ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಸಿ ಆರ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖ್ಯಮಂತ್ರಿ ಆಕಾಂಕ್ಷಿ ರೇವಂತ್ ರೆಡ್ಡಿಯನ್ನು ಸೋಲಿಸಿದ ಈ ವ್ಯಕ್ತಿ ಯಾರು ಗೊತ್ತೇ? ಯಾಕೆ ಇವರು ಇಷ್ಟೊಂದು ಪವರ್ಫುಲ್?

ಪಂಚರಾಜ್ಯಗಳ ಚುನಾವಣೆ ಮುಗಿದು ಇಂದು 4/12/2023 ಮತಗಳ ಎಣಿಕೆ ಕಾರ್ಯ ನಡೆಯುತ್ತಿದ್ದು ರಾಜಕೀಯ ಏಳುಬೀಳುಗಳನ್ನು ಕಾಣುವ ಹಾಗೆ ಆಗಿದೆ. ಮಧ್ಯಪ್ರದೇಶ , ರಾಜಸ್ಥಾನ್ , ಛತ್ತೀಸ್ ಘಡ ಬಿಜೆಪಿ ತೆಕ್ಕೆಗೆ ಬಿದ್ದರೆ , ತೆಲಂಗಾಣದಲ್ಲಿ ಬಿಜೆಪೆ ತುಸು ಚೇತರಿಕೆ ಕಂಡಿದ್ದರು ಆಡಳಿತ ಚುಕ್ಕಾಣಿ ಹಿಡಿಯುವತ್ತ ಕಾಂಗ್ರೆಸ್ ದಾಪುಗಾಲು ಇಟ್ಟಿದೆ. ಆದರೆ ಅಚ್ಚರಿ ಎಂಬಂತೆ ತೆಲಂಗಾಣದಲ್ಲಿ ಮಾತ್ರ ಈ ಬಾರಿ ರಾಜಕೀಯ ಡ್ರಾಮಗೆ  ಸಾಕ್ಷಿ ಆಗಿದೆ. ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಕೆಸಿಆರ್ ಮತ್ತು ಅವರ ಕ್ಯಾಬಿನೆಟ್ ಎಲ್ಲಾ ಮಿನಿಸ್ಟರ್ ಗಳು ಮಕಾಡೆ ಮಲಗಿದ್ದಾರೆ.

ಅದೇ ರೀತಿಯಲ್ಲಿ ಇನ್ನೊಂದು ಕಡೆ ಕಾಂಗ್ರೆಸ್ ಭರ್ಜರಿಯಾಗಿ ಮುನ್ನುಗ್ಗಿದರೂ ಪಕ್ಷದ ರಾಜ್ಯದ ಜವಾಬ್ದಾರಿ ಹೊತ್ತು ರಾಜ್ಯಾಧ್ಯಕ್ಷರಾಗಿ  ಚುಕ್ಕಾಣಿ ಹಿಡಿದ ರೆವಂತ್ ರೆಡ್ಡಿ ಮಾತ್ರ ಸೋಲಿನ ರುಚಿಯನ್ನು ಸವಿದಿದ್ದಾರೆ. ಈ ಬಾರಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಎಂದೇ ಇಷ್ಟರ ವರೆಗೆ ಹಬ್ಬಿದೆ ಆದರೆ ಅವರನ್ನು ಕೂಡ ಸೋಲಿಸಿ ಇತಿಹಾಸ ಸೃಷ್ಟಿ ಮಾಡಿದ್ದಾರೆ ಬಿಜೆಪಿಯ ವೆಂಕಟ ರಮಣ ರೆಡ್ಡಿ

ಪಶ್ಚಿಮ ತೆಲಂಗಾಣ ದ ದೇವರ್ ಕಾಡ್ರ ವಿಧಾನ ಸಭೆಯಲ್ಲಿ ಬಹಳ ರೋಚಕತೆ ನಡೆದಿದೆ. ಬಿಜೆಪಿಯ ವೆಂಕಟರಮಣ ರೆಡ್ಡಿ ಎದುರು ಇಬ್ಬರು ಘಟಾನುಘಟಿ ನಾಯಕರು ಸ್ಪರ್ಧೆಗೆ ಇಳಿದಿದ್ದರು. ಒಬ್ಬರು ಪ್ರಸ್ತುತ ತೆಲಂಗಾಣ ಮುಖ್ಯಮಂತ್ರಿ ಮತ್ತೊಬ್ಬರು ಕಾಂಗ್ರೆಸ್ ಮುಖ್ಯಮಂತ್ರಿ ಆಕಾಂಕ್ಷಿ . ಆದರೆ ಇಬ್ಬರನ್ನೂ ಹಿಂದಕ್ಕೆ ತಳ್ಳಿ ವಿರೋಚಿತವಾಗಿ ಗೆಲುವಿನ ದಿಕ್ಕಿಗೆ ಸಾಗಿದ್ದಾರೆ . ಜನರು ಮನಸು ಮಾಡಿದರೆ ಏನನ್ನು ಬೇಕಾದರೂ ಯಾವಾಗಲೂ ಬದಲು ಮಾಡುತ್ತಾರೆ ಎಂಬುದಕ್ಕೆ ಇದುವೇ ಸಾಕ್ಷಿ.

Comments (0)
Add Comment