ಮಾರ್ಗೋ ಸಾಬೂನು ಶುರುವಾದದ್ದು ಯಾಕೆ ಗೊತ್ತೇ? ಇದಕ್ಕೂ ನಮ್ಮ ಸ್ವತಂತ್ರಕ್ಕೂ ಏನಿದೆ ಲಿಂಕ್?

ನಮ್ಮ ಭವ್ಯ ಭಾರತ ದೇಶ ಅತ್ಯಂತ ಸಂಪದ್ಭರಿತ ದೇಶ. ಮೊಘಲರು, ಬ್ರಿಟಿಷರು, ಫ್ರೆಂಚರು ದಂಡೆತ್ತಿ ಬಂದು ಎಲ್ಲವನ್ನೂ ದೋಚಿಕೊಂಡು ಹೋದರು. ಆದರೆ ಭಾರತವು ಸುಮ್ಮನೆ ಕೂರಲಿಲ್ಲ ಪ್ರತಿ ಹೋರಾಟ ನಡೆಸಿತ್ತು. ದೇಶದ ಸ್ವಾತಂತ್ರ್ಯ ಪಡೆಯಲು ಬಲಿದಾನ ನೀಡಿದವರು ಅದೆಷ್ಟೋ. ಅಂತಹ ಸೇನಾನಿಗಳಲ್ಲಿ ಇವರು ಒಬ್ಬರು. ಹಾಗೆ ಇವರು ಬರಿ ಸೇನಾ ಹೋರಾಟ ಮಾತ್ರ ಅಲ್ಲ ವ್ಯಾಪಾರದಲ್ಲಿ ಬ್ರಿಟಿಷರಿಗೆ ಸೆಡ್ಡು ಹೊಡೆದು ನಿಂತಿದ್ದರು. ಅವರ ಉತ್ಪನ್ನಕ್ಕೆ ಪೈಪೋಟಿ ಎಂಬಂತೆ ಸ್ವದೇಶಿ ಸೋಪ್ ತಯಾರಿಸಿದ್ದರು. ಯಾರಿವರು ಬನ್ನಿ ತಿಳಿಯೋಣ.

ಯೋಗೇಂದ್ರ ಚಂದ್ರ ದಾಸ್ , ಮೂಲತಃ ಇವರು ಕೋಲ್ಕತ್ತಾ . 1905 ರ ಸಮಯದಲ್ಲಿ ಲಾರ್ಡ್ ಕರ್ಜನ್ ಅವರು ಭಾರತವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂಬ ಆಜ್ಞೆ ಹೊರಡಿಸಿದ್ದರು. ಈ ಸಂದರ್ಭದಲ್ಲಿ ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲೂ ಕಟ್ಟಿ ಹಾಕಲು ಪ್ರಯತ್ನ ಪಡುತ್ತಿತ್ತು. ಸೇನಾನಿಗಳು ಒಂದೆಡೆ ಪರಾಕ್ರಮ ಮೆರೆದರೆ. ದೇಶೀಯ ವ್ಯಾಪಾರಿಗಳು ಜನರಲ್ಲಿ ದೇಶೀಯ ಉತ್ಪನ್ನಗಳ ಮಹತ್ವ ಸಾರುತ್ತಾ ವಿದೇಶಿ ಉತ್ಪನ್ನಗಳ ಬಹಿಷ್ಕರಿಸುವಂತೆ ಮಾಡುತ್ತಿದ್ದರು. ದೇಶೀಯವಾಗಿ ಸಧೃಡ ಆಗಬೇಕು ಎಂಬ ಹಿನ್ನಲೆಯಲ್ಲಿ ಪರಿಚಯಿಸಿದ ಈ ಸೋಪ್ “ಮಾರ್ಗೊ”.

ಹೌದು ಈ ಒಂದು ಸಾಬೂನಿನ ಬಗ್ಗೆ ಎಲ್ಲರೂ ಕೇಳಿಯೇ ಇರುತ್ತಾರೆ. ಯಾಕೆಂದರೆ ದೇಶಾದ್ಯಂತ ಅತ್ಯಂತ ಜನಪ್ರಿಯವಾಗಿದ್ದ ಸೋಪ್ ಇದು. ಆರಂಭದಲ್ಲಿ ಮನೆ ಮನೆಗೆ ಹೋಗಿ ಮಾರಾಟ ಮಾಡುತ್ತಿದ್ದರು. ಆಯುರ್ವೇದ ವನ್ನು ಮೂಲವಾಗಿ ಇಟ್ಟುಕೊಂಡು ಇದನ್ನು ತಯಾರಿಸಲಾಗಿತ್ತು. ಇದು ಬೆಳೆದೆ ಬೆಳೆದು ದೊಡ್ಡ ಹೆಮ್ಮರವಾಗಿ ಬೆಳೆಯಿತು. ಈಗಲೂ ಮಾರ್ಗೊ ಸಾಬೂನುಗಳು ಮಾರುಕಟ್ಟೆಯಲ್ಲಿ ಇದೆ.

ಅದೇನೇ ಆಗಲಿ ಆ ಸಮಯದಲ್ಲಿ ಎಲ್ಲರ ವಿರೋಧ ಕಟ್ಟಿಕೊಂಡು ಇಂತಹ ಕೆಚ್ಚೆದೆಯ ನಿರ್ಧಾರ ತೆಗೆದು ಕೊಂಡು ದೇಶೀಯ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಿದ್ದು ಯಾವುದೇ ಹೋರಾಟಕ್ಕೂ ಕಮ್ಮಿಯಿಲ್ಲ. ಅದೇ ಹಾದಿಯಲ್ಲಿ ಮೋದಿ ಅವರು ಸಾಗುತ್ತಿದ್ದು “Vocal for local” ಅಭಿಯಾನ ಆರಂಭಿಸಿದ್ದಾರೆ. ನಾವೆಲ್ಲರೂ ಇದಕ್ಕೆ ಕೈಜೋಡಿಸಿ ದೇಶೀಯ ವ್ಯಾಪಾರಿಗಳನ್ನು, ದೇಶೀಯ ಉತ್ಪಾದಕರನ್ನು ಉತ್ತೇಜಿಸಿ ಬೆಳೆಸೋಣ.

Comments (0)
Add Comment