ರಾಜಕೀಯ ಲಾಭ ಮರೆತು ಮೋದಿಯವರು ತೆಗೆದುಕೊಂಡ ಈ ನಿರ್ಧಾರಗಳೇ ೨೦೧೯ ರಲ್ಲಿ ಪುನರ್ ಆಯ್ಕೆಗೊಳ್ಳಲು ಕಾರಣ. ಏನು ದಿಟ್ಟ ನಿರ್ಧಾರಗಳು ಗೊತ್ತೇ?

ಮೋದಿ ಎಂದರೆ ಹಾಗೆ ನೋಡಿ ಅದೊಂದು ಹೆಸರಲ್ಲ ಅದೊಂದು ದೊಡ್ಡ ಅಲೆ. ಹೌದು ಅವರ ಹೆಸರಲ್ಲೇ ಏನೋ ಒಂದು ಶಕ್ತಿ ಇದೆ. Rss ಹಿನ್ನಲೆಯಿಂದ ಬಂದಿರುವ ಇವರ ಸಂಘಟನಾತ್ಮಕ ಶಕ್ತಿಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ಮೋದಿ ಕೇವಲ ಭಾರತದಲ್ಲೇ ಅಲ್ಲ ಇಡೀ ವಿಶ್ವದಲ್ಲೇ ತಮ್ಮ ಹೆಸರನ್ನು ಅಚ್ಚೊತ್ತಿ ಬಿಟ್ಟಿದ್ದಾರೆ. ಹೌದು ಭಾರತವನ್ನು ವಿಶ್ವಗುರು ಮಾಡಬೇಕು ಎಂಬ ಅವರ ಸಂಕಲ್ಪ ಇಡೇರಿಸುವತ್ತ ತಮ್ಮ ಹೆಜ್ಜೆ ಇಟ್ಟಿದ್ದಾರೆ.

2014 ರಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಮೋದಿ ಅವರು ಭಾರತದಲ್ಲಿ 70 ವರ್ಷಗಳ ಕಾಲ ಆಗಿದ್ದ ಮೈಲಿಗೆಯನ್ನು ಶುದ್ಧ ಮಾಡುವುದನ್ನು ದೊಡ್ಡ ಸವಾಲಾಗಿ ಸ್ವೀಕರಿಸಿ ಕೆಚ್ಚೆದೆಯ ಕೆಲ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಾರೆ. ಮುಂದಕ್ಕೆ ಈ ನಿರ್ಧಾರಗಳೇ ಅವರನ್ನು ಮತ್ತೊಮ್ಮೆ ಪ್ರಧಾನಿ ಪಟ್ಟದಲ್ಲಿ ಕೂರಿಸಿತು. ಹಾಗಾದರೆ ಅವರ ಆಡಳಿತ ಅವಧಿಯ ಆ ನಿರ್ಧಾರಗಳು ಯಾವುದು ತಿಳಿಯೋಣ. 1.ಬಾಲಕೊಟ್ ಮೇಲಿನ ಏರ್ ಸ್ಟ್ರೈಕ್ : ಭಾರತದ ಗಸ್ತು ವಾಹನದ ಮೇಲೆ ಸೂಸೈಡ್ ಬಾಂಬರ್ ಗಳ ದಾಳಿ ನಡೆದಿತ್ತು. ಇದಕ್ಕೆ ಉತ್ತರ ಎಂಬಂತೆ ಭಾರತೀಯ ವಾಯುಪಡೆ ಪಾಕಿಸ್ತಾನದ ಗಡಿ ಒಳಗೆ ಹೊಕ್ಕು ಏರ್ ಸ್ಟ್ರೈಕ್ ನಡೆಸಿತ್ತು. ಇದರಿಂದ ಉ-ಗ್ರ ನೆಲೆಗಳು ನಾಶ ವಾಗಿದ್ದವು.

