೋಂ ಇರಲಿ ಮಗು ಹುಟ್ಟಿದ ಆಸ್ಪತ್ರೆ ಇಂದಲೇ ಹುಟ್ಟಿದ ಕೂಡಲೇ ಆಸ್ಪತ್ರೆ ಇಂದಲೇ ನೋಂದಣಿ ಮಾಡಿಸುವ ಹೊಸ ಯೋಜನೆ ಜಾರಿಗೆ ತರುವ ಮುಂದಾಲೋಚನೆಯಲ್ಲಿದೆ ಸರ್ಕಾರ. ಇದು ಆದ್ದದೆ ಆದಲ್ಲಿ ತುಂಬಾ ಅನುಕೂಲ ಆಗಲಿದೆ. ಅದು ಏನೇ ಇರಲಿ ಇರುವ ಹಳೆ ನಿಯಮಗಳಿಗೆ ಆಗಾಗ್ಗೆ ತಿದ್ದುಪಡಿ ಆದರೆ ಮಾತ್ರ ಬದಲಾಗುತ್ತಿರುವ ಜಗತ್ತಿಗೆ ಸರ್ಕಾರ ಕೂಡ ಹೊಮ್ಮಿಕೊಳ್ಳಲು ಸಾಧ್ಯ.

Comments (0)
Add Comment