Reservation: ಸರ್ಕಾರದಿಂದ ಮಹಿಳೆಯರಿಗೆ ಉದ್ಯೋಗಗಳಲ್ಲಿ 35% ಮೀಸಲಾತಿ – ಸ್ಥಳೀಯರಿಗೆ ಮಾತ್ರ ಲಾಭ
ಬಿಹಾರ ಸರ್ಕಾರ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ – ಇದೀಗ ಸ್ಥಳೀಯ ಮಹಿಳೆಯರಿಗೆ ಮಾತ್ರ ಸರ್ಕಾರಿ ಉದ್ಯೋಗಗಳಲ್ಲಿ 35% ಮೀಸಲಾತಿ (Reservation) ಅನ್ವಯವಾಗಲಿದೆ. ಇತರೆ ರಾಜ್ಯಗಳ ಮಹಿಳಾ ಅಭ್ಯರ್ಥಿಗಳಿಗೆ ಇದು ಹಿನ್ನಡೆಯಾಗಿದ್ದರೆ, ಬಿಹಾರದ ಮಹಿಳೆಯರಿಗೆ ಈ ತೀರ್ಮಾನ ಭವಿಷ್ಯ ನಿರ್ಮಾಣದ ದೊಡ್ಡ ಹಂತವಾಗಿದೆ. ಇದೇ ವೇಳೆ, ಬಿಹಾರ ಯುವ ಆಯೋಗ ರಚನೆಯ ಮೂಲಕ ಯುವಕರಿಗೆ ಉದ್ಯೋಗ ಮತ್ತು ತರಬೇತಿಯ ಅವಕಾಶಗಳೂ ಒದಗಿಸಲಿವೆ. ವಿಕಲಚೇತನರಿಗೂ UPSC, BPSC ಮುಖ್ಯ ಪರೀಕ್ಷೆ ಸಿದ್ಧತಿಗೆ ₹50,000 ಪ್ರೋತ್ಸಾಹಧನ ಘೋಷಿಸಲಾಗಿದೆ.