Business

PMAY: 3 ಷರತ್ತುಗಳನ್ನು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಿಂದ ತೆಗೆಯಲಾಗಿದ್ದು, ಈ ಯೋಜನೆಯ ಲಾಭ ಇನ್ನು ಸುಲಭವಾಗಿ ಪಡೆಯಬಹುದು.

ಪ್ರತಿ ಒಬ್ಬರಿಗೂ ತಮ್ಮದೇ ಸ್ವಂತ ಮನೆ ಹೊಂದಿರಬೇಕು ಎನ್ನುವ ಕನಸಿದೆ. ಇದನ್ನು ನನಸು ಮಾಡಲು ಅನೇಕರು ಕಷ್ಟಪಡುತ್ತಿದ್ದಾರೆ. ಹಣವನ್ನು ಉಳಿತಾಯ ಮಾಡಿ ಕೆಲವರು ಮನೆ ಕಟ್ಟಿದ್ದರೆ, ಇನ್ನು ಕೆಲವರು ಸಾಲ ಮಾಡಿಯಾದರೂ ಮನೆ ಕಟ್ಟುತ್ತಾರೆ. ಎಷ್ಟೋ ಜನರಿಗೆ ಸ್ವಂತ ಮನೆ ಕಟ್ಟುವ ಸಾಮರ್ಥ್ಯ ಇಲ್ಲದೆ ಹೋಗುತ್ತದೆ. ಅಂತಹ ಜನರಿಗೆ ಸರಕಾರ ಆವಾಸ್ ಯೋಜನೆ (PMAY) ಜಾರಿಗೆ ತಂದಿದೆ.

ಈ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY) ಕೆಲ ಷರತ್ತುಗಳೊಂದಿಗೆ ರೂಪಿಸಲ್ಪಟ್ಟಿದೆ. ಈ ಷರತ್ತುಗಳನ್ನು ಪೂರ್ಣಗೊಳಿಸಿದರೆ ಮಾತ್ರ ಈ ಯೋಜನೆಯ ಲಾಭ ಜನ ಸಾಮಾನ್ಯರು ಪಡೆಯಬಹುದಾಗಿದೆ. ಈ ಶರತ್ತುಗಳಲ್ಲಿ ಇದೀಗ ಸ್ವಲ್ಪ ಹಿಡಿತ ಕಡಿಮೆ ಮಾಡಿದ್ದು, 3 ಶರತ್ತುಗಳಲ್ಲಿ ಬದಲಾವಣೆ ಮಾಡಿದೆ. ಇದರಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಈ ಷರತ್ತುಗಳು ಯಾವುವು?

ಈ ಹಿಂದೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY) ಪಡೆಯಲು ಒಟ್ಟಾರೆ 13 ಶರತ್ತುಗಳಿದ್ದವು. ಈ ಷರತ್ತುಗಳು ಒಪ್ಪಿಗೆಯಾದರೆ ಮಾತ್ರ ಈ ಯೋಜನೆ ಲಾಭ ಸಿಗುತ್ತಿತ್ತು. ಇವುಗಳಲ್ಲಿ 3 ನ್ನು ಸಡಿಲಗೊಳಿಸಲಾಗಿದೆ. ಮೊದಲನೆಯದು ಕನಿಷ್ಠ ಮಾಸಿಕ ಆಧಾಯ. ಈ ಹಿಂದೆ ಸರಕಾರ ಕನಿಷ್ಠ ಮಾಸಿಕ ಆಧಾಯ 10,000 ಕ್ಕೆ ಸೀಮಿತ ಮಾಡಿತ್ತು. ಇದು ಇವಾಗ ಬದಲಾಗಿ 15,000 ಕ್ಕೆ ಏರಿಕೆ ಮಾಡಲಾಗಿದೆ.

ಮೊದಲು ದ್ವಿಚಕ್ರ ವಾಹನ ಅಥವಾ ಮೀನುಗಾರಿಕೆ ದೋಣಿ ಇದ್ದವರಿಗೆ ಈ ಯೋಜನೆ ಲಾಭ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಈ ಷರತ್ತಿನಲ್ಲಿ ಬದಲಾವಣೆ ಮಾಡಿ ಇನ್ನು ಮುಂದೆ ದ್ವಿಚಕ್ರ ವಾಹನ ಇದ್ದರು ಕೂಡ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಲಾಭ ಪಡೆಯಬಹುದಾಗಿದೆ.

ಇನ್ನು ಮೂರನೆಯದು, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ (PMAY) ಸಮೀಕ್ಷೆಗೆ ಕೊನೆಯ ದಿನಾಂಕ ಏಪ್ರಿಲ್ 30 2025 ಕ್ಕೆ ನಿಗದಿ ಪಡಿಸಲಾಗಿತ್ತು. ಇದೀಗ ಇದನ್ನು ವಿಸ್ತರಣೆ ಮಾಡಲಾಗಿದೆ. ಏಪ್ರಿಲ್ 30 ರ ಬದಲಿಗೆ ಮೇ 15 2025 ಕ್ಕೆ ಕೊನೆ ದಿನವೆಂದು ಘೋಷಣೆ ಮಾಡಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಮೇ 15 ರೊಳಗೆ ಸಲ್ಲಿಸಬಹುದಾಗಿದೆ.

ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *