ದಿನೇಶ್ ಕಾರ್ತಿಕ್ ರನ್ನು ಮಿಸ್ಟರ್ ಐಪಿಎಲ್ ಎಂದು ಘೋಷಿಸಿದ ವಿರಾಟ್ ಕೊಹ್ಲಿ. ಅವರ ಬಗ್ಗೆ ಇನ್ನೊಂದು ಹೇಳಿಕೆ ನೀಡಿ ಎಲ್ಲರನ್ನು ಬೆರಗಾಗಿಸಿದ್ದಾರೆ.

ಎಂಟು ತಿಂಗಳ ಹಿಂದೆ ಅಂದರೆ ಐಪಿಎಲ್ ನ ೧೪ ಸೀಸನ್ ಮುಗಿದ ನಂತರ ದಿನೇಶ್ ಕಾರ್ತಿಕ್ ಇಂಗ್ಲೆಂಡ್ ಅಲ್ಲಿ ಕಾಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇವರನ್ನು ಭಾರತದ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲು ಕೂಡ ಆಯ್ಕೆ ಸಮಿತಿ ಹಿಂದೇಟು ಹಾಕುತಿತ್ತು. ಶ್ರೀಲಂಕಾ ವಿರುದ್ದದ ಪಂದ್ಯಕ್ಕೂ ಕೂಡ ದಿನೇಶ್ ಕಾರ್ತಿಕ್ ಆಯ್ಕೆ ಆಗಿರಲಿಲ್ಲ. ಇವರು ಅಂತಾರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳದೆ ವರ್ಷಗಳೇ ಕಳೆದಿದೆ.

ಪ್ರಸ್ತುತ ಸಮಯಕ್ಕೆ ಬಂದರೆ ದಿನೇಶ್ ಕಾರ್ತಿಕ್ ಐಪಿಎಲ್ ೨೦೨೨ ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೋಲ್ಕತ್ತಾ ದಿಂದ RCB ೫ ಕೋಟಿ ಕೊಟ್ಟು ಖರೀದಿ ಮಾಡಿತಾದರೂ ಕೂಡ ಕೊಟ್ಟ ಹಣಕ್ಕೆ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ದಿನೇಶ್ ಕಾರ್ತಿಕ್. ತಂಡಕ್ಕೆ ಒಬ್ಬ ಫಿನಿಶರ್ ಎಂದರೆ ತಪ್ಪಾಗಲಾರದು. ಈ ಬಾರಿಯ ಐಪಿಎಲ್ ಅಲ್ಲಿ ಎರಡನೇ ಬಾರಿಗೆ RCB ಪರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರೆ ದಿನೇಶ್ ಕಾರ್ತಿಕ್.

ಬಿರುಸಿನ ಫಾರಂ ಅಲ್ಲಿರುವ ದಿನೇಶ್ ಕಾರ್ತಿಕ್ ಆರು ಇನ್ನಿಂಗ್ಸ್ ಅಲ್ಲಿ ೨೦೯ ರ ಸ್ಟ್ರೈಕ್ ರೇಟ್ ನಲ್ಲಿ ೧೯೭ ರನ್ ಗಳಿಸಿದ್ದಾರೆ. ಇವರು ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು ಕೂಡ ಎಲ್ಲರಿಗಿಂತ ಅತಿ ಹೆಚ್ಚು ರನ್ ಇವರದೇ. ಕೇವಲ ೩೪ ಎಸೆತಗಳಲ್ಲಿ ೬೬ ರನ್ ಗಳಿಸಿ ಡೆಲ್ಲಿ ವಿರುದ್ದ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ದಿನೇಶ್ ಕಾರ್ತಿಕ್. ೯೨ ರನ್ ಗಳಿಗೆ ೫ ವಿಕೆಟ್ ಕಳೆದುಕೊಂಡಿದ್ದ RCB ಯನ್ನ ೧೮೯ ರನ್ ಗಳಿಗೆ ತಲುಪಿಸಿದ ಶ್ರೇಯ ದಿನೇಶ್ ಕಾರ್ತಿಕ್ ಗೆ ಸಲ್ಲುತ್ತದೆ.

ಇದರ ಬಗ್ಗೆ ವಿರಾಟ್ ಕೊಹ್ಲಿ ಪ್ರತಿಕ್ರಯಿಸುತ್ತ ನಾನು ಈ ಸಂದರ್ಶನ ಜಾಸ್ತಿ ಮಾಡುವುದಿಲ್ಲ ಆದರೆ ಇಂದು ನಾನು ಮಿಸ್ಟರ್ IPL ಅವರನ್ನು ಸಂದರ್ಶಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದು ಒಂದು ಸುಂದರ ಕ್ಷಣ. ನೀವು ಈ ಫಾರಂ ಅಲ್ಲಿ ಬ್ಯಾಟ್ ಬಿಸುವುದು ನೋಡಲು ಖುಷಿಯಾಗುತ್ತದೆ. ೨೦೧೩ ರ ಐಪಿಎಲ್ ನಂತರ ಇದೆ ಮೊದಲ ಬಾರಿಗೆ ನಿಮ್ಮನ್ನು ಈ ತರಹ ಬ್ಯಾಟ್ ಬಿಸುವುದನ್ನು ನೋಡುತ್ತಿದ್ದೇನೆ ಎಂದಿದ್ದಾರೆ ವಿರಾಟ್ ಕೊಹ್ಲಿ.

ಮುಂಬರುವ ಟಿ-೨೦ ವಿಶ್ವಕಪ್ ನಲ್ಲಿ ಆಡಬೇಕೆಂದು ಅಸೆ ವ್ಯಕ್ತಪಡಿಸಿದ ದಿನೇಶ್ ಕಾರ್ತಿಕ್ ಗೆ ವಿರಾಟ್ ಕೊಹ್ಲಿ ” ದಿನೇಶ್ ಕಾರ್ತಿಕ್ ಈ ಆವೃತ್ತಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿ ಮುಂಬರುವ ವಿಶ್ವಕಪ್ ಗೆ ತನ್ನನ್ನು ಆಯ್ಕೆ ಮಾಡಬೇಕು ಎನ್ನುವ ಕಾರಣ ತಿಳಿಸಿದ್ದಾರೆ. ಆಯ್ಕೆಗಾರರು ಇವರ ಪ್ರದರ್ಶನ ನೋಡಿರುತ್ತಾರೆ. ಇದರ ಬಗ್ಗೆ ಅವರು ಉತ್ತಮ ತೀರ್ಮಾನ ತೆಗೆದುಕೊಳ್ಳಬಹುದು ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

DINESH KARTHIKIPL2022RCBvirat kohli
Comments (0)
Add Comment