ಕಾಲೇಜಿಗೆ ಹೋಗುವ ಈ ವಿಧ್ಯಾರ್ಥಿ ತಯಾರಿಸಿದ ಕಾರಿನ ವಿಶೇಷತೆ ಏನು ಗೊತ್ತೇ? ಇದು 30 ರೂಪಾಯಿಯಲ್ಲಿ 185 ಕಿಮೀ ಚಲಿಸುತ್ತದೆ?

ಆವಿಷ್ಕಾರದ ದಿನಗಳು ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರ ಮಾಡುತ್ತಲೇ ಇದೆ. ಮಕ್ಕಳಿಗೆ ಚಿಕ್ಕಂದಿನಿಂದ ಈ ಒಂದು ಹವ್ಯಾಸವನ್ನು ಕಲಿಸುತ್ತಾ ಬರುತ್ತಿದ್ದಾರೆ. ಸರ್ಕಾರವು ಅದಕ್ಕೆ ಪೂರಕ ಎಂಬಂತೆ ಮೇಕ್ ಇನ್ ಇಂಡಿಯಾ ಗೆ ಒತ್ತು ಕೊಡುತ್ತಾ ದೇಶೀಯ ಉತ್ಪಾದನೆಗೆ ಮಹತ್ವ ಕೊಡುತ್ತಿದೆ. ಇದರಿಂದಲೇ ಪ್ರೇರಿತನಾಗಿ ವಿಧ್ಯಾರ್ಥಿ ಒಬ್ಬ ಕಾರೊಂದನ್ನು ತಯಾರಿಸಿದ್ದಾರೆ ಬನ್ನಿ ಏನಿದರ ವಿಶೇಷತೆ ತಿಳಿಯೋಣ.

ಇವರ ಹೆಸರು ಹಿಮಾಂಶು ಪಟೇಲ್, ಮಧ್ಯಪ್ರದೇಶ ಮೂಲದ ಇವರು ಇಂಜಿನಿಯರಿಂಗ್ ವಿಧ್ಯಾರ್ಥಿ. ತಾವು ಕಲಿಯುತ್ತಿರುವಾಗ ಆವಿಷ್ಕರಿಸಿದ್ದು ಈ ಎಲೆಕ್ಟ್ರಿಕ್ ಕಾರ್. ಇದು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 185 ಕಿಮೀ ಓಡುತ್ತದೆ. ಈ ಕಾರನ್ನು ವಿನ್ಯಾಸ ಮಾಡಿರುವ ರೀತಿಯಿಂದ ಇದರಲ್ಲಿ 5 ಜನ ಆರಮವಾಗಿ ಕುಳಿತು ಕೊಳ್ಳಬಹುದು. ಇದು 50ಕಿಮೀ ಪ್ರತಿ ಗಂಟೆ ವೇಗದಲ್ಲಿ ಚಲಿಸುವಷ್ಟು ಸಕ್ಷಮವಾಗಿದೆ. ಈ ಕಾರನ್ನು ಒಮ್ಮೆಲೆ ಚಾರ್ಜ್ ಮಾಡಲು 4 ಗಂಟೆಗಳ ಕಾಲವದಿ ತೆಗೆದು ಕೊಳ್ಳುತ್ತದೆ. ಹಿಮಾಂಶು ಹೇಳುವ ಪ್ರಕಾರ ಒಮ್ಮೆಗೇ ಚಾರ್ಜ್ ಮಾಡಲು 30 ರೂಪಾಯಿ ವೆಚ್ಚ ತಗುಲುತ್ತದೆ ಎಂದು.

ಇದರ ಬೆಲೆಯ ಬಗ್ಗೆ ತಿಳಿಯಲೇ ಬೇಕು. ಯಾಕೆಂದರೆ ಹೆಚ್ಚು ಖರ್ಚು ಮಾಡಿ ಖರೀದಿ ಮಾಡುವವರು ಬಹಳ ಕಡಿಮೆ ಅತ್ಯಂತ ಕಡಿಮೆ ಹಣದಲ್ಲಿ ಕಾರ್ ಹೊಂದಲು ಇಚ್ಚಿಸುವವರಿಗೇ ಇದು ಮುಂದೆ ಉಪಕಾರಿ ಆಗ ಬಹುದು. ಇದರ ಬೆಲೆ ಒಂದು ಬೈಕ್ ನಶ್ಟು ಬರುತ್ತದೆ. ಮತ್ತು ಹೆಚ್ಚೆಂದರೆ 2 ಲಕ್ಷದ ವರೆಗೆ ಇದರ ಖರ್ಚು ತಗಲಬಹುದು ಎನ್ನುತ್ತಾರೆ ಹಿಮಾಂಶು. ಅದೇನೆ ಆಗಲಿ ಇವರ ಈ ಪಯಣ ಮುಂದೆ ಸಾಗಿ ಸಾಮಾನ್ಯ ವರ್ಗದ ಜನರು ತಮ್ಮ ಕನಸಿನ ಕಾರು ಹೊಂದುವಂತೆ ಆಗಲಿ ಎಂದು ಆಶಿಸೋಣ

Comments (0)
Add Comment