2.ಬಡತನ ಆಧಾರಿತ ಮೀಸಲಾತಿ: ಮೀಸಲಾತಿ ಈ ಹಿಂದೆ ಇದ್ದದ್ದು ಬರಿ ಜಾತಿಗಳಿಗೆ ಮಾತ್ರ. ಹೌದು ಯಾವುದೇ ಸರ್ಕಾರಿ ಉದ್ಯೋಗ ಇರಲಿ ಅದರಲ್ಲಿ ಮೀಸಲಾತಿ ಇದ್ದೆ ಇರುತ್ತದೆ. ಜಾತಿ ಆಧಾರಿತ ಮೀಸಲಾತಿಯ ಜೊತೆಗೆ ಸಮಾಜದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವವರಿಗೂ 10% ಮೀಸಲಾತಿಯನ್ನು ಜಾರಿಗೆ ತಂದಿದ್ದರು. 3.ತ್ರಿವಳಿ ತಲಾಕ್ ನಿಷೇಧ: ಸಮಾಜದ ಅನಿಷ್ಟ ಪದ್ಧತಿ ಆಗಿದ್ದ ತ್ರಿವಳಿ ತಲಾಕ್ ಅನ್ನು ನಿಷೇಧ ಮಾಡುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ ತಪ್ಪಿಸಿದರು. ಇದಕ್ಕೆ ಕಾನೂನಾತ್ಮಕ ರಕ್ಷಣೆ ಕೊಟ್ಟರು.

4. ಆರ್ಟಿಕಲ್ 370 ರದ್ದು: ಅದೆಷ್ಟೋ ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಕೊಟ್ಟಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಅನ್ನು ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರ ಭಾರತದ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದರು. ಈ ಮೂಲಕ ಅಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುವಂತೆ ಮಾಡಿದರು. 5.CAA ಮತ್ತು NRC : bhaaratiya ನಾಗರಿಕರ ಹಿತ ರಕ್ಷಣೆಗಾಗಿ ಈ ಕಾನೂನು ಜಾರಿಗೆ ತಂದಿದ್ದು ಕೆಲ ರಾಜ್ಯಗಳು ಇದನ್ನು ಅಳವಡಿಸಿಕೊಂಡಿವೆ. ಮತ್ತೆ ಕೆಲವು ರಾಜ್ಯಗಳು ತಮ್ಮ ರಾಜಕೀಯ ಬೇಕೆ ಬೇಯಿಸಲು ಇದನ್ನು ವಿರೋಧಿಸುತ್ತವೆ. ಇದರ ಮುಖ್ಯ ಉದ್ದೇಶ ಅಕ್ರಮವಾಗಿ ಭಾರತದಲ್ಲಿ ಬಂದು ನೆಲೆಸಿರುವ ಜನರನ್ನು ಭಾರತದ ಗಡಿ ಆಚೆಗೆ ಕಳುಹಿಸುವುದು. ಇದರಿಂದ ಭಾರತದ ಸಂಪತ್ತು ಬರಿ ಭಾರತೀಯರಿಗೆ ಮಾತ್ರ ಸಿಗುತ್ತದೆ.

ಹೀಗೆ ಕೆಲವು ಗಟ್ಟಿ ನಿರ್ಧಾರಗಳು ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಮಾಡಲು ಸಹಕಾರಿ ಆಗಿದೆ. ಇದು ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಆಸೆಯಿಂದ ಮಾಡಿದ್ದಲ್ಲ. ಬದಲಾಗಿ ದೇಶದ ಹಿತ ರಕ್ಷಣೆಗಾಗಿ ಮಾಡಿದ್ದಾರೆ. ಇದನ್ನು ಅರಿತ ಜನ ಅವರನ್ನು ಮತ್ತೊಮ್ಮೆ ಜನ ಸೇವಕರನ್ನಾಗಿ ಆಯ್ಕೆ ಮಾಡಿದ್ದಾರೆ.

Comments (0)
Add Comment