Trending

Apaar Card ಎಂದರೇನು? ಪೋಷಕರು ತಮ್ಮ ಮಕ್ಕಳ ಈ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಅರ್ಜಿ ಸಲ್ಲಿಸಲು ಇಲ್ಲಿದೆ ನಂ.1 ವಿಧಾನ.

ನೀವು Apaar Card ಬಗ್ಗೆ ಕೇಳಿರಬಹುದು. ಹೊಸ ಶಿಕ್ಷಣ ನೀತಿಯಲ್ಲಿ (New Education Policy) ಇದನ್ನು ಪರಿಚಯಿಸಲಾಗಿದೆ. Apaar ಒಂದು ವಿಶಿಷ್ಟ ಗುರುತಿನ ಚೀಟಿಯಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಧಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಣೆ ಮಾಡಿ ಇಡಬಹುದು. ಎಲ್ಲ ವಿದ್ಯಾರ್ಥಿಗಳು ಈ ಕಾರ್ಡ್ ಪಡೆಯುವುದು ಅವಶ್ಯಕವಾಗಿದೆ. ಶಾಲೆಗಳಲ್ಲಿ ಈ ಗುರುತಿನ ಚೀಟಿ ಮಾಡಲಾಗುತ್ತದೆ.

ಇದು ವಿದ್ಯಾರ್ಥಿಗಳು ತಮ್ಮ ಧಾಖಲಾತಿ ಸಮಯದಲ್ಲಿ ಸುಲಭವಾಗಿ ಬಳಸಬಹುದು. ಈ ಗುರುತಿನ ಚೀಟಿಯಲ್ಲಿ ಮಕ್ಕಳ ಎಲ್ಲ ಶೈಕ್ಷಣಿಕ ಧಾಖಲೆ ಅಂದರೆ ಅಂಕ, ತರಗತಿ ಅದೇ ಅಲ್ಲದೆ ಪಡೆದ ಪ್ರಶಸ್ತಿ ಹಾಗು ಪುರಸ್ಕಾರ, ಮಕ್ಕಳ ಎತ್ತರ, ಅರೋಗ್ಯ ವಿವರಗಳು ತೂಕದ ಬಗೆಗೂ ಮಾಹಿತಿ ಈ Apaar Card ಅಲ್ಲಿ ಸಿಗುತ್ತದೆ. ಆದ್ದರಿಂದ ಈ ಕಾರ್ಡ್ ಮಾಡಿಸಲು ಪೋಷಕರ ಅನುಮತಿ ಕಡ್ಡಾಯವಾಗಿ ಇರಲೇಬೇಕು. ಇದನ್ನು ಆನ್ಲೈನ್ ಅಲ್ಲಿ ಹೇಗೆ ಮಾಡುವುದು ಎಂದು ಇಂದು ನಾವು ನಿಮಗೆ ತಿಳಿಸುತ್ತೇವೆ.

ಈ Apaar Card ಪಡೆಯುವುದು ಹೇಗೆ? ಮೊದಲನೆಯದಾಗಿ ನೀವು Apaar ಅಧಿಕೃತ ವೆಬ್ಸೈಟ್ https://apaar.education.gov.in/ ಗೆ ಹೋಗಬೇಕಾಗುತ್ತದೆ. ಇಲ್ಲಿ ಸಂಪನ್ಮೂಲಗಳು ವಿಭಾಗಕ್ಕೆ ಹೋಗಿ Apaar ಪೋಷಕರ ಸಮ್ಮತಿ ಅರ್ಜಿ ಡೌನ್ಲೋಡ್ ಮಾಡಿಕೊಳ್ಳಬೇಕು. ಇದರಲ್ಲಿ ಎಲ್ಲ ವಿವರಗಳನ್ನು ಭರ್ತಿ ಮಾಡಿದ ನಂತರ ಈ ಅರ್ಜಿಯನ್ನು ನಿಮ್ಮ ಮಕ್ಕಳು ಅಧ್ಯಯನ ಮಾಡುವ ಶಾಲೆಗೆ ಕಲಿಸಬೇಕು. ಸರಕಾರಿ ವೆಬ್ಸೈಟ್ ಅಧಿಕೃತ ಮಾಹಿತಿ ಪ್ರಕಾರ ಇಲ್ಲಿಯವರೆಗೂ 31 ಕೋಟಿ ಗು ಅಧಿಕ ಮಕ್ಕಳು Apaar card ID ಗಾಗಿ ನೊಂದಾವಣೆ ಮಾಡಿಕೊಂಡಿದ್ದಾರೆ.

