ಈ ದೇಶದಲ್ಲಿ ಇರುವುದು ಕೇವಲ 27 ಜನರು ಮಾತ್ರ? ಆದರೂ ಈ ದೇಶಕ್ಕೆ ಹೋಗಲು ಬೇಕು ವೀಸಾ!

ನಮ್ಮ ಈ ಪ್ರಪಂಚದಲ್ಲಿ ಚಿತ್ರ ವಿಚಿತ್ರ ಅದ್ಭುತಗಳನ್ನು ನಾವು ನೋಡುತ್ತೇವೆ. ಕೆಲವೊಂದು ನೈಸರ್ಗಿಕವಾಗಿ ಇದ್ದರೆ ಕೆಲವೊಂದು ಮಾನವ ನಿರ್ಮಿತವಾಗಿದೆ . ದೇಶ ವಿದೇಶಗಳನ್ನು ತುಲನೆ ಮಾಡಿದಾಗ ಎಲ್ಲವೂ ಒಂದು ಪ್ರದೇಶಕ್ಕಿಂತ ಇನ್ನೊಂದು ಪ್ರದೇಶದಲ್ಲಿ ಭಿನ್ನತೆ ಕಾಣಬಹುದು. ಒಂದು ದೇಶ ಅಂತ ಬಂದಾಗ ಅಲ್ಲಿ ಲಕ್ಷಾಂತರ ಕೋಟ್ಯಾಂತರ ಜನರು ವಾಸ ಮಾಡುತ್ತಾರೆ. ಅದಕ್ಕೆ ಆದ ಬೌಗೋಳಿಕ ರಚನೆ , ನ್ಯಾಯ ವ್ಯವಸ್ಥೆ ಎಲ್ಲವೂ ಇರುತ್ತದೆ. ಆದರೆ ಇಲ್ಲೊಂದು ದೇಶ ಬಹಳ ವಿಚಿತ್ರವಾಗಿದೆ ಹೌದು ಬನ್ನಿ ಅದರ ಬಗ್ಗೆ ತಿಳಿಯೋಣ.

ಸೀ ಲ್ಯಾಂಡ್ ಅನ್ನುವ ದೇಶ ಇದು. ಬ್ರಿಟಿಷ್ಗಡಿಯಲ್ಲಿರುವ ಸಮುದ್ರದಲ್ಲಿ ಇರುವ ಸಣ್ಣ ಪ್ರದೇಶ. ಇದನ್ನು ಮಾನವನೇ ಮಾಡಿದ್ದು ಇಲ್ಲಿ ಇರುವುದು ಕೇವಲ 27 ಜನರು ಮಾತ್ರ ಇದ್ದಾರೆ. ಮಾನವ ನಿರ್ಮಿತ ಈ ಪ್ರದೇಶ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ. ಮಾನವ ವಾಸಿಸುವ ಅತಿ ಸಣ್ಣ ದೇಶ ಎಂಬ ದಾಖಲೆ ಇದು ಮಾಡಿದೆ. ಯಾವುದೇ ರೀತಿಯಲ್ಲೂ ಇದನ್ನು ದೇಶ ಎಂದು ಪರಿಗಣನೆ ಮಾಡಲು ಸಾಧ್ಯ ಇಲ್ಲ ಏಕೆಂದರೆ ಇದು ಮಾನವ ನಿರ್ಮಿತ ಜಾಗ ಇದಕ್ಕೆ ದೇಶ ಎಂಬ ಮಾನ್ಯತೆ ನೀಡಲು ಸಾಧ್ಯ ಇಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಆದರೂ ಈ ಜಾಗವನ್ನು ಅಲ್ಲಿ ವಾಸಿಸುವ ಜನರು ತಮ್ಮದೇ ದೇಶದ ಮಾದರಿಯಲ್ಲಿ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಇಲ್ಲಿಗೆ ಯಾರಾದರೂ ಹೋಗಬೇಕು ಎಂದು ಬಯಸಿದರೆ ಸೀದಾ ಹೋಗುವ ಹಾಗೆ ಇಲ್ಲ. ಬದಲಾಗಿ ಇಲ್ಲಿ ವೀಸಾ ಪಡೆದು ಹೋಗಬೇಕು. ಆದರೆ ಇಲ್ಲಿ ಯಾವ ರೀತಿಯ ಆಡಳಿತ ವೈಖರಿ ಇದೆ ಮತ್ತು ಯಾವ ರೀತಿಯ ಆಡಳಿತ ವ್ಯವಸ್ಥೆ ಇದೆ ಎಂದು ಎಲ್ಲೂ ಬಹಿರಂಗ ಆಗಿಲ್ಲ.

British countrySea landSmallest nation
Comments (0)
Add Comment