ಭಾರತದಲ್ಲಿ ಬ್ಯಾನ್ ಆಗಲಿದೆಯೇ ಕ್ರಿಪ್ಟೋ ಕರೆನ್ಸಿ? ಮೋದಿ ಸರಕಾರ ತರಲಿದೆ ಹೊಸ ನಿಯಮ.

ಕ್ರಿಫ್ಟೋ ಕರೆನ್ಸಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಕರೆನ್ಸಿ . ದಿನದಿಂದ ದಿನಕ್ಕೆ ಇದರ ಮೇಲಿನ ಹೂಡಿಕೆ ಗಗನಕ್ಕೆ ಏರುತ್ತಿದೆ. ಹೌದು ಮೂಲಗಳ ಪ್ರಕಾರ ಭಾರತೀಯರು ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ crypto ಕರೆನ್ಸಿ ಅಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಗಳು ಇದೆ. ಸರಿ ಸುಮಾರು 40,000 ಕೋಟಿ ರೂಪಾಯಿ ಅಷ್ಟು ಹಣ ಇದರಲ್ಲಿ ಹೂಡಿಕೆ ಆಗಿದೆ ಎಂಬ ಮಾಹಿತಿ ಇದೆ. ಅತೀ ವೇಗವಾಗಿ ಇದು ಮಾರುಕಟ್ಟೆಯಲ್ಲಿ ಬೆಳೆಯುತ್ತಿದೆ. ಮುಂದೊಂದು ದಿನ ಷೇರು ಮಾರುಕಟ್ಟೆಯನ್ನೇ ಹಿಂದಿಕ್ಕಿ ಬೆಳೆದರೂ ಅಚ್ಚರಿ ಇಲ್ಲ. ಹೌದು ಅಷ್ಟರ ಮಟ್ಟಿಗೆ ಇದರ ಮೇಲಿನ ಹೂಡಿಕೆ ಹೆಚ್ಚುತ್ತಿದೆ. ಇದು ದೇಶದ ಅಭಿವೃದ್ಧಿಗೆ ಮಾರಕ ಎಂಬ ನೆಲೆಯಿಂದ ಇದೀಗ ಇದರ ನಿಯಮಗಳಲ್ಲಿ ಬಹು ದೊಡ್ಡ ಬದಲಾವಣೆ ಕಾಣುತ್ತಿದೆ.

ಕೇಂದ್ರ ಸರ್ಕಾರ ಈ ಹಿಂದೆಯೇ ಒಂದು ಸಮಿತಿಯನ್ನು ರಚಿಸಿ ವರದಿ ಸಲ್ಲಿಸಲು ಕಾಲಾವಕಾಶ ನೀಡಿತ್ತು. ಇದೀಗ ವರದಿ ಕೇಂದ್ರದ ಬಾಗಿಲಿಗೆ ತಲುಪಿದ್ದು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಹತ್ತರ ಬಿಲ್ ಒಂದು ಪಾಸ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಹೌದು ಹಾಗೇನಾದರೂ ಆದರೆ ಅದೆಷ್ಟೋ ಕೋಟಿ ಹೂಡಿಕೆ ಮಾಡಿದವರಿಗೆ ಬಿಗ್ ಶಾಕ್ ಅಂತೂ ಸಿಗುವುದು ಸತ್ಯ . ಹೌದು ಏನು ಹಾಗಾದರೆ ಈ ಬಿಲ್ ಏನಿದೆ ಇದರಲ್ಲಿ ತಿಳಿಯೋಣ.

ಈ ಬಿಲ್ ಪ್ರಕಾರ RBI ವ್ಯಾಪ್ತಿಗೆ ಒಳಪಡದ ಎಲ್ಲಾ crypto ಕರೆನ್ಸಿಗಳು ಭಾರತದಲ್ಲಿ ಬ್ಯಾನ್ ಆಗಲಿವೆ. ಹೌದು RBI ಆಡಳಿತಕ್ಕೊಳಪಟ್ಟ ಕರೆನ್ಸಿ ಬಿಟ್ಟು ಮತ್ತೆ ಎಲ್ಲವೂ ನಿಷೇಧ ಆಗಲಿದೆ. ಅದೆಷ್ಟೋ ಖಾಸಗಿ crypto ಕರೆನ್ಸಿಗಳು ಭಾರತದಲ್ಲಿ ಇದ್ದು ಅದರಲ್ಲೇ ಹೆಚ್ಚಿನ ಹೂಡಿಕೆ ಮಾಡಿರುವ ಜನಗಳಿಗೆ ಬಿಗ್ ಶಾಕ್ ನೀಡಿದೆ ಸರ್ಕಾರ. ಖಾಸಗಿ ಕರೆನ್ಸಿ ಎಂದರೆ ಪ್ರಸ್ತುತ ಹೆಚ್ಚು ಸುದ್ದಿಯಲ್ಲಿ ಇರುವ ಬಿಟ್ ಕಾಯಿನ್, ಇತೆರಿಯಂ ಇವೆಲ್ಲವೂ ಭಾರತದಲ್ಲಿ ನಿಷೇಧ ಆಗಲಿದೆ. ಹೌದು ಇವೆರಡೂ ಕೂಡ ಡಿಜಿಟಲ್ ಕರೆನ್ಸಿಯ ರಾಜ ಎಂದು ಕರೆಯಲ್ಪಡುತ್ತದೆ. ಆದರೆ ದೇಶದ ಹಿತ ಕಾಪಾಡುವ ನಿಟ್ಟಿನಲ್ಲಿ ಇದೀಗ ಇದನ್ನು ನಿಲ್ಲಿಸಲು ಮುಂದಾಗಿದೆ ಸರ್ಕಾರ. ಅದು ಏನೇ ಇರಲಿ ದೇಶದ ಹಿತವೆಂದು ಬಂದಾಗ ಎಲ್ಲರೂ ಕೈ ಜೋಡಿಸಿ ಒಂದಾಗ ಬೇಕು ಆಗಲೇ ಒಂದು ನಿರ್ಣಯ ಯಶಸ್ಸು ಕಾಣುವುದು.

bitcoincrypto
Comments (0)
Add Comment