ಮಿಸ್ ಆಗಿ ಲೀಕ್ ಆಯಿತು ನಯನತಾರ ರವರ ಆಸ್ತಿಯ ವಿವರ; ಬಂಗ್ಲೆ, ದುಬಾರಿ ಫ್ಲಾಟ್, ವಿಮಾನ ಇವೆಲ್ಲ ಎಷ್ಟು ಮೌಲ್ಯದ್ದು ಗೊತ್ತೇ??

ಮದುವೆಯಾದ ಬಳಿಕ ನಯನತಾರ ಬಹಳಷ್ಟು ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ನಯನತಾರ ಅವರು ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದು ಖ್ಯಾತಿ ಪಡೆದಿರುವ ನಟಿ. ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಸಹ ಇವರೇ ಆಗಿದ್ದಾರೆ. ನಯನತಾರ ಅವರಿಗೆ ಅವರದ್ದೇ ಆದ ಫ್ಯಾನ್ ಬೇಸ್, ಹಾಗೂ ಬೇಡಿಕೆ ಇಂದಿಗೂ ಚಿತ್ರರಂಗದಲ್ಲಿದೆ. ಬಹಳ ಕಷ್ಟಪಟ್ಟು ಈ ಮಟ್ಟಕ್ಕೆ ಏರಿದ್ದಾರೆ ನಟಿ ನಯನತಾರ. ಇದೀಗ ಇವರ ಆಸ್ತಿ ವಿವರಗಳ ಬಗ್ಗೆ ಕೆಲವು ವಿಚಾರಗಳು ಭಾರಿ ಸದ್ದು ಮಾಡುತ್ತಿದೆ..

ನಯನತಾರ ಅವರು ನಿರ್ದೇಶಕ ವಿಜ್ಞೇಶ್ ಶಿವನ್ ಅವರೊಡನೆ ಕೆಲವು ವರ್ಷಗಳ ಕಾಲ ಪ್ರೀತಿ ಮಾಡಿ, ಈ ವರ್ಷ ಜೂನ್ ತಿಂಗಳಿನಲ್ಲಿ ಮದುವೆಯಾದರು. ಈ ಜೋಡಿ ದೇಶ ವಿದೇಶಗಳಲ್ಲಿ ಕೈಕೈ ಹಿಡಿದು ಸುತ್ತುತ್ತಾ ಎಂಜಾಯ್ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ವಿಘ್ನೇಶ್ ಶಿವನ್ ಅವರ ಹುಟ್ಟುಹಬ್ಬ ಇತ್ತು, ಗಂಡನ ಹುಟ್ಟುಹಬ್ಬವನ್ನು ದುಬೈ ನಲ್ಲಿ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದರು ನಟಿ ನಯನತಾರ. ಮದುವೆಯ ಬಳಿಕ ಲೈಫ್ ಎಂಜಾಯ್ ಮಾಡುತ್ತಿರುವ ನಯನತಾರ ಅವರ ಆಸ್ತಿಯ ಡೀಟೇಲ್ಸ್ ಈಗ ಭಾರಿ ಸದ್ದು ಮಾಡುತ್ತಿದೆ. ನಯನತಾರ ಅವರು 165 ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರಂತೆ. ಅಷ್ಟೇ ಅಲ್ಲದೆ, ಅವರ ಬಳಿ ಪ್ರೈವೇಟ್ ಜೆಟ್ ಸಹ ಇದ್ದು, ಅದರ ಬೆಲೆ 20 ಕೋಟಿ ರೂಪಾಯಿ ಎನ್ನಲಾಗಿದೆ.

ಜೊತೆಗೆ ದೇಶದ ಹಲವು ನಗರಗಳಲ್ಲಿ ಅಪಾರ್ಟ್ಮೆಂಟ್ ಗಳನ್ನು ಹೊಂದಿದ್ದಾರಂತೆ ನಟಿ ನಯನತಾರ. ಹೈದರಾಬಾದ್ ನಲ್ಲಿ 2 ದುಬಾರಿ ಬೆಲೆಯ ಐಷಾರಾಮಿ ಬಂಗಳೆಗಳು ಇವೆಯಂತೆ. ಈ ವಿಚಾರಗಳು ಇನ್ಕಕಂ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಗೆ ನೀಡಿರುವ ವರದಿಯ ಮೂಲಕ ತಿಳಿದುಬಂದಿದೆ. ಪ್ರಸ್ತುತ ನಯನತಾರ ಅವರು ಒಂದು ಸಿನಿಮಾಗೆ 10 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅವರೊಡನೆ ನಟಿಸುತ್ತಿರುವ ಜವಾನ್ ಸಿನಿಮಾಗೆ 10 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ. ಸಧ್ಯಕ್ಕೆ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ನಂತರ ಚಿತ್ರರಂಗದಿಂದ ದೂರ ಉಳಿಯುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಅದರ ಬಗ್ಗೆ ಇನ್ನೂ ಖಚಿವಾದ ಮಾಹಿತಿ ಸಿಕ್ಕಿಲ್ಲ.

Comments (0)
Add Comment