ಐಪಿಎಲ್ ಮಾತ್ರ ಅಲ್ಲದೆ ಬೇರೆ ದೇಶಗಳ ಪ್ರೀಮಿಯರ್ ಲೀಗ್ ಆಡಬೇಕೆ ಎಂದು ಕೇಳಿದ ಪ್ರಶ್ನೆಗೆ ರಾಹುಲ್ ದ್ರಾವಿಡ್ ಹೇಳಿದ ಉತ್ತರ ನಿಮಗೂ ಸರಿ ಎನಿಸಬಹುದು.

ICC T20 WorlCup ಸೆಮಿಫೈನಲ್ ನಲ್ಲಿ 10 ವಿಕೆಟ್ ಗಳ ಸೋಲಿನ ಬಳಿಕ ಭಾರತದ ತರಬೇತು ಗಾರ ರಾಹುಲ್ ದ್ರಾವಿಡ್ (Rahul Dravid), ಭಾರತೀಯ ತಂಡದ ಆಯ್ಕೆ ಸಮಿತಿ ಹಾಗು ತಂಡದ ನಾಯಕ ರೋಹಿತ್ ಶರ್ಮ ಹಾಗು ಆಟಗಾರರ ಮೇಲೆ ಇಡೀ ಭಾರತೀಯರು ಕೋಪ ಗೊಂಡಿದ್ದಾರೆ. ಹಾಗೇನೇ ಅನೇಕ ಆಟಗಾರರನ್ನು ತಂಡದಿಂದ ಕೈ ಬಿಡುವಂತೆ ಒತ್ತಾಯ ಕೂಡ ಮಾಡಿದ್ದಾರೆ. ಅಭಿಮಾನಿಗಳು ಇದಕ್ಕೆ ಐಪಿಎಲ್(IPL) ನೇರ ಕಾರಣ ಎಂದು ಕೂಡ ಹೇಳಿದ್ದಾರೆ, ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಐಪಿಎಲ್ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ.

ಇದಕ್ಕೆ ಸರಿಯಾಗಿ ಪತ್ರಕಾರರೊಬ್ಬರು ಭಾರತ ಸೋತ ಬಳಿಕ ರಾಹುಲ್ ದ್ರಾವಿಡ್ ಅವರ ಬಳಿ ಭಾರತೀಯ ಆಟಗಾರರು ಕೂಡ ಹೊರಗಿನ ಲೀಗ್ ಗಳಲ್ಲಿ ಆಡಬೇಕು ಎನ್ನುವ ಅವಶ್ಯಕತೆ ಇದೆಯಾ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ರಾಹುಲ್ ದ್ರಾವಿಡ್, ಹೌದು ನಮ್ಮ ಯುವ ಆಟಗಾರರು ಬಹಳ ಅಂತಾರಾಷ್ಟ್ರೀಯ ಲೀಗ್ ಪಂದ್ಯಗಳಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದಾರೆ. ಇದು ನನ್ನ ಪರಿಧಿಯಲ್ಲಿ ಬರುವುದಿಲ್ಲ. ಬಿಸಿಸಿಐ ಇದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಹಾಗೇನೇ ನಮ್ಮ ಐಪಿಎಲ್ ಸರಣಿ ನಡುವೆಯೇ ಬೇರೆ ಸರಣಿಗಳು ನಡೆಯುವುದರಿಂದ ನಮಗೆ ಅಲ್ಲಿ ಹೋಗಿ ಆಡುವ ಅವಕಾಶ ಕಡಿಮೆ ಇರುತ್ತದೆ ಎಂದು ಹೇಳಿದ್ದಾರೆ ರಾಹುಲ್ ದ್ರಾವಿಡ್.

ಹಾಗೇನೇ ನಾವು ಹೊರಗಿನ ಲೀಗ್ ಪಂದ್ಯಗಳನ್ನು ಆಡುತ್ತ ಕುಳಿತರೆ, ನಮ್ಮ ದೇಶಿಯ ಕ್ರಿಕೆಟ್ ಭವಿಷ್ಯ ಮುಗಿದೇ ಹೋಗುತ್ತದೆ. ಅಲ್ಲದೆ ರಣಜಿ ಪಂದ್ಯಗಳಂತಹ ದೇಶಿಯ ಕ್ರಿಕೆಟ್ ಗೆ ಮಾರಕ. ಇವುಗಳು ನಿಂತು ಹೋದರೆ ಇದರ ನೇರ ಪರಿಣಾಮ ನಮ್ಮ ಟೆಸ್ಟ್ ಕ್ರಿಕೆಟ್ ಮೇಲೆ ಬೀಳುತ್ತದೆ. ಆದ್ದರಿಂದ ಬೇರೆ ಹೊರಗಿನ ಲೀಗ್ ಆಡುವುದು ಒಳ್ಳೇದು ಎಷ್ಟಿದೆಯೋ ಅದರಷ್ಟೇ ಕೆಟ್ಟದು ಕೂಡ ಇದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ನಮ್ಮಲ್ಲಿ ಅನೇಕ ಯುವ ಆಟಗಾರಿಗೆ ಇಲ್ಲಿ ನಡೆಯುವ ಸರಣಿ ನಡುವೆ ಆಫರ್ ಬಂದಿದೆ.

DINESH KARTHIKicc t20 worlcuprahul dravidsuryakunar yadavvirat kohli
Comments (0)
Add Comment