ಒಂದು ವರ್ಷದಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ಇಷ್ಟು ನಗದು ಹಣವನ್ನು ಜಮಾ ಮಾಡಿದರೆ ನಿಮಗೆ ಇನ್ಕಮ್ ಟ್ಯಾಕ್ಸ್ ಇಂದ ನೋಟೀಸ್ ಬರುವ ಸಾಧ್ಯತೆ ಇದೆ.
ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹೆಚ್ಚುವರಿ ನಗದು ಜಮಾವಣೆ (Cash deposite) ಮಾಡುತ್ತಿದ್ದೀರಾ? ನೀವು ಈ ಬಗ್ಗೆ ಕಾಳಜಿ ವಹಿಸದಿದ್ದರೆ ನಿಮಗೆ ತೆರಿಗೆ ಇಲಾಖೆ (Income Tax) ಇಂದ ನೋಟೀಸ್ ಬರುವ ಎಲ್ಲ ಸಾಧ್ಯತೆ ಕೂಡ ಇದೆ. ಒಂದು ವರ್ಷದಲ್ಲಿ ನಿಮ್ಮ ಉಳಿತಾಯ ಖಾತೆಗೆ (Saving Account) 10 ಲಕ್ಷಕ್ಕೂ ಹೆಚ್ಚು ನಗದು ಹಣ ಜಮಾವಣೆ ಮಾಡಿದರೆ ನೀವು ಕಾನೂನಿನ ತೊಂದರೆಗೆ ಸಿಲುಕುತ್ತೀರಿ. ತೆರಿಗೆ ಇಲಾಖೆ ಇಂದ ನೋಟೀಸ್ ಬರುತ್ತದೆ ಹಾಗು ನೀವು ನೀಡುವ ಪ್ರತಿ ಉತ್ತರಕ್ಕೆ ಪ್ರಶ್ನೆಗಳ ಸರಮಾಲೆ ಶುರುವಾಗುತ್ತದೆ. ಹಾಗೇನೇ ಪ್ರತಿ ಉತ್ತರಕ್ಕೂ ಪುರಾವೆಗಳನ್ನು ನೀವು ನೀಡಬೇಕಾಗುತ್ತದೆ.
ನೀವು ನೀಡುವ ಉತ್ತರ ಸರಿ ಆಗದೆ ಇದ್ದಾರೆ ಹಾಗೇನೇ ನೀಡಿದ ಉತ್ತರಕ್ಕೆ ಸರಿಯಾದ ಪುರಾವೆಗಳು ಸಿಗದೇ ಇದ್ದರೆ ಕಾನೂನಿನ ಕುಣಿಕೆ ನಿಮ್ಮ ವಿರುದ್ಧ ಬಿಗಿಯಾಗುತ್ತದೆ. ನಿಮ್ಮ ಎಲ್ಲ ಖಾತೆಗಳನ್ನ ತೆರಿಗೆ ಇಲಾಖೆ ಸ್ಟಾಗಿಸಗೊಳಿಸಬಹುದು. ಹಾಗೇನೇ ಜೈಲಿಗೆ ಹೋಗುವ ಪ್ರಮೇಯ ಕೂಡ ಬರುತ್ತದೆ. ಆದ್ದರಿಂದ ನೀವು ನಿಮ್ಮ ಖಾತೆಗೆ ನಗದು ದೊಡ್ಡ ಪ್ರಮಾಣದಲ್ಲಿ ಜಮಾವಣೆ ಮಾಡುವುದಾದರೆ ನೀವು ಸರಿಯಾದ ದಾಖಲೆ ಗಳನ್ನೂ ಹೊಂದಿರುವುದು ಬಹಳ ಮುಖ್ಯವಾಗಿದೆ. ಇಲ್ಲದೆ ಹೋದರೆ ಜಮಾವಣೆ ಆದ ನಗದು ತೆರಿಗೆ ಗೆ ಒಳಪಡುವ ಆಧಾಯ ಅಲ್ಲ ಎಂದು ಸಾಭೀತಾಗುತ್ತದೆ.
ನಿಮ್ಮ ಖಾತೆಗೆ ನಗದು ಜಮಾ ಮಾಡಿದ ಒಂದು ವರ್ಷದ ನಂತರ ನಗದು ಮಿತಿ 10 ಲಕ್ಷಕ್ಕಿಂತ ಮೀರಿದರೆ ಆಧಾಯ ತೆರಿಗೆ ಇಲಾಖೆ ನಿಮ್ಮನ್ನು ಪ್ರಶ್ನಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಒಂದು ವ್ಯಕ್ತಿ ಇಂದ ನಿಮಗೆ ಒಂದೇ ದಿನದಲ್ಲಿ 2 ಲಕ್ಷಕ್ಕಿಂತ ಹೆಚ್ಚು ನಗದು ಠೇವಣಿ ಇಟ್ಟರೆ ಕೂಡ ನೀವು ನೋಟೀಸ್ ಗೆ ಉತ್ತರ ಕೊಡಬೇಕಾಗುತ್ತದೆ. ಆದ್ದರಿಂದ ನಗದು ವ್ಯವಹಾರದಲ್ಲಿ ಸ್ವಲ್ಪ ಜಾಗ್ರತೆ ಇಂದ ಇರುವುದು ಉತ್ತಮ.