ಸಚಿನ್ ತೆಂಡೂಲ್ಕರ್ ಭವಿಷ್ಯ. ಈ ನಾಲ್ಕು ತಂಡಗಳು ಆಡಲಿವೆ ಟಿ-೨೦ ವಿಶ್ವಕಪ್ ಸೆಮಿಫೈನಲ್. ಹೆಚ್ಚಿದ ಕುತೂಹಲ.

ಭಾರತ ಕ್ರಿಕೆಟ್ ತಂಡ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಉತ್ತಮ ಪ್ರದರ್ಶನ ನೀಡಿದೆ. ಗೆದ್ದು ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಅಕ್ಟೋಬರ್ ೨೩ ರಂದು ಪಾಕಿಸ್ತಾನ ದ ಎದುರು ಮೊದಲ ಪಂದ್ಯ ಆಡುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಂದುವರೆಸಲಿದೆ. ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಟಿ-೨೦ ವಿಶ್ವಕಪ್ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ. ನಾಲ್ಕು ತಂಡ ಈ ಬಾರಿಯ ಸೆಮಿಫೈನಲ್ ನಲ್ಲಿ ಪಾಲ್ಗೊಳ್ಳಲಿವೆ ಹಾಗು ಅದರ ಹೆಸರು ಕೂಡ ಹೇಳಿದ್ದಾರೆ.

ಟೆಲಿಗ್ರಾಫ್ ಎನ್ನುವ ಖಾಸಗಿ ಪತ್ರಿಕೆಗೆ ಸಂದರ್ಶನ ನೀಡುವ ಸಮಯದಲ್ಲಿ ಭಾರತ ಪಾಕಿಸ್ತಾನ ದ ಪಂದ್ಯದ ಬಗ್ಗೆಯೂ ಮಾತಾಡಿದ್ದಾರೆ. ಭಾರತ ನನ್ನ ನೆಚ್ಚಿನ ತಂಡವಾಗಿದೆ. ನನ್ನ ಹೃದಯದಲ್ಲೂ ಭಾರತ ಇದೆ. ಭಾರತ ಈ ಬಾರಿ ವಿಶ್ವಕಪ್ ಗೆಲ್ಲಬೇಕೆಂದು ಬಯಸುತ್ತೇನೆ. ಈ ಬಾರಿ ನಮ್ಮ ತಂಡ ಉತ್ತಮವಾಗಿದೆ. ಆಟಗಾರರು ಉತ್ತಮ ಫಾರ್ಮ್ ನಲ್ಲಿ ಕೂಡ ಇದ್ದಾರೆ. ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಭಾರತ ಚಾಂಪಿಯನ್ ಆಗಬೇಕೆಂದು ಬಯಸುತ್ತೇನೆ. ಆದರೆ ಭಾರತ ಬಿಟ್ಟರೆ ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗು ದಕ್ಷಿಣ ಆಫ್ರಿಕಾ ಈ ಸೆಮಿಫೈನಲ್ ತಲುಪ ಬಲ್ಲ ತಂಡಗಳಾಗಿವೆ ಎಂದು ಸಚಿನ್ ಅಭಿಪ್ರಾಯ ಪಟ್ಟಿದ್ದಾರೆ. ನಮ್ಮ ತಂಡದ ಬಗ್ಗೆ ಹೇಳಬೇಕೆಂದಿಲ್ಲ ನಮ್ಮ ತಂಡ ಉತ್ತಮ ಸಮತೋಲನದಲ್ಲಿದೆ. ಹಾಗೇನೇ ಈ ಬಾರಿ ಭಾರತ ಗೆಲ್ಲಬಹುದು ಎನ್ನುವ ಆಶಾವಾದ ಹೊಂದಿದ್ದೇನೆ ಎಂದು ತೆಂಡೂಲ್ಕರ್ ಈ ಸಮಯದಲ್ಲಿ ಹೇಳಿಕೊಂಡಿದ್ದಾರೆ.

ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ೬ ರನ್ ಗಳಿಂದ ಸೋಲಿಸಿತ್ತು. ಭಾರತ ಏಳು ವಿಕೆಟ್ ಕಳೆದುಕೊಂಡು ೧೮೬ ಗಳಿಸಿತ್ತು. ಭಾರತದ ಪರ ಕೆ ಎಲ್ ರಾಹುಲ್ ಅರ್ಧಶತ ಮಾಡಿದರೆ ಮಿಡ್ಲ್ ಆರ್ಡರ್ ಅಲ್ಲಿ ಸೂರ್ಯಕುಮಾರ್ ಅರ್ಧ ಶತಕ ಗಳಿಸಿದ್ದರು. ಇನ್ನು ಬೌಲಿಂಗ್ ವಿಭಾಗ ಅಷ್ಟೇನೂ ಸದ್ದು ಮಾಡಲಿಲ್ಲ, ಶಮಿ ಕೇವಲ ಒಂದು ಓವರ್ ಅಲ್ಲಿ ಹಾಗು ಕೊನೆ ಓವರ್ ಅಲ್ಲಿ ಕೇವಲ ನಾಲ್ಕು ರನ್ ನೀಡಿ ಮೂರೂ ವಿಕೆಟ್ ಪಡೆದರು. ಆಸ್ಟ್ರೇಲಿಯಾ ಪರ ಅರೋನ್ ಪಿಂಚ್ ೫೪ ಬಾಲ್ ಗಳಲ್ಲಿ ೭೬ ರನ್ ಗಳಿಸಿ ತಂಡವನ್ನು ಮೇಲಕೆತ್ತಲು ಪ್ರಯತ್ನಿಸಿದ್ದರು.

sachin tendulkart-20 worldcupvirat kohli
Comments (0)
Add Comment