Income Tax: ಇನ್ನು ಮುಂದೆ ನಿಮಗೆ ತಿಳಿಸದೇ ತೆರಿಗೆ ಇಲಾಖೆ ನಿಮ್ಮ ಸಾಮಾಜಿಕ ಜಾಲತಾಣ ಹಾಗು ಇಮೇಲ್ ಬಳಸಬಹುದು. ಕಾರಣ ತಿಳಿಯಿರಿ.
ದೇಶದಲ್ಲಿ ತೆರಿಗೆ ವಂಚನೆ ನಿಲ್ಲಿಸುವ ಬಗ್ಗೆ ಕೇಂದ್ರ ಸರಕಾರ ಗಂಭೀರ ಆಲೋಚನೆ ಮಾಡಿದೆ. ಇದಕ್ಕಾಗಿಯೇ ಹಲವಾರು ಕ್ರಮಗಳನ್ನು ಪ್ರತಿವರ್ಷ ತೆಗೆದುಕೊಳ್ಳುತ್ತಿದೆ. ಆದರೆ ಮುಂದಿನ ವರ್ಷ ಆದಾಯ ತೆರಿಗೆ ಇಲಾಖೆಗೆ ಇನ್ನು ಹೆಚ್ಚಿನ ಅಧಿಕಾರ ಸಿಗಲಿದೆ. ಏಪ್ರಿಲ್ 1,2026 ರಿಂದ ಆದಾಯ ತೆರಿಗೆ (Income tax) ಇಲಾಖೆಯು ನಿಮ್ಮ ಸಾಮಾಜಿಕ ಜಾಲತಾಣ, ಇಮೇಲ್, ಬ್ಯಾಂಕ್ ಖಾತೆಗಳು, ಹೂಡಿಕೆ ಖಾತೆಗಳು, ಬಿಸಿನೆಸ್ ಖಾತೆಗಳು ಗಳನ್ನೂ ಹುಡುಕುವ ಕಾನೂನು ಬದ್ದ ಹಕ್ಕನ್ನು ಪಡೆಯಲಿದೆ. ಒಂದು ವೇಳೆ ನೀವು ತೆರಿಗೆ ಪಾವತಿ ತಪ್ಪಿಸಿದ್ದೀರಿ ಎಂದು ಆದಾಯ ಇಲಾಖೆ ಗೆ ಅನುಮಾನ ವಿದ್ದರೆ ಮಾತ್ರ ಈ ನಡೆ ಕೈಗೊಳ್ಳಲಿದೆ.
ಎಕನಾಮಿಕ್ಸ್ ಟೈಮ್ಸ್ ಪ್ರಕಾರ ನಿಮ್ಮ ಬಳಿ ಘೋಷಣೆ ಮಾಡದ ಆಸ್ತಿ, ಆದಾಯ, ಹಣ, ಚಿನ್ನ, ಆಭರಣ ಹಾಗು ಇನ್ನಿತರ ಯಾವುದೇ ಬೆಲೆಬಾಳುವ ವಸ್ತು ಗಳಿದ್ದರೆ, ನೀವು ಅದರ ಮೇಲೆ ಆದಾಯ ತೆರಿಗೆ ಕಾನೂನು ಪ್ರಕಾರ ತೆರಿಗೆ ಕಟ್ಟದೆ ಹೋದರೆ, ಅಂತಹ ಪರಿಸ್ಥಿತಿಯಲ್ಲಿ ಆದಾಯ ಇಲಾಖೆ (Income tax) ನಿಮ್ಮ ಎಲ್ಲ ಸಾಮಾಜಿಕ ಜಾಲತಾಣ ಅಲ್ಲದೆ ಮೇಲೆ ಹೇಳಿದಂತೆ ಎಲ್ಲ ಖಾತೆಗಳನ್ನು ತೆರೆದು ಹುಡುಕುವ ಅವಕಾಶವಿದೆ.

ಪ್ರತಿ ವರ್ಷ 8.97 ಕೋಟಿ ಜನರು ಆದಾಯ ತೆರಿಗೆ ಫೈಲ್ ಮಾಡುತ್ತಾರೆ. ಇದರಲ್ಲಿ ಕೇವಲ 1% ಜನರಿಗಷ್ಟೇ ಆದಾಯ ಇಲಾಖೆಯಿಂದ ನೋಟೀಸ್ ಬರುತ್ತಿದೆ. ಪ್ರತಿ ವರ್ಷ ಸರಾಸರಿ 100-150 ರೇಡ್ ಗಳು ನಡೆಯುತ್ತದೆ. ಇಂತಹ ಸಮಯದಲ್ಲಿ ಈ ಕಾನೂನಿನನ್ವಯ ಡಿಜಿಟಲ್ ಟೆಕ್ನಾಲಜಿ ಬಳಸುವ ಅಧಿಕಾರ ಇದೀಗ ಆದಾಯ ತೆರಿಗೆ (Income tax) ಪಡೆದುಕೊಂಡಿದೆ. ಈ ಆಕ್ಸೆಸ್ ಕೇವಲ ಸಂಶಯದಡಿ ಮಾತ್ರ ಮಾಡಲಾಗುತ್ತದೆ. ಬೇರೆ ಯಾವುದೇ ಸಮಯದಲ್ಲಿ ನಿಮ್ಮ ಸಾಮಾಜಿಕ ಜಾಲತಾಣಗಳನ್ನು, ಇಮೇಲ್ ನೋಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.