apaar card
pic credit times now news

ಇದೆಲ್ಲ ಆದ ನಂತರ ನೀವು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಅಕಾಡೆಮಿಕ್ ಬ್ಯಾಂಕ್ ಒಫ್ ಕ್ರೆಡಿಟ್ (ABC) https://www abc.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕು. ಇಲ್ಲಿ ಮೇಲಿನ ಬಲಭಾಗದಲ್ಲಿ ಕಾಣುವ ನನ್ನ ಖಾತೆ ವಿಭಾಗದ ಮೇಲೆ ಕ್ಲಿಕ್ ಮಾಡಿ. ವಿದ್ಯಾರ್ಥಿ ಆಯ್ಕೆಯನ್ನು ಆರಿಸಿ. ಇದಾದ ನಂತರ ಇದನ್ನು ಡಿಜಿಲಕೇರ್ ನಲ್ಲಿ ನೊಂದಾವಣೆ ಮಾಡಬೇಕಾಗುತ್ತದೆ. ಇದನ್ನು ಮಾಡಲು ಮಕ್ಕಳ ಆಧಾರ್ ನಂಬರ್ ಹಾಗು ಇತರ ವಿವರಗಳನ್ನು ಹಾಕಬೇಕಾಗುತ್ತದೆ. ಇಲ್ಲಿ KYC ಪರಿಶೀಲನೆ ನಡೆಸಲಾಗುತ್ತದೆ. ಇದಕ್ಕಾಗಿ ಮಕ್ಕಳ ಆಧಾರ್ ಮಾಹಿತಿ ಹಾಗು ಶಾಲೆಗಳ ಹೆಸರು ಶೈಕ್ಷಣಿಕ ಮಾಹಿತಿ ಹಾಗು ಇನ್ನಿತರ ಮಾಹಿತಿ ನೀಡಬೇಕಾಗುತ್ತದೆ. ಇಷ್ಟೆಲ್ಲಾ ಮಾಡಿದ ನಂತರ ನಿಮ್ಮ ಮಕ್ಕಳ Apaar Card ತಯಾರಾಗುತ್ತದೆ.

ಇದನ್ನು ಮೇಲೆ ಹೇಳಿದ ಹಾಗೆ ABC ವೆಬ್ಸೈಟ್ ಮೂಲಕ ಲಾಗಿನ್ ಆಗಿ ನಿಮ್ಮ ಡ್ಯಾಶ್ ಬೋರ್ಡ್ ನಲ್ಲಿ ಕಾಣಸಿಗುವ Apaar Card ಡೌನ್ಲೋಡ್ ಆಯ್ಕೆ ಮಾಡಬೇಕು. ನಂತರ ನಿಮ್ಮ ಮಕ್ಕಳ ಡಿಜಿಟಲ್ ಕಾರ್ಡ್ ನಿಮ್ಮ ಕೈಗೆ ಸಿಗುತ್ತದೆ. ಈ ಕಾರ್ಡ್ ಮಾಡಿಸುವುದು ಕಡ್ಡಾಯವಲ್ಲ. ದೇಶದ ಅನೇಕ ಶಾಲೆಗಳು ಇದನ್ನು ಮಾಡಲು ಪ್ರೋತ್ಸಾಹಿಸುತ್ತಿದೆ. ಇದನ್ನು ಮಾಡಿಸುವುದರಿಂದ ಅನೇಕ ಪ್ರಯೋಜನಗಳಿವೆ. ವಿಶೇಷವಾಗಿ ಧಾಖಲೆಗಳು ಡಿಜಿಟಲ್ ರೂಪದಲ್ಲಿ ಇರುತ್ತದೆ. ಹೊಸ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ಇದು ಸಹಾಯವಾಗುತ್ತದೆ. ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ಮಾಹಿತಿ ಹೊಂದಿರುವುದರಿಂದ ಇದು ಯಾವಾಗಲು ಉಪಯೋಗಕ್ಕೆ ಬರುತ್ತದೆ.

Leave a Reply

Your email address will not be published. Required fields are marked *